ಸಾರ್ವಜನಿಕರ ಕೆಲಸಗಳಿಗೆ ಉತ್ತಮ ಸ್ಪಂದನೆ ಇರಲಿ

KannadaprabhaNewsNetwork | Published : Jun 27, 2024 1:09 AM
ಪಟ್ಟಣದ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಂಘದ ವಾರ್ಷಿಕ ಮಹಾಸಭೆಯ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡರು. | Kannada Prabha

ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆಂದು ಇಲಾಖೆಗಳಿಗೆ ಬಂದಾಗ ಅಧಿಕಾರಿಗಳು ಅವರಿಗೆ ಸೂಕ್ತವಾಗಿ ಸ್ಪಂದಿಸಿ, ದಾಖಲೆ ಪತ್ರಗಳು, ಸೌಲಭ್ಯಗಳನ್ನು ತಲುಪಿಸುವ ಕೆಲಸಗಳನ್ನು ಶೀಘ್ರ ಮಾಡಿಕೊಡಬೇಕು. ಆ ಮೂಲಕ ಪ್ರಾಮಾಣಿಕ ಸೇವೆ ಜೊತೆಗೆ ಉತ್ತಮ ಸ್ಪಂದನೆ ಮನೋಭಾವ ಹೊಂದಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

- ಸರ್ಕಾರಿ ನೌಕರರ ಸಂಘ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಡಿ.ಜಿ.ಶಾಂತನಗೌಡ- - - ಕನ್ನಡಪ್ರಭ ವಾರ್ತೆ, ನ್ಯಾಮತಿ

ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆಂದು ಇಲಾಖೆಗಳಿಗೆ ಬಂದಾಗ ಅಧಿಕಾರಿಗಳು ಅವರಿಗೆ ಸೂಕ್ತವಾಗಿ ಸ್ಪಂದಿಸಿ, ದಾಖಲೆ ಪತ್ರಗಳು, ಸೌಲಭ್ಯಗಳನ್ನು ತಲುಪಿಸುವ ಕೆಲಸಗಳನ್ನು ಶೀಘ್ರ ಮಾಡಿಕೊಡಬೇಕು. ಆ ಮೂಲಕ ಪ್ರಾಮಾಣಿಕ ಸೇವೆ ಜೊತೆಗೆ ಉತ್ತಮ ಸ್ಪಂದನೆ ಮನೋಭಾವ ಹೊಂದಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಹೊಲದಲ್ಲಿ ಬಿತ್ತನೆ ಮಾಡಿದ ಬೆಳೆಗೆ ವಾರದೊಳಗೆ ಮಳೆ ಬಾರದೇ ಇದ್ದರೆ ಮತ್ತೊಮ್ಮೆ ಸಂಕಷ್ಟ ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇಲಾಖೆಯವರು ಕೃಷಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಕರ್ತವ್ಯ ನಿರ್ವಸಬೇಕು ಎಂದು ಸಲಹೆ ನೀಡಿದರು.

ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಿಂಗಪ್ಪ ಅವರಿಂದ ನೂತನ ಅಧ್ಯಕ್ಷ ಎಸ್‌.ಸಂತೋಷ, ನಿಕಟಪೂರ್ವ ರಾಜ್ಯ ಪರಿಷತ್ತು ಸದಸ್ಯ ಸುಧೀರ ಅವರಿಂದ ವಿಶ್ವನಾಥ ಅಧಿಕಾರ ಸ್ವೀಕರಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಸನ್ಮಾನಿಸಲಾಯಿತು.

ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಸಿದ್ದಬಸಪ್ಪ, ಉಪವಿಭಾಗಾಧಿಕಾರಿ ವಿ.ಅಭಿಷೇಕ, ಜಿಲ್ಲಾ ಘಟಕ ಅಧ್ಯಕ್ಷ ವೀರೇಶ್‌ ಎಸ್‌. ಬಡೇನಪುರ, ಬಿ.ಪಾಲಾಕ್ಷ, ತಹಸೀಲ್ದಾರ್‌ ಎಚ್‌.ಬಿ.ಗೋವಿಂದಪ್ಪ, ಹೊನ್ನಾಳಿ ಘಟಕ ಅಧ್ಯಕ್ಷ ಪಾಟೀಲ, ಬಿಇಒ ಎಂ.ತಿಪ್ಪೇಶಪ್ಪ, ಅಕ್ಷರ ದಾಸೋಹ ರುದ್ರಪ್ಪ, ಬಿಸಿಎಂ ಅಧಿಕಾರಿ ಎಂ.ಮೃತ್ಯುಂಜಯಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ಎಸ್‌.ಎಲ್‌. ಉಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮು ಮತ್ತಿತರರಿದ್ದರು.

- - - (-ಫೋಟೋ:)

ನ್ಯಾಮತಿ ಪಟ್ಟಣದ ಮಹಂತೇಶ್ವರ ವೀರಶೈವ ಕಲ್ಯಾಣ ಮಂದಿರದಲ್ಲಿ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಹಾಗೂ ಪ್ರತಿಭಾ ಪುರಸ್ಕಾರ, ಸಂಘದ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.