ರಾಮನಗರ: ನಗರ ಪ್ರದೇಶಕ್ಕೆ ಹೊಂದಿಕೊಂಡಿರವ ಎರಡು ಗ್ರಾಮ ಪಂಚಾಯಿತಿಗಳು ಹಾಗೂ ಮೂರು ಗ್ರಾಮ ಪಂಚಾಯಿತಿಗಳ ಕೆಲ ಗ್ರಾಮಗಳನ್ನು ಸೇರಿಸಿಕೊಂಡು ರಾಮನಗರ ನಗರಸಭೆಯನ್ನು ಗ್ರೇಡ್ 2 ರಿಂದ ಗ್ರೇಡ್ 1ಕ್ಕೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗಳು ಭರದಿಂದ ಸಾಗಿದೆ.
ಈ ಮೊದಲು ನಗರದ ಹೊರವಲಯದ ಹರಿಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಗೇನಹಳ್ಳಿ, ಕೆಂಪೇಗೌಡನದೊಡ್ಡಿ, ವಡೇರಹಳ್ಳಿ, ವಿಭೂತಿಕೆರೆ ಪಂಚಾಯಿತಿ ವ್ಯಾಪ್ತಿಯ ಚನ್ನಮಾನಹಳ್ಳಿ, ಹುಣಸನಹಳ್ಳಿ ಪಂಚಾಯಿತಿಯ ಕೊತ್ತಿಪುರ, ಶಿಡ್ಲುಕಲ್ಲು ಹಾಗೂ ಬಿಳುಗುಂಬ ಪಂಚಾಯಿತಿಯ ಜಯಪುರ, ಬೋಳಪ್ಪನಹಳ್ಳಿ ಗ್ರಾಮಗಳನ್ನು ಮಾತ್ರ ಸೇರಿಸಿಕೊಂಡು ನಗರಸಭೆಯನ್ನು ಗ್ರೇಡ್ 1 ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೀಗ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವಸೆ ಸಲ್ಲಿಸುತ್ತಿರುವ ನಗರಸಭೆ ಹಿಂದಿನ 8 ಗ್ರಾಮಗಳ ಜೊತೆ ಬಿಳಗುಂಬ ಮತ್ತು ಮಾಯಗಾನಹಳ್ಳಿ ಗ್ರಾಪಂನ ಎಲ್ಲ ಗ್ರಾಮಗಳನ್ನು ನಗರಸಭೆ ಪರಿಮಿತಿಯೊಳಗೆ ವಿಲೀನ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಈ ಮೂಲಕ ಒಟ್ಟು 22 ಗ್ರಾಮಗಳು ಸೇರಿ ನಗರಸಭೆಯ ಗಡಿ ನಕ್ಷೆ ಹೊಸ ರೂಪ ಪಡೆಯಲಿದೆ.
ಪುರಸಭೆಯಾಗಿದ್ದ ರಾಮನಗರ 1995ರಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದ ಬಳಿಕ, ರಾಮನಗರವು ಜಿಲ್ಲಾ ಕೇಂದ್ರವಾಗಿ ಉಳಿದಿದೆ. ನಗರವು ದಿನದಿಂದ ದಿನಕ್ಕೆ ವಿಸ್ತರಣೆಗೊಂಡು ಬೆಳೆಯುತ್ತಿದ್ದು, ಮೂರು ದಶಕಗಳ ಬಳಿಕ ನಗರಸಭೆಯ ವ್ಯಾಪ್ತಿ ವಿಸ್ತರಣೆಯಾಗುತ್ತಿದೆ.ನಗರಸಭೆಯ ವ್ಯಾಪ್ತಿ ವಿಸ್ತರಣೆ :
ಈಗ ನಗರವೂ ದಿನದಿಂದ ದಿನಕ್ಕೆ ಬೆಳೆದು ಹೊರವಲಯದ ಹಳ್ಳಿಗಳಿಗೂ ಹರಡಿಕೊಂಡಿದೆ. ಈ ಹಳ್ಳಿಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ, ನಗರಕ್ಕೆ ಹೊಂದಿಕೊಂಡಂತೆ ಬೆಳೆದಿವೆ. ನಗರದ ಹೊರವಲಯಕ್ಕೆ ಅಭಿವೃದ್ದಿ ವಿಸ್ತರಣೆಯಾಗುತ್ತಿದ್ದರೂ, ನಗರದ ಸ್ಥಳೀಯ ಆಡಳಿತ ಸಂಸ್ಥೆಯಾಗಿರುವ ನಗರಸಭೆಯ ವ್ಯಾಪ್ತಿ ವಿಸ್ತರಣೆ ಆಗಿರಲಿಲ್ಲ.ನಗರವು ಹೊರವಲಯದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಕನಕಪುರ ರಸ್ತೆ, ಹುಣಸನಹಳ್ಳಿ ರಸ್ತೆ, ಹಳೆ ಬೆಂಗಳೂರು–ಮೈಸೂರು ಹೆದ್ದಾರಿಯ ಕುಂಬಾಪುರ ಗೇಟ್ ದಾಟಿ ಜಾನಪದ ಲೋಕದವರೆಗೆ ವಸತಿ ಪ್ರದೇಶಗಳು ವಿಸ್ತರಣೆಗೊಂಡಿವೆ. ಹೀಗಾಗಿ, ಇಲ್ಲಿನ ನಗರಸಭೆಗೆ ಗ್ರೇಡ್ - 1 ಆಗಿ ಮೇಲ್ದರ್ಜೆಗೇರುವ ಎಲ್ಲಾ ಅರ್ಹತೆಗಳಿವೆ.
ಗ್ರೇಡ್ - 1 ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಮತ್ತು ನಗರದ ಗಡಿಯ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಿಗದಿಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಜಿಲ್ಲಾ ಪಂಚಾಯಿತಿ ಕೇಳಿರುವ ವರದಿಗಳನ್ನು ಸಿದ್ದಪಡಿಸಲಾಗುತ್ತಿದೆ.ಗ್ರೇಡ್ - 1 ಆಗಬೇಕಾದರೆ ನಗರದ ಜನಸಂಖ್ಯೆ 1.50 ಲಕ್ಷ ಇರಬೇಕು. ಸದ್ಯದ ಜನಸಂಖ್ಯೆ ಅಂದಾಜು 1.35 ಲಕ್ಷ ಇದೆ. ಜನಸಂಖ್ಯೆ ಮಾನದಂಡ ತಲುಪಲು ಹೊರವಲಯದ ಗ್ರಾಮಗಳನ್ನು ಸೇರಿಸಿಕೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ವರದಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೆ ಹೋಗಲಿದೆ. ನಗರಸಭೆ ವ್ಯಾಪ್ತಿಗೆ ಗ್ರಾಮಗಳನ್ನು ಬಿಟ್ಟು ಕೊಡಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಬೇಕು. ಬಳಿಕ, ಅಂತಿಮ ವರದಿಯು ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಪರಿಶೀಲನೆಗೆ ಒಳಪಡಲಿದೆ. ಅಂತಿಮವಾಗಿ ಸಚಿವ ಸಂಪುಟದ ಒಪ್ಪಿಗೆಯೊಂದಿಗೆ ನಗರಸಭೆಯು ಗ್ರೇಡ್ - 1 ಆಗಿ ಮೇಲ್ದರ್ಜೆಗೇರಲಿದೆ.
ಕೋಟ್ ...........ಜಿಲ್ಲಾ ಕೇಂದ್ರವಾಗಿರುವ ರಾಮನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಯ ವಿಸ್ತರಣೆ ಮತ್ತು ಗ್ರೇಡ್ - 1 ಆಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಆಗಿರುವುದರಿಂದ ನಗರದ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ.
- ಇಕ್ಬಾಲ್ ಹುಸೇನ್ ,ಶಾಸಕರು, ರಾಮನಗರ ಕ್ಷೇತ್ರ.ಕೋಟ್ ..............
ರಾಮನಗರ ನಗರಸಭೆಯನ್ನು ಗ್ರೇಡ್ - 1 ಕ್ಕೆ ಮೇಲ್ದರ್ಜೆಗೇರಿಸುವ ಸಂಬಂಧ ಬಿಳಗುಂಬ ಹಾಗೂ ಮಾಯಗಾನಹಳ್ಳಿ ಗ್ರಾಪಂಗಳನ್ನು ಸೇರಿಸಿಕೊಂಡು ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ನಗರಸಭೆ ಗ್ರೇಡ್ - 1 ಆಗಿ ಮೇಲ್ದರ್ಜೆಗೇರಿದರೆ ಹೆಚ್ಚಿನ ಪ್ರಮಾಣದ ಅನುದಾನ ದೊರೆಯಲಿದೆ.- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
ಕೋಟ್ ..................ನಗರಸಭೆ ವ್ಯಾಪ್ತಿಗೆ ಸೇರಲಿರುವ ಪ್ರದೇಶದ ಜನಸಂಖ್ಯೆ, ಜನಸಾಂದ್ರತೆ, ಆ ಪ್ರದೇಶದ ಸ್ಥಳೀಯ ಆಡಳಿತಕ್ಕೆ ಬರುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಶೇಕಡವಾರು ಉದ್ಯೋಗ, ಆರ್ಥಿಕ ಪ್ರಾಮುಖ್ಯತೆ ಸೇರಿದಂತೆ ಇತರ ಅಂಶಗಳ ಜೊತೆಗೆ, ಸರಹದ್ದು ವಿಸ್ತರಣೆ ನಂತರದ ಗಡಿ ಮಾಹಿತಿ, ನಕ್ಷೆ, ಪೂರಕ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ನಕ್ಷೆ ತಯಾರಿಗೆ ಟೆಂಡರ್ ಕರೆಯಲಾಗಿದ್ದು, ಒಟ್ಟು 22 ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲು ಚಿಂತಿಸಲಾಗಿದೆ.
- ಡಾ.ಜಯಣ್ಣ, ಪೌರಾಯುಕ್ತರು, ನಗರಸಭೆ, ರಾಮನಗರ9ಕೆಆರ್ ಎಂಎನ್ 5,6,7,8.ಜೆಪಿಜಿ
5.ರಾಮನಗರ ನಗರಸಭೆ6.ಶಾಸಕ ಇಕ್ಬಾಲ್ ಹುಸೇನ್
7.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ8.ನಗರಸಭೆ ಆಯುಕ್ತ ಡಾ.ಜಯಣ್ಣ