- ಭಾವಚಿತ್ರಗಳಿಗೆ ಗಣ್ಯರಿಂದ ಮಾಲಾರ್ಪಣೆ । ಜೀವನ ಸಾಧನೆ ಸ್ಮರಣೆ, ಸರ್ವಧರ್ಮ ಪ್ರಾರ್ಥನೆ । ಗಾಂಧಿ ದರ್ಶನ ಸಂಚಿಕೆ ಬಿಡುಗಡೆಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲಾಡಳಿತ, ವಿವಿಧ ತಾಲೂಕಾಡಳಿತಗಳ ಜೊತೆಗೆ ಸರ್ಕಾರಿ ಕಚೇರಿ, ಕಾಂಗ್ರೆಸ್,ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಾಲಯಗಳು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ಶಾಲಾ ಕಾಲೇಜುಗಳಲ್ಲಿ ಉಭಯ ನಾಯಕರ ಭಾವಚಿತ್ರಗಳನ್ನಿಟ್ಟು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಅವರುಗಳ ಜೀವನ, ಸಾಧನೆ ದೇಶಕ್ಕಾಗಿ ಮಾಡಿದ ಕೆಲಸ ಕಾರ್ಯಗಳನ್ನು ಸ್ಮರಿಸಲಾಯಿತು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಹತ್ತಿರದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಬಳಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಉದ್ದೇಶಿಸಿ ಜಿಲ್ಲಾಧಿಕಾರಿ ಪೂವಿತಾ ಎಸ್. ಮಾತನಾಡಿ, ಜೀವನದುದ್ದಕ್ಕೂ ಸತ್ಯಾಗ್ರಹ ಮತ್ತು ಅಹಿಂಸೆಯ ಮಾರ್ಗವನ್ನೇ ತಮ್ಮ ಬದುಕಿನ ಉದಾಹರಣೆಯಾಗಿ ತೋರಿಸಿಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ತತ್ವಗಳು ಇಂದಿನ ಆಧುನಿಕ ಕಾಲ ದಲ್ಲೂ ಪ್ರಸ್ತುತವಾಗಿವೆ ಎಂದು ಹೇಳಿದರು.ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಮಾತನಾಡಿ, ಇಡೀ ಜಗತ್ತಿನಲ್ಲಿ ಯಾವುದೇ ಆಯುಧ, ಬಂದೂಕು ಅಥವಾ ಕತ್ತಿ ಇಲ್ಲದೆ ಬ್ರಿಟಿಷರ ದೊಡ್ಡ ಸಾಮ್ರಾಜ್ಯ ವನ್ನು ಅಹಿಂಸೆ ಮೂಲಕ ಎದುರಿಸಿ, ಓಡಿಸಿದ ಕೀರ್ತಿ ನಮ್ಮ ಮಹಾತ್ಮ ಗಾಂಧೀಜಿಯವರಿಗೆ ಸಲ್ಲುತ್ತದೆ. ವಿಶ್ವದ 150ಕ್ಕಿಂತ ಹೆಚ್ಚು ದೇಶಗಳಲ್ಲಿ ರಾಷ್ಟ್ರಪಿತ ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಿ, ಪೂಜಿಸಲಾಗುತ್ತದೆ. ನೆಲ್ಸನ್ ಮಂಡೇಲಾ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಅವರಂತಹ ಮಹಾನ್ ನಾಯಕರಿಗೂ ಗಾಂಧೀಜಿಯೇ ಆದರ್ಶರಾಗಿದ್ದರು ಎಂದರು.
----
ಗಣ್ಯರಿಂದ ಪುಸ್ತಕ ಬಿಡುಗಡೆ
----
ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಕುರಿತು ಪ್ರವಚನ ನೀಡಿದ ಲಕ್ಷ್ಮೀದೇವಿ, ಗೀತೆಯ ಸಾರಾಂಶವನ್ನು ತಿಳಿಸಿದರು. ಇಸ್ಲಾಂ ಧರ್ಮದ ಕುರಿತು ನೇಮತುಲ್ಲ ಪ್ರವಚನ ನೀಡದರೇ,ಕ್ರಿಶ್ಚಿಯನ್ ಧರ್ಮದ ಕುರಿತು ಸುಮನ್ ಸುನೈನ ಉಪನ್ಯಾಸ ಕೊಟ್ಟರು ಅದೇ ರೀತಿ ಬೌದ್ದ ಧರ್ಮದ ಕುರಿತು ವಿದ್ಯಾಸಾಗರ್ ಉಪನ್ಯಾಸ ನೀಡಿದರು.
02ಕೆಪಿಆರ್‌ಸಿಆರ್ 01: ರಾಯಚೂರಿನ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಮಹಾತ್ಮ ಗಾಂಧಿ ಜಯಂತಿ, ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.