ಉಚ್ಛಿಷ್ಟ ಗಣಪತಿ ಪೂಜೆಯು ಜನರಿಗೆ ಶಕ್ತಿ, ಶಾಂತಿ ಮತ್ತು ಸಮೃದ್ಧಿಯ ಸುಲಭ ಮಾರ್ಗ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

KannadaprabhaNewsNetwork |  
Published : Sep 03, 2024, 01:46 AM ISTUpdated : Sep 03, 2024, 05:25 AM IST
36 | Kannada Prabha

ಸಾರಾಂಶ

ಉಚ್ಛಿಷ್ಟ ಗಣಪತಿ ಪೂಜೆಯು ಜನರಿಗೆ ಶಕ್ತಿ, ಶಾಂತಿ ಮತ್ತು ಸಮೃದ್ಧಿಯ ಸುಲಭ ಮಾರ್ಗವನ್ನು ತೋರುತ್ತದೆ ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.  

 ಮೈಸೂರು : ಉಚ್ಛಿಷ್ಟ ಗಣಪತಿ ಪೂಜೆಯು ಜನರಿಗೆ ಶಕ್ತಿ, ಶಾಂತಿ ಮತ್ತು ಸಮೃದ್ಧಿಯ ಸುಲಭ ಮಾರ್ಗವನ್ನು ತೋರುತ್ತದೆ ಎಂದು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ನಗರದ ಅವಧೂತ ದತ್ತಪೀಠದಲ್ಲಿ ಶ್ರೀ ಉಚ್ಛಿಷ್ಟ ಗಣಪತಿ ವರಿವಸ್ಯಾ ಎಂಬ ಉಚ್ಛಿಷ್ಟ ಗಣಪತಿ ಉಪಾಸನೆ, ಸಹಸ್ರನಾದಿಗಳನ್ನು ಒಳಗೊಂಡಿರುವ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಪುಸ್ತಕದಲ್ಲಿನ ವಿಷಯವು ಈ ಸಂದರ್ಭದಲ್ಲಿ ಲೋಕಕ್ಕೆ ಬೇಕಾದದ್ದೇ ಆಗಿದೆ. ಇದರಿಂದ ಎಲ್ಲರಿಗೂ ಅನುಗ್ರಹವಾಗಲಿ. ಇದು ವೈಶಿಷ್ಟ್ಯಪೂರ್ಣ ಗಣಪತಿ ಪೂಜೆಯ ರೂಪವಾಗಿದೆ ಮತ್ತು ಇದರ ವಿಶೇಷತೆಯನ್ನು ಕುರಿತಂತೆ ಹೆಚ್ಚು ಜನರಿಗೆ ತಿಳಿದಿಲ್ಲ ಎಂದರು.

ಉಚ್ಛಿಷ್ಟ ಎಂಬ ಶಬ್ದವು ಅಧಿಕ ಅಥವಾ ಶ್ರೇಷ್ಠ ಎಂಬ ಅರ್ಥವನ್ನು ಹೊಂದಿದ್ದು, ಇದು ಗಣಪತಿಯ ಅತ್ಯಂತ ಶ್ರೇಷ್ಠ ರೂಪವನ್ನು ಸೂಚಿಸುತ್ತದೆ. ಈ ಪುಸ್ತಕವೂ ಗಣಪತಿಯ ಶಕ್ತಿಯುಳ್ಳ ರೂಪವನ್ನು ಪೂಜಿಸುವ ಮೂಲಕ, ಎಲ್ಲಾ ಅಹಂಕಾರ ಮತ್ತು ಹಾನಿ ನಿವಾರಣೆ ಮಾಡುತ್ತದೆ. ಇದು ನಿಮ್ಮ ಜೀವನವನ್ನು ಶ್ರೇಷ್ಠಗೊಳಿಸಲು ಸಹಾಯ ಮಾಡುತ್ತದೆ ಮತ್ತು ಪ್ರೇರಣೆಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

ಗ್ರಂಥಕರ್ತರಾದ ಡಾ. ಸುಮನ್ ಭಾರದ್ವಾಜ್, ಪ್ರಕಾಶಕರಾದ ನವೀನ್ ಟಿ. ಪುರುಷೋತ್ತಮ್, ಸುಧೀಂದ್ರಶರ್ಮ, ಕಲ್ಯಾಣ್, ವಿಕಾಸ್ ಶಾಸ್ತ್ರಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!