ಪ್ರತಿಭಾ ಅರಿಶಿಣ ತಳಿಯಿಂದ ಇಳುವರಿ ಗಳಿಸಿ: ಡಾ.ಪಂಪನಗೌಡ

KannadaprabhaNewsNetwork |  
Published : Jun 27, 2024, 01:09 AM IST
ರೈತರು ಪ್ರತಿಭಾ ಅರಿಶಿನ ತಳಿ ಬೆಳೆದು ಹೆಚ್ಚಿನ ಇಳುವರಿ ಗಳಿಸಿ-  ಡಾ.ಪಂಪನಗೌಡ  | Kannada Prabha

ಸಾರಾಂಶ

ತೋಟಗಾರಿಕೆ ಇಲಾಖೆಯಿಂದ ಅರಿಶಿಣ ಬೆಳೆ ಬೇಸಾಯ ಮತ್ತು ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರೈತರು ಪ್ರತಿಭಾ ಅರಿಶಿಣ ತಳಿಯನ್ನು ಬೆಳೆದು ಹೆಚ್ಚಿನ ಇಳುವರಿ ಗಳಿಸುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ. ಪಂಪನಗೌಡ ಹೇಳಿದರು. ತಾಲೂಕಿನ ಜಕ್ಕಳಿ ಗ್ರಾಮದ ಕೋಟೆ ಕೆರೆ ಸಮೀಪದ ರೈತ ಮಹದೇವಸ್ವಾಮಿ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ಅಯೋಜಿಸಿದ್ದ ಅರಿಶಿಣ ಬೆಳೆ ಬೇಸಾಯ ಮತ್ತು ನಿರ್ವಹಣೆ ಕುರಿತು ತರಬೇತಿಯಲ್ಲಿ ಮಾತನಾಡಿದರು.

ಅಲಪ್ಪಿ ಸುಪ್ರೀಂ,ರೋಮ, ಸೇಲಂ ಎಂಬ ಅರಿಶಿಣ ತಳಿಗಳನ್ನು ಕೊಳ್ಳೇಗಾಲದ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಅದರಲ್ಲಿ ಕಕ್ರ್ಯೂಮಿನ್‌ ಅಂಶ ಶೇ.3ರಷ್ಟಿದೆ ಎಂದರು. ಪ್ರತಿಭಾ ತಳಿಯಲ್ಲಿ ಕಕ್ರ್ಯೂಮಿನ್ ಶೇ.4 ರಿಂದ 5ರಷ್ಟು ಇರುವುದರಿಂದ ಹೆಚ್ಚಾಗಿ ಪ್ರತಿಭಾ ತಳಿಯನ್ನು ರೈತರು ಬೆಳೆಯಲು ಮುಂದಾಗಿ ಎಂದು ಸಲಹೆ ನೀಡಿದರು. ಅರಿಶಿನ ಬೆಳೆಯನ್ನು ಬೆಳೆಯಲು ತಳಿಗಳ ಆಯ್ಕೆ ಮುಖ್ಯವಾಗಿದ್ದು. ಪ್ರ ತಿಭಾ ತಳಿಗಳಿಗೆ ಕೀಟ ಮತ್ತು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ ಎಂದರು. ತೋಟಗಾರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್ ಮಾತನಾಡಿ, ರಾಷ್ಟ್ರೀಯ ಮಿಷನ್ ಯೋಜನೆಯ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣಾ ಕಾರ್ಯಕ್ರಮದಡಿ ಜಿ-9 ಬಾಳೆ, ತರಕಾರಿ ಬೆಳೆಗಳು, ಹೂಗಳು, ಕೃಷಿ ಹೊಂಡ, ಪ್ಯಾಕ್‍ಹೌಸ್ (ಹಣ್ಣು ಸಂಗ್ರಹಣಾ ಘಟಕ) ಈರುಳ್ಳಿ ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯ ಧನವನ್ನು ಸಿಗಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ತಾಳೆ ಬೆಳೆ ಅಧಿಕಾರಿ ನಾಗರಾಜು, ಸಹಾಯಕ ತೋಟಗಾರಿಕೆ ಅಧಿಕಾರಿ ಗಂಗಾಧರ್, ರೈತರಾದ ಕೆಂಪನಪಾಳ್ಯ ಕುಮಾರಸ್ವಾಮಿ, ಪುಟ್ಟಬುದ್ಧಿ, ಆರಾಧ್ಯ, ಮಂಜುನಾಥ, ನಾಗಣ್ಣ, ಶಿವಕುಮಾರ್, ಶಿವಲಿಂಗಸ್ವಾಮಿ, ಮಹೇಶ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ