ಗದಗ ಎಇಇ ಮೊಬೈಲ್‌ ಹೈದ್ರಾಬಾದಲ್ಲಿ ಸ್ವಿಚಾಫ್‌

Published : Sep 28, 2026, 05:33 AM IST
Gadag KRIDL AEE missing

ಸಾರಾಂಶ

ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಗದಗ ಉಪವಿಭಾಗದ ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್‌) ಫರ್ವೇಜ್ ಧಾರವಾಡ ಅವರ ಮೊಬೈಲ್‌ನ ಅಂತಿಮ ಲೊಕೇಶನ್‌ ಹೈದರಾಬಾದ್‌ನಲ್ಲಿ ಟ್ರೇಸ್

​ಗದಗ : ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್) ಗದಗ ಉಪವಿಭಾಗದ ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್‌) ಫರ್ವೇಜ್ ಧಾರವಾಡ ಅವರ ಮೊಬೈಲ್‌ನ ಅಂತಿಮ ಲೊಕೇಶನ್‌ ಹೈದರಾಬಾದ್‌ನಲ್ಲಿ ಟ್ರೇಸ್ ಆಗಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಅನುದಾನದ ಕೊರತೆ

ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಅನುದಾನದ ಕೊರತೆ ಹಾಗೂ ಗುತ್ತಿಗೆದಾರರ ಕಿರುಕುಳ ಮತ್ತು ಇಲಾಖೆಯ ತೀವ್ರ ಒತ್ತಡಕ್ಕೆ ಬೇಸತ್ತು ಡೆತ್‌ ನೋಟ್ ಬರೆದಿಟ್ಟು ಫರ್ವೇಜ್ ಅವರು ಸೆ.14ರಿಂದ ನಾಪತ್ತೆಯಾಗಿದ್ದಾರೆ. ಸೆ.16ರಂದು ಅವರ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಪತ್ತೆಗಾಗಿ ಗದಗ ಡಿವೈಎಸ್‌ಪಿ ಮೇಲ್ವಿಚಾರಣೆಯಲ್ಲಿ 5 ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ. ಈ ಮಧ್ಯೆ, ಫರ್ವೇಜ್ ಅವರ ಮೊಬೈಲ್‌ನ ಅಂತಿಮ ಲೊಕೇಶನ್‌ ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ. ಬಳಿಕ, ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಎರಡು ತಂಡಗಳು ಹೈದರಾಬಾದ್‌ಗೆ ತೆರಳಿದ್ದು, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಅವರಿಗಾಗಿ ಹುಡುಕಾಟ ಆರಂಭಿಸಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದೇ ವೇಳೆ, ವಿಶೇಷ ತಾಂತ್ರಿಕ ತಂಡವು ಮೊಬೈಲ್ ಕರೆಗಳ ವಿವರ (ಸಿಡಿಆರ್), ನೆಟ್‌ವರ್ಕ್ ಲೊಕೇಶನ್ ಆಧಾರದ ಮೇಲೆ ತನಿಖೆ ಮುಂದುವರಿಸಿದೆ. ಮೊಬೈಲ್‌ ಸ್ವಿಚ್ಡ್‌ ಆಫ್ ಆಗುವುದಕ್ಕೂ ಮೊದಲು ಅವರು ಯಾರಿಗೆ ಕರೆ ಮಾಡಿದ್ದರು, ಕೊನೆಯ ಕ್ಷಣಗಳಲ್ಲಿ ಎಲ್ಲೆಲ್ಲಿ ಓಡಾಡಿದ್ದರು ಎಂಬುದರ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯ ಪೊಲೀಸರು ಅವರ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದು, ಹಾವೇರಿಯಲ್ಲಿರುವ ಪತ್ನಿಯ ತವರು ಮನೆ ಹಾಗೂ ಆಪ್ತರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ, ಬೆಂಗಳೂರಿನಲ್ಲಿರುವ ತಂಡ ಕೆಆರ್‌ಐಡಿಎಲ್ ಮುಖ್ಯ ಕಚೇರಿ ಹಾಗೂ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಸೆ.13ರಂದು ಗದಗದಿಂದ ಹಂಪಿ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣಿಸಿದ್ದ ಫರ್ವೇಜ್, ಸೆ.14ರಂದು ಬೆಂಗಳೂರು ತಲುಪಿದ್ದು ದೃಢಪಟ್ಟಿದೆ. ಆನಂತರ ಅವರು ಎಲ್ಲಿಗೆ ತೆರಳಿದರು ಎಂಬುದನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಮತ್ತೊಂದೆಡೆ, ಫರ್ವೇಜ್ ಅವರ ಮನೆಯಲ್ಲಿ ಒಂದು ಹಾಗೂ ಕಚೇರಿಯ ಡೈರಿಯಲ್ಲಿ ಮತ್ತೊಂದು ಡೆತ್‌ನೋಟ್ ಸಿಕ್ಕಿದ್ದು, ಕರ್ತವ್ಯದ ಸ್ಥಳದಲ್ಲಿ ಅವರ ಮೇಲಿದ್ದ ಒತ್ತಡದ ಕುರಿತಾಗಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಫರ್ವೇಜ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಮಹತ್ವದ ಸುಳಿವು ಸಿಕ್ಕಿದೆ. ಅದರ ಆಧಾರದಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.

- ಮಿಥುನ್ ಎಚ್.ಎನ್., ಎಸ್ಪಿ ಗದಗ.

- 5 ತಂಡ ರಚಿಸಿ ಗದಗ ಪೊಲೀಸರಿಂದ ತನಿಖೆ

- ಡೆತ್‌ನೋಟ್‌ ಬರೆದಿಟ್ಟು ಸೆ.14ರಿಂದ ನಾಪತ್ತೆಯಾಗಿರುವ ಎಇಇ ಫರ್ವೇಜ್‌ ಧಾರವಾಡ

- ಅವರ ಮೊಬೈಲ್‌ ಈಗ ಸ್ವಿಚಾಫ್‌ ಆಗಿದೆ. ಕೊನೆಯ ಲೊಕೇಶನ್‌ ಹೈದರಾಬಾದ್‌ನಲ್ಲಿ ಪತ್ತೆ

- ಹೈದರಾಬಾದ್‌ಗೆ ತೆರಳಿರುವ ಪೊಲೀಸರ ತಂಡ ಸ್ಥಳೀಯರಿಂದ ಮಾಹಿತಿ ಪಡೆದು ಶೋಧ

- ಅಧಿಕಾರಿಯ ಬ್ಯಾಂಕ್‌ ವಹಿವಾಟು ಪರಿಶೀಲಿಸುತ್ತಿರುವ ಪೊಲೀಸ್‌ ತನಿಖಾ ತಂಡಗಳು

PREV
Stay updated with the latest news from Gadag district (ಗದಗ ಸುದ್ದಿ) — covering local developments, civic issues, politics, culture, heritage, crime, and community stories. Get timely headlines, in-depth reporting and district-level updates from Gadag via Kannada Prabha.
Read more Articles on

Recommended Stories

ಮನುಕುಲದ ಆರೋಗ್ಯವೇ ಔಷಧ ತಜ್ಞರ ಸೇವೆಯ ಗುರಿಯಾಗಲಿ: ಶ್ರೀಗಳು
ರಂಗಭೂಮಿಗೆ ಪಿ. ಗಂಗಾಧರಸ್ವಾಮಿ ಕೊಡುಗೆ ಅಪಾರ: ಡಾ. ನಿಂಗು ಸೊಲಗಿ