ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದ
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ರಾಷ್ಟ್ರ ರಾಜಕಾರಣದಲ್ಲಿ ಅಧಿಕಾರ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ, ರಾಜಕೀಯ ಧುರೀಣರು ಹಾಗೂ ಜನಸಾಮಾನ್ಯರ ಮೇಲೆ ಅಧಿಕಾರ ದರ್ಪ ಎಸಗಿದವರು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.
ನಗರದ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ಬುಧವಾರ ಆಯೋಜಿಸಿದ್ಧ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.1975 ರಲ್ಲಿ ಹೊರಬಂದ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು ಚುನಾವಣಾ ಅಕ್ರಮ, ಸರ್ಕಾರಿ ಯಂತ್ರದ ದುರ್ಬಳಕೆ ಹಿನ್ನೆಲೆಯಲ್ಲಿ ಸದಸ್ಯತ್ವನ್ನು ಅಸಿಂಧುಗೊಳಿಸಿತು. ಮುಂದಿನ ಆರು ವರ್ಷ ಇಂದಿರಾಗಾಂಧಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿತ್ತು ಎಂದರು.
ಪ್ರಧಾನಮಂತ್ರಿ ಅಧಿಕಾರದ ಹುದ್ದೆ ಉಳಿಸಿಕೊಳ್ಳಲು ಇಂದಿರಾಗಾಂಧಿ ಸಂವಿಧಾನದ ಅಧ್ಯಾಯ 38, 39, 40, 41, 42 ವಿಧಿ ತಿದ್ದುಪಡಿ ಮಾಡಿದರು. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವಾಗಿ ಉಳಿದಿದೆ. ಅದರಲ್ಲೂ ಸಂವಿಧಾನ 39ನೇ ವಿಧಿ ತಿದ್ದುಪಡಿ ಜಗಜೀವನ್ ರಾಮ್ ಅವರಂತಹ ಧುರೀಣರನ್ನು ತಲೆತಗ್ಗಿಸುವಂತೆ ಮಾಡಿತು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸ. ಗಿರಿಜಾ ಶಂಕರ್, ಕಾಮಾಕ್ಷಿ ಮೂಡಿಗೆರೆ ಹಾಜರಿದ್ದರು.
ತುರ್ತು ಪರಿಸ್ಥಿತಿ ಇತಿಹಾಸದ ಕಪ್ಪು ಚುಕ್ಕೆ: ಅಯ್ಯರ್‌ಚಿಕ್ಕಮಗಳೂರು: ತುರ್ತು ಪರಿಸ್ಥಿತಿಯ ಕರಾಳ ಪರ್ವ ಭಾರತ ಇತಿಹಾಸದ ಕಪ್ಪುಚುಕ್ಕೆ. ನಾಗರಿಕರ ಮೂಲಭೂತ ಹಕ್ಕುಗಳ ಧಮನ, ಪತ್ರಿಕೆಗಳಿಗೆ ಸೆನ್ಸಾರ್, ನ್ಯಾಯಾಂಗದ ಮೇಲೂ ದರ್ಪತೋರಿ ಅಧಿಕಾರ ಉಳಿಸಿಕೊಳ್ಳುವ ಇಂದಿರಾ ಗಾಂಧಿ ಕಾಂಗ್ರೆಸ್ ತಂಡದ ಹುನ್ನಾರದಿಂದ ದೇಶವೇ ನಲುಗಿತ್ತು ಎಂದು ಹಿರಿಯ ಪತ್ರಕರ್ತ ಚೂಢನಾಥ ಅಯ್ಯರ್ ಹೇಳಿದರು.
ದೇಶದ ಬುದ್ಧಿವಂತ ಜಾಗೃತ ಜನತೆ ಮತದಾನದ ಮೂಲಕ ಸರ್ವಾಧಿಕಾರಿಯನ್ನು ಸೋಲಿಸಿತು. ಪಕ್ಷದ ಜೊತೆಗೆ ನಾಯಕರನ್ನೂ ಚುನಾವಣೆಯಲ್ಲಿ ಪರಾಭವಗೊಳಿಸಿದ ಇಲ್ಲಿಯ ಜನರ ಪ್ರಜಾಪ್ರಭುತ್ವ ಪ್ರೀತಿ ಜಗತ್ತಿನ ಬೇರೆಕಡೆ ನೋಡಲು ಸಾಧ್ಯವಿಲ್ಲ. ಕಮ್ಯೂನಿಸ್ಟರು, ಕಾಂಗ್ರೆಸಿಗರಿಗೆ ಸಂವಿಧಾನ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದ ಅವರು, ಜನತಾಪಕ್ಷದ ಸರ್ಕಾರ ಕೇಂದ್ರದಲ್ಲಿ ರಚನೆಯಾದ ನಂತರ ಇಂತಹ ತುರ್ತುಪರಿಸ್ಥಿತಿ ಜಾರಿಗೊಳಿಸದಂತೆ ಕಾನೂನು ತಿದ್ದುಪಡಿ ತಂದಿದೆ ಎಂದರು.
26 ಕೆಸಿಕೆಎಂ 6ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರ ವೇದಿಕೆಯಿಂದ ಬುಧವಾರ ತುರ್ತು ಪರಿಸ್ಥಿತಿ ಕರಾಳ ಅಧ್ಯಾಯ ಕುರಿತ ಸಂವಾದ ನಡೆಯಿತು. ಬಿ. ತಿಪ್ಪೇರುದ್ರಪ್ಪ, ವಾದಿರಾಜ್, ಪಿ. ರಾಜೀವ್, ಕಾಮಾಕ್ಷಿ ಮೂಡಿಗೆರೆ ಇದ್ದರು.