ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ವಿವಿಧ ಕೋಶಗಳ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ರಾಷ್ಟ್ರದ ದ ಭವಿಷ್ಯ ಅಲ್ಲಿನ ಶಾಲಾ ಕೊಠಡಿಗಳಲ್ಲಿ ರೂಪಿತವಾಗುತ್ತದೆ ಎಂಬ ಮಾತಿದೆ. ವಿದ್ಯಾಲಯಗಳು ಮಕ್ಕಳಲ್ಲಿ ಶಿಕ್ಷಣದ ಜತೆಜತೆಗೆ ಸನ್ನಡತೆ ಮತ್ತು ಸಂಸ್ಕೃತಿಯನ್ನು ತುಂಬಬೇಕಿದೆ ಎಂದರು.
ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಓದು, ನಿರಂತರ ಪ್ರಕ್ರಿಯೆ. ಓದುವ ಹವ್ಯಾಸವು ಗ್ರಂಥಾಧ್ಯಯನ ಆಗುತ್ತದೆ. ಅಧ್ಯಯನವು ಹವ್ಯಾಸ ಆಗಿ ಮುಂದೆ ಬಲವಾಗುತ್ತದೆ. ಅಧ್ಯಯನ ಬಲಕ್ಕೆ ಅನುಭವ ಬಲ ಕೂಡಿದರೆ, ಎಲ್ಲ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಧನಮದ, ಕುಲಮದ, ವಿದ್ಯಾಮದ, ರೂಪಮದ, ಯೌವನಮದ, ಬಲಮದ, ಪರಿವಾರಮದ, ಅಧಿಕಾರಮದ ಈ ಅಷ್ಟಮದಗಳನ್ನು ತ್ಯಜಿಸಿದರೆ ಮಾತ್ರ ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.ವಿದ್ಯಾರ್ಥಿಗಳು ಗಟ್ಟಿ ಕಾಳು ಇರುವ ರಾಗಿಯ ತೆನೆಯ ರೀತಿ ಬಾಗಿಕೊಂಡು ವಿನಯವಂತಿಕೆಯಿಂದ ಬದುಕಬೇಕು. ಇಲ್ಲಿ ಪಡೆದುಕೊಳ್ಳುವ ಶಿಕ್ಷಣವನ್ನು ಕೇವಲ ಪರೀಕ್ಷೆಗೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಸ್ ಜೆಎಂ ಎನ್ನುವುದು ಕಾಲದ ಬ್ರಾಂಡ್ ಆಗಿದೆ. ಆದ್ದರಿಂದಲೇ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕರಲ್ಲಿ ಎಸ್ ಜೆಎಂ ಸಂಸ್ಥೆಗಳಲ್ಲಿ ಕಾಲೇಜಿನಲ್ಲಿ ಕಲಿತವರಿದ್ದಾರೆ ಎನ್ನವುದು ಹೆಮ್ಮೆಪಡುವಂಥದ್ದಾಗಿದೆ ಎಂದರು.
ಪಟೇಲ್ ಶಿವಕುಮಾರ್ ಮಾತನಾಡಿ, ಸಾವಿರಾರು ಜನರಿಗೆ ವಿದ್ಯಾರ್ಜನೆ ಮಾಡುವುದು ಒಂದು ಪುಣ್ಯ ಕಾರ್ಯವಾಗಿದೆ. ಅಂತಹ ಮಹತ್ವದ ಕಾರ್ಯವನ್ನು ಎಸ್ ಜೆಎಂ ವಿದ್ಯಾಸಂಸ್ಥೆ ಹಲವು ದಶಕಗಳಿಂದ ಮಾಡಿಕೊಂಡು ಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಕಳೆಯುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಕನಸು ಕಾಣುವಂತಹ ವಯಸ್ಸು ನಿಮ್ಮದಾಗಿರುವುದರಿಂದ ಉತ್ತಮವಾದ ಕನಸುಗಳನ್ನು ಕಂಡು ಅವುಗಳನ್ನು ಸಾಕಾರಗೊಳಿಸಿಕೊಳ್ಳಿ. ಕಳೆದು ಹೋದ ಸಮಯ ಮತ್ತೆ ಹಿಂತಿರುಗುವುದಿಲ್ಲ ಆದ್ದರಿಂದ ಇರುವ ಕಡಿಮೆ ಸಮಯದಲ್ಲಿ ಸಾಧನೆಗಳನ್ನು ಮಾಡಬೇಕಾಗುತ್ತದೆ ಎಂದರು.