ಕನ್ನಡಪ್ರಭ ವಾರ್ತೆ ಕಲಾದಗಿ
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರರ ಸಂಭ್ರಮ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಈ ಕಾರ್ಯಕ್ರಮಕ್ಕೆ ಬೀಳಗಿ ಮತಕ್ಷೇತ್ರದ ಪ್ರತೀ ಹಳ್ಳಿಯಿಂದಲೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದಾರೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಹೇಳಿದರು.ಗ್ರಾಮದ ಹಣ್ಣು ಬೆಳೆಗಾರರ ಸಂಘದ ಆವರಣದಲ್ಲಿ ನಡೆದ ಕಲಾದಗಿ ಬ್ಲಾಕ್ ಕಾಂಗ್ರೆಸ್‍ನ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ, ಡಾ.ಅಂಬೇಡ್ಕರ್, ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆ ಮಾಡುವ ದ್ಯೋತಕವಾಗಿ ಡಿ.27 ರಂದು ಗಾಂಧಿ ಭಾರತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶದ ವಿವಿಧೆಡೆಯಿಂದ 700ಕ್ಕೂ ಹೆಚ್ಚೂ ಕಾಂಗ್ರೆಸ್ ನಾಯಕರು ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೌರವ ತೋರುವ, ದೇಶದ ಬಗೆಗೆ, ಮಹಾತ್ಮಾ ಗಾಂಧಿಜಿ ಬಗೆಗೆ ಪ್ರೀತಿ ಗೌರವ ತೋರಲು ಇದೊಂದು ಸುವರ್ಣಾಕವಾಶ ಬೀಳಗಿ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದರು. ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ್ ಮಾತನಾಡಿದರು. ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ ಬಸುರಾಜ ಸಂಶಿ, ಸಲಿಂ ಶೇಕ್, ಪಾಂಡು ಪೊಲೀಸ್, ಕೆ.ಟಿ.ಪಾಟೀಲ, ಎಂ.ಬಿ.ಸೌದಾಗರ್, ಫಕೀರಪ್ಪ ಮಾದರ, ಎಂ.ಎ.ತೇಲಿ, ಹಸನಮ್ಮದ್ ರೋಣ, ಗಿರೀಶ ನಾಡಗೌಡ, ಹನುಮಂತ ಅರಕೇರಿ ಇನ್ನಿತರರು ಇದ್ದರು.
ಸಂವಿಧಾನದಿಂದಲೇ ಮೋದಿ ಪ್ರಧಾನ ಮಂತ್ರಿ ಆಗಿದ್ದು, ಶಾ ಗೃಹ ಸಚಿವರಾಗಿದ್ದು. ಸಂವಿಧಾನ ಬರೆದು ನಮ್ಮೆಲ್ಲರಿಗೂ ಸಮಾನ ಹಕ್ಕು ನೀಡಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಬೀಳಗಿಯಲ್ಲಿ ಜ.1ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.ಜೆ.ಟಿ.ಪಾಟೀಲ, ಶಾಸಕ ಬೀಳಗಿ