ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಾವಿದ್ಯಾಲಯದ ಸಂಗೀತ ವಿಭಾಗ ಹಾಗೂ ವಿದ್ಯಾರ್ಥಿಗಳು ಭಜನೆ ಮಾಡುವುದರ ಮೂಲಕ ರಘುಪತಿ ರಾಘವ, ವೈಷ್ಣವ ಜನತು ಸೇರಿದಂತೆ ವಿವಿಧ ಗಾಂಧೀಜಿ ಕುರಿತಾದ ಹಾಡುಗಳನ್ನು ಹಾಡಿದರು.
ಇದೇ ವೇಳೆ ಪ್ರಾಚಾರ್ಯ ಎಸ್. ಆರ್ ಮಗನೂರಮಠ ಅವರು ಮಾತನಾಡಿ, ಸ್ವಾವಲಂಬನೆ ಮತ್ತು ಸರಳ ಜೀವನಕ್ಕೆ ಮಹತ್ವ ನೀಡಿದ ಅವರು ಗುಡಿಕೈಗಾರಿಕೆಗಳಿಗೆ ಪ್ರಾಮುಖ್ಯತೆ ಕೊಡಬೇಕು. ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂಬ ಪರಿಕಲ್ಪನೆ ಹೊಂದಿದ್ದರು. ಹರ್ಡಿಕರ ಮಂಜಪ್ಪ, ರಾನಡೆಯಂತಹ ಅನೇಕರು ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ನಡೆದು ಸ್ವಾವಲಂಬನೆಯ ಪರಿಕಲ್ಪನೆಯನ್ನು ಯುವ ಪೀಳಿಗೆಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಿ ಮಠ, ಆರ್.ಎಮ್ ಬೆಣ್ಣೂರ, ಶ್ರೇಯಾ ಜೋರಾಪುರ ಮತ್ತು ವಿದ್ಯಾರ್ಥಿಗಳು ಭಜನ ಮಾಡಿದರು.