ಗಜಾನನ ಶಿಕ್ಷಕರ ಸಹಕಾರ ಸಂಘಕ್ಕೆ ₹9.34 ಲಕ್ಷ ಲಾಭ

KannadaprabhaNewsNetwork |  
Published : Sep 25, 2026, 01:30 AM IST
21ant1ep: ಆನವಟ್ಟಿಯಲ್ಲಿ ಹಮ್ಮಿಕೊಂಡಿದ್ದ ಗಜಾನನ ಶಿಕ್ಷಕರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಪುಷ್ಪ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಕರ ಸಮಯವನ್ನು ಉಳಿಸಿ, ಅವರ ಅಗತ್ಯತೆಗೆ ಸ್ಪಂದಿಸಿ ಸಾಲ ನೀಡಿ ಆರ್ಥಿಕ ಸಹಕಾರ ನೀಡುವ ಜೊತೆಗೆ, ಸಮಾಜ ಸೇವೆಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿ, ಶಿಸ್ತು ಬದ್ಧ ವ್ಯವಹಾರ ನಡೆಸುತ್ತಿರುವ ಶಿಕ್ಷಕರ ಸಂಘ ಅತ್ಯಂತ ಆದರ್ಶ ಸಹಕಾರ ಸಂಘವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಪ್ರಭ ವಾರ್ತೆ ಆನವಟ್ಟಿ

ಶಿಕ್ಷಕರ ಸಮಯವನ್ನು ಉಳಿಸಿ, ಅವರ ಅಗತ್ಯತೆಗೆ ಸ್ಪಂದಿಸಿ ಸಾಲ ನೀಡಿ ಆರ್ಥಿಕ ಸಹಕಾರ ನೀಡುವ ಜೊತೆಗೆ, ಸಮಾಜ ಸೇವೆಯಲ್ಲಿ ತನ್ನದೇ ಆದ ಪಾತ್ರ ನಿರ್ವಹಿಸಿ, ಶಿಸ್ತು ಬದ್ಧ ವ್ಯವಹಾರ ನಡೆಸುತ್ತಿರುವ ಶಿಕ್ಷಕರ ಸಂಘ ಅತ್ಯಂತ ಆದರ್ಶ ಸಹಕಾರ ಸಂಘವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ ಮೆಚ್ಚುಗೆ ವ್ಯಕ್ತಪಡಿಸಿದರು.

ಆನವಟ್ಟಿಯ ಗುರುಭವನದಲ್ಲಿ ಭಾನುವಾರ ಗಜಾನನ ಶಿಕ್ಷಕರ ಪಟ್ಟಿ ಸಹಕಾರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಗಜಾನನ ಶಿಕ್ಷಕರ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ₹9.34 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಆರ್ಥಿಕ ಚಟುವಟಿಕೆ ಮತ್ತಷ್ಟು ವೃದ್ಧಿಯಾಗಲು ಸದಸ್ಯರು ಹೆಚ್ಚಿನ ಠೇವಣಿ ಇಡುವ ಮೂಲಕ ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಎಂ.ಸಿ. ಪರಸಪ್ಪ ಹೇಳಿದರು.

ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಸಂಘದ ಸದಸ್ಯರ ಮಕ್ಕಳ ಪೈಕಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕಿನ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅನಾಥ ಮಕ್ಕಳಿಗೆ ಸಹಾಯಧನವನ್ನೂ ವಿತರಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಪುಷ್ಪಾ, ಸಮನ್ವಯಾಧಿಕಾರಿ ದಯಾನಂದ ಕಲ್ಲೇರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಮಡ್ಲೂರು, ರಾಜ್ಯ ಸಂಘದ ಸದಸ್ಯ ಕುಮಾರ್, ತಾಲೂಕು ಸಂಘದ ಅಧ್ಯಕ್ಷ ಕೆ.ಸಿ. ಶಿವಕುಮಾರ್, ಸಂಘದ ಸದಸ್ಯರಾದ ಕೆ. ರೇಣುಕಮ್ಮ, ಇಬ್ರಾಹಿಂ ದೊಡ್ಡಮನಿ, ಬಿ.ಎಚ್. ಸಿದ್ದಪ್ಪ, ಹೆಚ್. ಲೋಕಪ್ಪ, ಬಂಗಾರಪ್ಪ, ಕೆ. ರಾಜು, ವಸಂತ್, ಶ್ರೀಶೈಲ ಸ್ವಾಮಿ, ಸುಭಾಷ್, ನಾಗರಾಜ್, ಬಿ.ಎಂ. ಸಾವಿತ್ರಮ್ಮ, ಲಲಿತ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಪಿ. ಶ್ರೀಕಾಂತಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದ ಕಾಂಗ್ರೆಸ್ ಸಂಪೂರ್ಣ ದಿವಾಳಿ ಅಂಚಿನಲ್ಲಿ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್
ದೃಢ ಸಂಕಲ್ಪದಿಂದ ಉನ್ನತ ಮಟ್ಟಕ್ಕೆ ತಲುಪಿ: ಶಾಸಕ ಎಸ್.ಎನ್. ಚನ್ನಬಸಪ್ಪ