ದೇಶಕ್ಕೆ ಹೊಸ ಸಂದೇಶ ನೀಡುವ ಗಾಂಧಿ ಭಾರತ್ ಕಾರ್ಯಕ್ರಮ: ಭಾರತಿ

KannadaprabhaNewsNetwork | Published : Apr 18, 2025 12:44 AM

ಸಾರಾಂಶ

ಶೃಂಗೇರಿ, ಮಹಾತ್ಮ ಗಾಂಧಿಜೀಯವರು ಬೆಳಗಾವಿಯಲ್ಲಿ 1924 ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶದ ಅಧ್ಯಕ್ಷತೆ ವಹಿಸಿ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಗಾಂಧಿ ಭಾರತ್ ಕಾರ್ಯಕ್ರಮ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು ದೇಶಕ್ಕೆ ಹೊಸ ಸಂದೇಶ ನೀಡುವ ಕಾರ್ಯಕ್ರಮ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಹೇಳಿದರು.

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಾಂಧಿ ಭಾರತ್‌-ಪ್ರತಿಜ್ಞಾ ವಿಧಿ ಭೋಧನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಹಾತ್ಮ ಗಾಂಧಿಜೀಯವರು ಬೆಳಗಾವಿಯಲ್ಲಿ 1924 ರಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌ ಅಧಿವೇಶದ ಅಧ್ಯಕ್ಷತೆ ವಹಿಸಿ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಗಾಂಧಿ ಭಾರತ್ ಕಾರ್ಯಕ್ರಮ ಎಲ್ಲೆಡೆ ಆಚರಿಸಲಾಗುತ್ತಿದೆ. ಇದು ದೇಶಕ್ಕೆ ಹೊಸ ಸಂದೇಶ ನೀಡುವ ಕಾರ್ಯಕ್ರಮ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತೀ ಹೇಳಿದರು,

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಭಾರತ್‌ ಹಾಗೂ ಪ್ರತಿಜ್ಞಾ ವಿಧಿ ಭೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಂಧಿಜಿಯವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನ ಒಂದು ಐತಿಹಾಸಿಕ ಸಮಾವೇಶ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಗಾಂಧಿಜಿ ಅಧ್ಯಕ್ಷತೆ ವಹಿಸಿದ್ದ ಮೊದಲ ಹಾಗೂ ಕೊನೆ ಅಧಿವೇಶನ ಕೂಡ ಇದಾಗಿತ್ತು.

ಗಾಂಧಿಜಿಯವರು ಸ್ವಚ್ಚತೆ, ಶಾಂತಿ, ಅಹಿಂಸೆಗೆ ಮಹತ್ವ ನೀಡಿದ್ದರು. ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಭಾರತ ಹಾಗೂ ಇಡೀ ಮಾನವ ಕುಲಕ್ಕೆ ಕ್ರಾಂತಿಗೆ ಒಂದು ಹೊಸ ಕಾರ್ಯಸೂಚಿಯನ್ನೇ ನಿಗದಿಪಡಿಸಿದರು. ಗಾಂಧೀಜಿಯವರ ವಿಚಾರಗಳು, ಆದರ್ಶಗಳು ಅತ್ಯಂತ ಸರಳತೆಯಿಂದ ಕೂಡಿತ್ತು. ಕೋಮು ಏಕತೆ, ಅಸ್ಪೃಷ್ಯತೆ ನಿವಾರಣೆ,ಖಾದಿ,ಗ್ರಾಮೀಣ ಕೈಗಾರಿಕೆ, ಗ್ರಾಮ ನೈರ್ಮಲ್ಯ,ಮೂಲ ಶಿಕ್ಷಣ,ವಯಸ್ಕರ ಶಿಕ್ಷಣ,ಮಹಿಳಾ ಶಿಕ್ಷಣ,ಆರ್ಥಿಕ ಸಮಾನತೆ, ರೈತರು, ಕಾರ್ಮಿಕರು, ಬುಡಕಟ್ಟು ಜನರ ಅಭಿವೃದ್ದಿ ಸೇರಿದಂತೆ ಸರ್ವರ ಏಳಿಗೆಗೆ ಶ್ರಮಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಸ್ವರಾಜ್ಯ, ಸ್ವಾತಂತ್ರ್ಯ, ಅಸ್ಪೃಷ್ಯತೆ ನಿವಾರಣೆ, ಹರಿಜನೋದ್ದಾರ. ಖಾದಿ ಬಗ್ಗೆ ಮಾತನಾಡಿ ಕನ್ನಡಿಗರಲ್ಲಿ ಸಂಚಲನ ಮೂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆ ತುಂಬಿದರು. ಗಾಂಧಿಜೀ ತತ್ವದರ್ಶಗಳು ಸರ್ವಕಾಲಿಕ ಎಂದರು. ಇದೇ ಸಂದರ್ಭದಲ್ಲಿ ಗಾಂಧಿಜೀಯವರ 7 ಮಂತ್ರಗಳನ್ನು ಮೂಲಕ ಭೋದಿಸ ಲಾಯಿತು. ರಾಜ್ಯಶಾಸ್ತ್ರ ವಿಭಾಗದ ಆಶಾಬಾರ್ಕೂರು, ಕನ್ನಡ ವಿಭಾಗದ ಚಾಣುಕ್ಯರಾಜ್, ವಾಣಿಜ್ಯ ವಿಭಾಗದ ಡಿ.ಮಂಜುನಾಥ್ ಮತ್ತಿತರರು ಉಪಸ್ಥಿತ ರಿದ್ದರು.

17 ಶ್ರೀ ಚಿತ್ರ 1-

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಾಮ ಭಾರತ್ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಭಾರತಿ ಮಾತನಾಡಿದರು.

Share this article