ಗಣಪತಿ ಸನ್ನಿಧಾನದಲ್ಲಿ ಮುರುಳಿ ತಂಡದಿಂದ ಗಾನಸುಧೆ

KannadaprabhaNewsNetwork |  
Published : Sep 18, 2025, 01:10 AM IST
17ಎಚ್ಎಸ್ಎನ್4 : ಹೊಳೆನರಸೀಪುರದ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಸಪ್ತಸ್ವರ ಕಲಾಕೇಂದ್ರದ ವಿದ್ವಾನ್ ಬಿ.ಎನ್.ಎಸ್ ಮುರಳಿ ಮತ್ತು ತಂಡದವರಿಂದ ಸಗಮ ಸಂಗೀತ, ದೇವರನಾಮ, ಭಕ್ತಿಗೀತೆ ರಾಗಾಧಾರಿತ ಚಿತ್ರಗೀತೆ, ಸಭಿಕರ ಮೆಚ್ಚಿಗೆಗೆ ಪಾತ್ರವಾದವು.  | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದ ಗಣಪತಿ ಪೆಂಡಾಲಿನ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು. ಹಾಸನದ ವಿದ್ವಾನ್ ಬಿ ಎನ್‌ ಎಸ್ ಮುರುಳಿ ಹಾಗೂ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ, ಪುಷ್ಪ, ರೇಖಾ ರಮೇಶ್, ರೇಖಾ ಸುರೇಶ್, ಪೂರ್ಣಶ್ರೀ, ಹರಿಣಿ, ಸುಮನಾ, ಸಿರಿ ಅವರು ಹಾಡಿದ ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ, ಶಿವನು ಬಿಕ್ಷಕೆ ಬಂದ ನೋಡುಬಾರೆ ತಂಗಿ, ಕಾಣದ ಕಡಲಿಗೆ, ಶಂಕರಾ ಭರಣಂ ಚಿತ್ರದ ತೆಲುಗು ಗೀತೆ ಜೊತೆಗೆ ತಂಡದವರು ಹಾಡಿದ ಭಾವಗೀತೆ, ರಾಗಾಧಾರಿತ ಚಲನಚಿತ್ರೆ ಗೀತೆ, ಭಕ್ತಿಗೀತೆಗಳು ಸಭಿಕರು ತಲೆದೂಗುವಂತೆ ಮಾಡಿತು.

ಹೊಳೆನರಸೀಪುರ: ಪಟ್ಟಣದ ಗಣಪತಿ ಪೆಂಡಾಲಿನ ಮಹಾಗಣಪತಿ ಸಾಂಸ್ಕೃತಿಕ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಗೀತಗಾಯನ ಕಾರ್ಯಕ್ರಮ ಸಭಿಕರ ಗಮನ ಸೆಳೆಯಿತು.

ಹಾಸನದ ವಿದ್ವಾನ್ ಬಿ ಎನ್‌ ಎಸ್ ಮುರುಳಿ ಹಾಗೂ ಅವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಸೌಮ್ಯ, ಪುಷ್ಪ, ರೇಖಾ ರಮೇಶ್, ರೇಖಾ ಸುರೇಶ್, ಪೂರ್ಣಶ್ರೀ, ಹರಿಣಿ, ಸುಮನಾ, ಸಿರಿ ಅವರು ಹಾಡಿದ ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ, ಶಿವನು ಬಿಕ್ಷಕೆ ಬಂದ ನೋಡುಬಾರೆ ತಂಗಿ, ಕಾಣದ ಕಡಲಿಗೆ, ಶಂಕರಾ ಭರಣಂ ಚಿತ್ರದ ತೆಲುಗು ಗೀತೆ ಜೊತೆಗೆ ತಂಡದವರು ಹಾಡಿದ ಭಾವಗೀತೆ, ರಾಗಾಧಾರಿತ ಚಲನಚಿತ್ರೆ ಗೀತೆ, ಭಕ್ತಿಗೀತೆಗಳು ಸಭಿಕರು ತಲೆದೂಗುವಂತೆ ಮಾಡಿತು.

ಸೇವಾ ಸಮಿತಿಯ ಆರ್.ಬಿ. ಪುಟ್ಟೇಗೌಡ, ಸುರೇಶ್ ಕುಮಾರ್, ಶಿವಕುಮಾರ್, ವೈ.ವಿ.ಚಂದ್ರಶೇಖರ್, ನಿವೃತ್ತ ಯೋಧ ಈಶ್ವರ್, ಅಶೋಕ್ ತಂಡದ ಗಾಯಕರನ್ನೆಲ್ಲಾ ಸನ್ಮಾನಿಸಿ ಗೌರವಿಸಿದರು.

ಸಮಿತಿಯ ಆರ್.ಬಿ.ಪುಟ್ಟೇಗೌಡ ಮಾತನಾಡಿ ಸ್ಥಳೀಯ ಕಲಾವಿದರು ಅತ್ಯುತ್ತಮ ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ, ಗೀತಗಾಯನ ಹರಿಕಥೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ