ಕನ್ನಡಪ್ರಭ ವಾರ್ತೆ ರಾಯಚೂರು
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಸಮಿತಿಗಳು ಹಾಗೂ ವಿಶ್ವ ಪ್ರಕಾಶನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ಸಾಹಿತ್ಯ, ವಿದ್ವಾಂಸ ಶಾಮಸುಂದರ ಬಿದರಕುಂದಿ ಉದ್ಘಾಟಿಸಲಿದ್ದು, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅಮರೇಶ ಯತಗಲ್ ಅವರು ಕೃತಿಗಳ ಬಿಡುಗಡೆ ಮಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರಕಲಾವಿದರಾದ ವಾಜೀದ್ ಸಾಜಿದ್, ಎಚ್.ಎಚ್. ಮ್ಯಾದಾರ್, ಸಂಶೋಧನಾ ವಿದ್ವಾಂಸ ಡಾ. ಚನ್ನಬಸವಯ್ಯ ಹಿರೇಮಠ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ. ಸುಗುಣಾ ಬಸವರಾಜ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ಕಸಾಪದ ಡಾ.ಬಿ.ವಿಜಯ ರಾಜೇಂದ್ರ, ರಾವುತ್ರಾವ್ ಬರೂರ್, ಕೃತಿಗಾರ್ತಿ ಲಕ್ಷ್ಮೀದೇವಿ ಶಾಸ್ತ್ರಿ, ಡಾ.ಗವಿಸಿದ್ದಪ್ಪ ಎಚ್. ಪಾಟೀಲ್ ಸೇರಿ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.ಕಾರ್ಯಕ್ರಮದಲ್ಲಿ ತುಂಗಭದ್ರೆಯ ಆಯುರ್ವೇದದಿಂದ ಆರೈಕೆಗೊಂಡ ದೇಶ-ವಿದೇಶಿಯರು, ರಾಯಚೂರು ಕೋಟೆಗೆ ನರಬಲಿ ಬಾಳೆ ಸಂಗಮ್ಮ ಮತ್ತು ಬಸರೆಡ್ಡಿ ಮಲ್ಲವ್ವ,ರಾಯಚೂರಿನ ಚಿತ್ರಕಲಾ ದಿಗ್ಗಜರು, ವಚನವಲ್ಲರಿ ಚುಟುಕುಗಳು, ಲಕ್ಷ್ಮೀದೇವಿ ಶಾಸ್ತ್ರಿ ಅವರ ಕಂಠದಲ್ಲಿ ಉಳಿದ ಜನಪದಗಳು,ಸಂಶೋಧನಾ ಕೃಷಿಕ ದುರ್ಗಾ ಜಗದೀಶ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರರ ವ್ಯಕ್ತಿಚಿತ್ರಮಾಲೆ ಪಂಡಿತ ತಾರನಾಥ ಎನ್ನುವ ಏಳು ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ವಿವರಿಸಿದರು.