ಕನ್ನಡಪ್ರಭವಾರ್ತೆ ಮಧುಗಿರಿ
ಪಟ್ಟಣದ ಟಿವಿವಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧೀಜಿ ಆತ್ಮಕಥನದ ಶತಮಾನದ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ,ಅಂತರಂಗದ ವೀಕ್ಷಣೆಗೆ ಒಳಗಾಗಿದ್ದಾರೆ. ಅವರ ಮಾತುಗಳಲ್ಲಿ ಆತ್ಮವಲೋಕನವಿದೆ. ತಮ್ಮ ಬದುಕಿನ ಸಮಸ್ತ ಸತ್ಯಗಳನ್ನು ದಾಖಲಿಸಿದ್ದಾರೆ ಎಂದು ಭಾವಿಸಲಾಗಿದೆ. ಅವರು ತಮ್ಮ ಅನುಭವಗಳನ್ನು ತಮಗೆ ತಾವೆ ಹೇಳಿಕೊಂಡಂತೆ ಬರೆದಿದ್ದಾರೆ.
ಗಾಂಧಿ ಅವರು ಅಂಬೇಡ್ಕರ್ ಅವರ ಬಗ್ಗೆ ಅಪಾರ ಆದರ್ಶವುಳ್ಳವರಾಗಿದ್ದರು. ಅವರು ಸ್ನೇಹಿತರ ಜೊತೆಗೆ ಸಿಗರೇಟ್ ಸೇದಿದ್ದು, ಮಾಂಸ ತಿಂದಿದ್ದು, ಅಪ್ಪನ ಜೇಬಿನಿಂದ ಹಣ ಕದ್ದಿದ್ದು ಎಲ್ಲವನ್ನು ದಾಖಲಿಸಿದ್ದಾರೆ. ತಾಯಿ-ತಂದೆ ಹಿರಿಯರು ಅವರ ಕಟ್ಟುಪಾಡುಗಳ ಬಗ್ಗೆ ಕೂಡ ಬರೆದಿದ್ದಾರೆ. ಅವರು ಗಾಳಿ, ಬೆಳಕು,ಈ ನೆಲ, ಜಲದೊಂದಿಗೆ ಬೆರೆತು ಭಾರತೀಯರಲ್ಲದೆ ವಿಶ್ವದ ಎಲ್ಲರ ಗಮನ ಸಳೆದಿದ್ದಾರೆ ಎಂದರು.ಗ್ರಂಥಪಾಲಕ ನಾಗಭೂಷಣ್ ಮಾತನಾಡಿ, ನನ್ನ ಜೀವನವೇ ನನ್ನ ಸಂದೇಶ. ಪುಸ್ತಕದ ಪ್ರತಿಯೊಂದು ಜೀವ ರಾಶಿಯಲ್ಲಿ ತನ್ನನ್ನು ತಾನು ನೋಡುತ್ತೇನೆ. ಅಹಿಂಸೆ, ಉಪವಾಸ, ಸತ್ಯಾಗ್ರಹ, ಸ್ವಚ್ಛತೆ ಪ್ರತಿಯೊಬ್ಬರು ಸ್ವತಂತ್ರವಾಗಿ ಬದುಕಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿ, ಗಾಂಧೀಜಿ ಹೋರಾಟದ ಹಾದಿಯ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸತೀಶ್, ದಾಸಪ್ಪ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.