ಮೂಡುಬಿದಿರೆಗೆ ಗಣಧರ ಆಚಾರ್ಯ ಕುಂಥು ಸಾಗರ ಮುನಿ ಪುರಪ್ರವೇಶ

KannadaprabhaNewsNetwork |  
Published : Mar 06, 2025, 12:31 AM IST
ಮೂಡುಬಿದಿರೆಗೆ ಗಣಧರ ಆಚಾರ್ಯ ಕುಂಥು ಸಾಗರ ಮುನಿ ಪುರಪ್ರವೇಶ | Kannada Prabha

ಸಾರಾಂಶ

ಜೈನಕಾಶಿ ಮೂಡುಬಿದಿರೆಗೆ ಪೂಜ್ಯ ಗಣಧರ ಆಚಾರ್ಯ ಕುಂಡು ಸಾಗರ ಮುನಿವರ್ಯರು ಹಾಗೂ ಅವರ ಸಂಘದ ಪುರ ಪ್ರವೇಶ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರವರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಚಾರ್ಯರು ಹಾಗೂ ಸಂಘದ ನಾಲ್ವರು ಮುನಿಗಳ ಪಾದಪೂಜೆ ನೆರವೇರಿಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಜೈನಕಾಶಿ ಮೂಡುಬಿದಿರೆಗೆ ಪೂಜ್ಯ ಗಣಧರ ಆಚಾರ್ಯ ಕುಂಡು ಸಾಗರ ಮುನಿವರ್ಯರು ಹಾಗೂ ಅವರ ಸಂಘದ ಪುರ ಪ್ರವೇಶ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರವರ್ಯ ಸ್ವಾಮೀಜಿ ನೇತೃತ್ವದಲ್ಲಿ ಆಚಾರ್ಯರು ಹಾಗೂ ಸಂಘದ ನಾಲ್ವರು ಮುನಿಗಳ ಪಾದಪೂಜೆ ನೆರವೇರಿಯಿತು.

ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, 20ನೇ ಶತಮಾನದ ಪ್ರಥಮ ಮುನಿ 108 ಆದಿ ಸಾಗರ ಅಂಕಲಿಕರ ಆಚಾರ್ಯ ಪದಾರೋಹಣ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ತ್ಯಾಗಿ ವೃಂದದ ಪಾದಪೂಜೆ ನೆರವೇರಿತು. ಆಚಾರ್ಯರು, ತ್ಯಾಗಿಗಳು ಶಾಸ್ತ್ರ ಸಿದ್ಧಾಂತ, ಜಿನಬಿಂಬ, ಸಾವಿರ ಕಂಬ ಬಸದಿ, ತ್ರಿಕೂಟ ದರ್ಶನಗೈದು ಕ್ಷೀರ ಅಭಿಷೇಕದಲ್ಲಿ ಪಾಲ್ಗೊಂಡರು.

ಭೈರಾದೇವಿ ಮಂಟಪದಲ್ಲಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನಗೈದ ಕುಂಥು ಸಾಗರ ಮುನಿಮಹಾರಾಜರು, ಸಾಧಕರಿಗೆ ದೇವ ದರ್ಶನ, ಗುರು ವಿನಯ, ದಾನ ಅವಶ್ಯ ಕ್ರಿಯೆಗಳಾಗಿದ್ದು, ಮನುಷ್ಯ ಭವ ಶ್ರೇಷ್ಠವಾಗಿದೆ. ತ್ಯಾಗಿ ಯಾಗದ ಹೊರತು ಮೋಕ್ಷ ಇಲ್ಲ ಎಂದರು.

ಬಸದಿಗಳ ಮೊಕ್ತೇಸರರಾದ ಪಟ್ಟ ಶೆಟ್ಟಿ ಸುದೇಶ್ ಕುಮಾರ್, ಆದರ್ಶ್ ಅರಮನೆ, ಪ್ರಮುಖರಾದ ಶೈಲೇಂದ್ರ ಕುಮಾರ್, ಬೆಟ್ಟೇರಿ ವಿಮಲ್ ಕುಮಾರ್, ಶಂಭವ್ ಕುಮಾ‌ರ್, ಬಾಹುಬಲಿ ಪ್ರಸಾದ್, ಡಾ. ಎಸ್.ಪಿ. ವಿದ್ಯಾಕುಮಾರ್, ಪ್ರವೀಣ್‌ಚಂದ್ರ, ಆಂಡಾರು ಗುಣಪಾಲ್ ಹೆಗ್ಡೆ, ಕೃಷ್ಣ ರಾಜ ಹೆಗ್ಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''