ಶಿವಕುಮಾರ ಕುಷ್ಟಗಿ
ಕಳೆದ 5 ವರ್ಷಗಳಲ್ಲಿ ಗದಗ ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಸಂಭವಿಸಿದ 1592 ಅಪಘಾತಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರೆ ಇನ್ನೂ ಹಲವರು ಶಾಶ್ವತ ಅಂಗವೈಕಲ್ಯವನ್ನು ಅನುಭವಿಸುತ್ತ ನಿತ್ಯವೂ ನೂರಾರು ತಾಯಂದಿರ ಆಕ್ರಂದನ, ಪತ್ನಿಯರ ಮಾಂಗಲ್ಯ ಭಾಗ್ಯದ ಅಂತ್ಯ ಮತ್ತು ಮಕ್ಕಳ ಅನಾಥ ಸ್ಥಿತಿಯ ಕರುಣಾಜನಕ ಕಥೆಗಳಾಗಿ ಉಳಿದಿವೆ. ಅತಿ ವೇಗ, ಮೋಜು ಮತ್ತು ಕ್ಷಣಿಕ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತಗಳು ನೂರಾರು ಮನೆಗಳ ದೀಪವನ್ನು ಶಾಶ್ವತವಾಗಿ ಆರಿಸಿಬಿಟ್ಟಿವೆ.
ಜಿಲ್ಲಾ ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2021ರಿಂದ 2025ರ ಡಿಸೆಂಬರ್ ವರೆಗೆ ಜಿಲ್ಲೆಯಲ್ಲಿ ಒಟ್ಟು 1592 ರಸ್ತೆ ಅಪಘಾತಗಳು ಸಂಭವಿಸಿದ್ದು, 824 ಮಂದಿ ಕೊನೆಯುಸಿರೆಳೆದಿದ್ದಾರೆ. 5 ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ, ದ್ವಿಚಕ್ರ ವಾಹನಗಳ ಅಪಘಾತ ಹಾಗೂ ಸಾವುಗಳ ಸಂಖ್ಯೆಯೇ ಅಧಿಕವಾಗಿದೆ. ಈ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 819 ದ್ವಿಚಕ್ರ ವಾಹನ ಅಪಘಾತಗಳು ಸಂಭವಿಸಿ, 460 ಮಂದಿ ಸವಾರರು ಮೃತಪಟ್ಟಿದ್ದಾರೆ. 2021ರಲ್ಲಿ 144 ದ್ವಿಚಕ್ರ ಅಪಘಾತಗಳು ನಡೆದಿದ್ದರೆ, 2025ರಲ್ಲಿ ಈ ಸಂಖ್ಯೆ 189ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯೂ 69 ರಿಂದ 114ಕ್ಕೆ ಹೆಚ್ಚಾಗಿರುವುದು ಅಪಘಾತಗಳ ತೀವ್ರತೆಯನ್ನು ತೋರಿಸುತ್ತದೆ.ದ್ವಿಚಕ್ರ ವಾಹನಗಳಷ್ಟೇ ಅಲ್ಲದೆ 2021ರಿಂದ 2025ರ ಡಿಸೆಂಬರ್ ವರೆಗೆ ಕಾರ್, ಟ್ಯಾಕ್ಸಿ ಹಾಗೂ ವ್ಯಾನ್‌ಗಳಿಗೆ ಸಂಬಂಧಿಸಿದಂತೆ 239 ಅಪಘಾತಗಳು ಸಂಭವಿಸಿ 122 ಮಂದಿ ಮೃತಪಟ್ಟಿದ್ದಾರೆ. 5 ವರ್ಷದಲ್ಲಿ ಭಾರೀ ವಾಹನಗಳಾದ ಟ್ರಕ್, ಲಾರಿ, ಬಸ್‌ಗಳ ಒಟ್ಟು 157 ಅಪಘಾಗಳು ಸಂಭವಿಸಿ 53 ಮಂದಿ ಮೃತಪಟ್ಟಿದ್ದಾರೆ.ಹೆಲ್ಮೆಟ್ ನಿರ್ಲಕ್ಷ್ಯ
ಬದಲಾಗುತ್ತಿರುವ ಅಭಿರುಚಿಗಳಲ್ಲಿ ಅದರಲ್ಲಿಯೂ ಹದಿಹರೆಯದ ಯುವಕರಲ್ಲಿ ಅತೀಯಾದ ವೇಗ (ಸ್ಪೀಡ್) ನೀಡುವ ಕಿಕ್‌ನಲ್ಲಿ ತಮ್ಮ ಬದುಕನ್ನೇ ಮುಗಿಸಿಕೊಳ್ಳುತ್ತಿದ್ದಾರೆ. ಇದರೊಟ್ಟಿಗೆ ಮಕ್ಕಳ ಕೈಗೆ ಬೈಕ್ ನೀಡುವುದು, ಅತೀ ವೇಗವಾಗಿ ಸಂಚರಿಸುವ ಬೈಕ್ ಗಳನ್ನು ಮಕ್ಕಳಿಗೆ ಕೊಡುಗೆಯಾಗಿ ನೀಡುವುದು, ಮದ್ಯಪಾನ ಮಾಡಿ ವಾಹನ ಓಡಿಸುವುದು ಮತ್ತು ಚಾಲನೆಯ ವೇಳೆ ಮೊಬೈಲ್ ಬಳಸುವುದು ಸಾವಿನ ದಾರಿಯನ್ನು ಸಮೀಪಗೊಳಿಸುತ್ತದೆ ಅದಕ್ಕಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವುದು, ವೇಗಕ್ಕೆ ಮಿತಿ ಹಾಕಿಕೊಂಡು, ವೇಗಕ್ಕಿಂತ ಕ್ಷೇಮ ಮುಖ್ಯ ಎನ್ನುವುದನ್ನು ಅರಿತುಕೊಳ್ಳುವುದು, ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಮತ್ತು ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಅತಿಯಾದ ವೇಗದಿಂದ ಆಪತ್ತು
ವರ್ಷಅಪಘಾತಸಾವು
2022 329 172
2024 312 163
ಒಟ್ಟು 1592 824