21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ: ಸುರ್ಜೇವಾಲಾ

KannadaprabhaNewsNetwork |  
Published : Jan 18, 2025, 12:48 AM IST
ಸುರ್ಜೇವಾಲಾ | Kannada Prabha

ಸಾರಾಂಶ

ಬೆಳಗಾವಿಯಲ್ಲಿ ಜ.21ರಂದು ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯಲ್ಲಿ ಜ.21ರಂದು ಗಾಂಧಿ ಭಾರತ ಕಾರ್ಯಕ್ರಮದ ಅಂಗವಾಗಿ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ದೇಶದ ಎಲ್ಲ ಕಾಂಗ್ರೆಸ್‌ ನಾಯಕರು ಭಾಗವಹಿಸುವರು. ಬೆಳಗಾವಿಯ ಐತಿಹಾಸಿಕ ಭೂಮಿಯ ಜೊತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಬಂಧ ದಶಕಗಳಿಂದ ಇದೆ ಎಂದು ಹೇಳಿದರು.

ಸಂಸತ್‌ನಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಕೇವಲ ಡಾ.ಬಾಬಾಸಾಹೇಬ ಅಂಬೇಡ್ಕರ್ ಅಪಮಾನ ಮಾತ್ರ ಮಾಡಿಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ತತ್ವಗಳನ್ನು ನಂಬುವವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ. ಸಾಂವಿಧಾನಿಕ ಅಧಿಕಾರವನ್ನು ಬಿಜೆಪಿಯಿಂದ ಬುಲ್ಡೋಜರ್ ಕೆಳಗೆ ಹಿಸುಕಲಾಗುತ್ತಿದೆ. ಹೀಗಾಗಿ ಜ.21ರಂದು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ, ಸಂವಿಧಾನ ರ್‍ಯಾಲಿ, ಜ.27ರಂದು ಅಂಬೇಡ್ಕರ್ ಜನ್ಮಸ್ಥಾನ ಮಧ್ಯಪ್ರದೇಶದಲ್ಲಿ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಬಿಜೆಪಿ ನಾಯಕರು ಒಂದೆಡೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಾರೆ. ಮತ್ತೊಂದೆಡೆ ದಲಿತರು, ಹಿಂದುಳಿದವರ, ಮಹಿಳೆಯರ, ಯುವಕರ ಅಧಿಕಾರ ಕಿತ್ತಕೊಳ್ಳುತ್ತಾರೆ. ದೇಶಾದ್ಯಂತ ಇಂದು ಹೊಸ ಕ್ರಾಂತಿ ಮಾಡುವ ಅವಶ್ಯಕತೆ ಇದೆ. ಹೀಗಾಗಿ ಬೆಳಗಾವಿಯಿಂದ ಹೊರಹೊಮ್ಮುವ ಧ್ವನಿ ದೇಶದ ರಾಜಕಾರಣಕ್ಕೆ ಹೊಸ ದಿಶೆ ನೀಡಲಿದೆ ಎಂದು ಹೇಳಿದರು.

100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಕಾಂಗ್ರೆಸ್‌ ಅಧಿವೇಶನದಿಂದಲೇ ದೇಶಕ್ಕೆಸ್ವಾತಂತ್ರ್ಯ ಸಿಕ್ಕಿತ್ತು. ಈಗ 100 ವರ್ಷಗಳ ಮೇಲೆ ಸಂವಿಧಾನದ ಮೇಲೆ ದಾಳಿಯ ವಿರುದ್ಧ ಹೊಸ ಕ್ರಾಂತಿಗೆ ಸೂತ್ರವಾಗಲಿದೆ. ಬೆಳಗಾವಿ ಸಮಾವೇಶ ಐತಿಹಾಸಿಕವಾಗಲಿದೆ ಎಂದರು.

ಸಚಿವ ಜಾರಕಿಹೊಳಿಗೆ ನೋಟಿಸ್‌ ಇಲ್ಲ: ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪಕ್ಷದ ಹೈಕಮಾಂಡ್‌ ನೋಟಿಸ್‌ ನೀಡುತ್ತದೆ ಎಂದು ಸುದ್ದಿ ಹಬ್ಬಿಸಲಾಗಿದ್ದು, ಇದು ಸುಳ್ಳು. ಸತೀಶ ಅವರಿಗೆ ನೋಟಿಸ್‌ ನೀಡುವುದಿಲ್ಲ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ