ಆಸ್ತಿ ಜೊತೆ ಆರೋಗ್ಯ ಸಂಪತ್ತು ಗಳಿಸಿ: ಶ್ರೀ ಸಿದ್ದಲಿಂಗ ದೇವರು

KannadaprabhaNewsNetwork | Published : Apr 23, 2024 12:51 AM

ಸಾರಾಂಶ

ಮುದ್ದೇಬಿಹಾಳ; ಹಣ, ಆಸ್ತಿ ಅಂತಸ್ತು ಗಳಿಸುವ ಹಂಬಲದ ಜೊತೆಗೆ ಆರೋಗ್ಯ ಸಂಪತ್ತು ಗಳಿಸಬೇಕು. ಇದರಿಂದ ಹೆಚ್ಚು ದಿನ ಬದುಕಲು ಸಾಧ್ಯವಾಗಲಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಹೇಳಿದರು

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಹಣ, ಆಸ್ತಿ ಅಂತಸ್ತು ಗಳಿಸುವ ಹಂಬಲದ ಜೊತೆಗೆ ಆರೋಗ್ಯ ಸಂಪತ್ತು ಗಳಿಸಬೇಕು. ಇದರಿಂದ ಹೆಚ್ಚು ದಿನ ಬದುಕಲು ಸಾಧ್ಯವಾಗಲಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಕೋ ಸ್ಕ್ಯಾನಿಂಗ್‌ ನೂತನ ಯಂತ್ರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಮನುಷ್ಯ ದೈಹಿಕ ದಂಡನೆಯಾಗುವ, ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮವಿಲ್ಲದೇ ಐಷಾರಾಮಿ ಜೀವನ ನಡೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ತನ್ನ ಆರೋಗ್ಯದ ಕಡೆ ಗಮನ ಹರಿಸದೇ ಒತ್ತಡದ ಬದುಕು ನಡೆಸುತ್ತಿದ್ದಾನೆ. ಇದರಿಂದಾಗಿ ಹೃದಯ ರೋಗ ಸೇರಿದಂತೆ ಅನೇಕ ಮಾರಣಾಂತಿಕ ಕಾಯಿಲೆಗಳಿಂದ ಜೀವನದ ನೆಮ್ಮದಿ ಕಳೆದುಕೊಳ್ಳಬೇಕಿದೆ. ನಿತ್ಯ ಯೋಗ ವ್ಯಾಯಾಮದ ಜೊತೆಗೆ ಉತ್ತಮ ಆರೋಗ್ಯಕ್ಕೆ ಪೂರಕವಾದ ಗುಣಮಟ್ಟ ಆಹಾರ ಪದ್ದತಿಯನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಮುದ್ದೇಬಿಹಾಳದಲ್ಲಿ ಹೃದಯ ರೋಗ ತಜ್ಞ ಡಾ.ವಿಜಯಶೇಖರ ಬಿರಾದಾರ ಅವರು ಬಿರಾದಾರ ಆಸ್ಪತ್ರೆ ತೆರೆದು ಹೃದಯ ರೋಗದ ಕುರಿತು ತುರ್ತು ಮಾಹಿತಿ ನೀಡುವ ಇಕೋ ಸ್ಕ್ಯಾನಿಂಗ್‌ ಯಂತ್ರದ ಸಹಾಯದಿಂದ ರೋಗ ಲಕ್ಷಣ ಪತ್ತೆ ಹಚ್ಚುವ ಮೂಲಕ ಈ ಭಾಗದ ಜನರಿಗೆ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಈ ವೇಳೆ ಹೃದ್ರೋಗ ತಜ್ಞ ಡಾ.ವಿಜಯಶೇಖರ ಬಿರಾದಾರ, ಡಾ.ವಿರೇಶ ಪಾಟೀಲ, ಡಾ.ಉತ್ಕರ್ಷ ನಾಗೂರ, ಡಾ.ಚಂದ್ರಶೇಖರ ಶಿವಯೋಗಿಮಠ, ಸರ್ಕಾರಿ ಆಸ್ಪತ್ರೆಯ ವೈದ್ಯಧಿಕಾರಿ ಅನೀಲಕುಮಾರ ಶೇಗುಣಸಿ, ಗಣ್ಯರಾದ ಸಿ.ಪಿ.ಸಜ್ಜನ, ಪಿ.ಬಿ.ಕಾಳಗಿ, ಸತೀಶ ಕುಲಕರ್ಣಿ, ಕೆ.ಎಸ್.ಗೌಡರ, ಭವಾನಿ ಘೋರ್ಪಡೆ, ಎಸ್.ಬಿ.ಬಳವಾಟ, ಅಶೋಕ ಬಿದರಕುಂದಿ, ಮಂಜುನಾಥ ಬಿರಾದಾರ, ಗೀತಾ ಬಿರಾದಾರ, ಸುಜಾತಾ ಪಾಟೀಲ ಇದ್ದರು.---------

ಫೋಟೊ

೨೨ಎಂಬಿಎಲ್೩: ಮುದ್ದೇಬಿಹಾಳ ಪಟ್ಟಣದ ಬಿರಾದಾರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಇಕೋ ಸ್ಕ್ಯಾನಿಂಗ್‌ ಯಂತ್ರವನ್ನು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಲೋಕಾರ್ಪಣೆ ಗೊಳಿಸಿದರು.

Share this article