ಭಟ್ಕಳ: ಗಣಪತಿ ಅನುಗ್ರಹದಿಂದ ಬುದ್ಧಿಗೆ ಪ್ರಚೋದನೆ ದೊರೆತರೆ ವಿದ್ಯೆಗೆ ಪ್ರಲೋಭನೆ ದೊರೆಯುತ್ತದೆ. ನಿತ್ಯ ಮನೆಯಲ್ಲಿ ದೇವರ ಆರಾಧನೆ, ಭಜನೆ, ದೇವರ ಸ್ಮರಣೆ ಮಾಡುವಂತೆ ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ತಿಳಿಸಿದರು.
ಯಾವುದೇ ಕಾರ್ಯವನ್ನು ಮಾಡುವಾಗ ಗಣಪತಿ ಉಪಾಸನೆ, ಪ್ರಾರ್ಥನೆಯನ್ನು ಮಾಡಿದರೆ ನಿರ್ವಿಘ್ನತೆ ನಿರ್ಮಾಣವಾಗುತ್ತದೆ. ದಿನಂಪ್ರತಿ ಗಣಪತಿಯನ್ನು ಆರಾಧನೆ ಮಾಡಿ ಮನೆ ಮನೆಯಲ್ಲಿ ನಾಮಜಪ ಮಾಡುವಂತೆ ತಿಳಿಸಿದರು.
ಮುಖ್ಯ ಅತಿಥಿ ಮಾಜಿ ಶಾಸಕ ಸುನಿಲ್ ನಾಯ್ಕ, ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಎನ್. ನಾಯ್ಕ, ದೇವಾಲಯದ ಗರ್ಭಗುಡಿ ನಿರ್ಮಾಣ ಮಾಡಿಸಿಕೊಟ್ಟ ಪ್ರಕಾಶ ಎನ್. ಭಟ್ಟ ಮಾತನಾಡಿದರು. ದೇವಾಲಯ ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಎನ್. ಕಾಮತ್, ಗೌರವ ಕಾರ್ಯದರ್ಶಿ ನಾಗೇಶ ದೇವಡಿಗ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ ಮುಂತಾದವರು ಉಪಸ್ಥಿತರಿದ್ದರು. ಶೋಭಾ ಕಾಮತ್ ಪ್ರಾರ್ಥಿಸಿದರು.ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಶಿವಾನಂದ ಎನ್. ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಸೀಮಾ ನಾಯ್ಕ ವರದಿ ವಾಚಿಸಿದರು. ಸಮಿತಿಯ ಕಾರ್ಯದರ್ಶಿ ರಾಜೇಶ ಎನ್. ಮೊಗೇರ ವಂದಿಸಿದರು. ಭಾನುವಾರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪುನರ್ ಪ್ರತಿಷ್ಠಾ ಅಷ್ಟಬಂಧ, ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ. ೧೭ರಂದು ಬೆಳಗ್ಗೆ ಲೋಕ ಕಲ್ಯಾಣಾರ್ಥವಾಗಿ ೧೦೮ ಕಾಯಿ ಗಣಹವನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಿದ್ದಾಪುರ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಜಾಥಾ ೨೦೨೫ ಅಂಗವಾಗಿ ಜಾಗೃತ ಕಾನೂನು ಕರಪತ್ರವನ್ನು ಹಿರಿಯ ಸಾಮಾಜಿಕ ಚಿಂತಕ ಡಾ. ಕಾಗೋಡು ತಿಮ್ಮಪ್ಪ ಅವರು ಬಿಡುಗಡೆಗೊಳಿಸಿದರು.
ಕರಪತ್ರ ಬಿಡುಗಡೆಯ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಉಪಸ್ಥಿತರಿದ್ದರು.