ಗ್ರಾಪಂ ಮಟ್ಟದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಿ

KannadaprabhaNewsNetwork |  
Published : Oct 10, 2025, 01:00 AM IST
ಗುಬ್ಬಿ ತಾಲೂಕಿನ ಅಂಕಸoದ್ರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನ ಕಟ್ಟಡ ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮ ಮಟ್ಟದ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಬಗೆಹರಿಸಿಕೊಂಡು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಬೇಕು ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಗ್ರಾಮ ಮಟ್ಟದ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಬಗೆಹರಿಸಿಕೊಂಡು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಬೇಕು ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು. ತಾಲೂಕಿನ ಅಂಕಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೂತನ ಕಟ್ಟಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರೆ ಏನು ಪ್ರಯೋಜನವಿಲ್ಲ . ಗ್ರಾಮಸ್ಥರ ಸಹಕಾರ ಪಡೆದು ರಸ್ತೆ ನೀರು ಚರಂಡಿ ಸಮಸ್ಯೆಗಳನ್ನ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು. ಈ ಭಾಗದ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಹಾಗೂ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ಸುಮಾರು ವರ್ಷ ನೆನೆಗುದ್ದಿಗೆ ಬಿದ್ದಿದ್ದ ಹೇಮಾವತಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಪೈಪಗಳು ಬಂದಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂದರು. ಅಂಕಸಂದ್ರ ಹಾಗೂ ಮಂಚನ ದೊರೆ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ರಸ್ತೆ ಕಾಮಗಾರಿಗಳು ನಡೆಯಬೇಕಿದ್ದು ರಸ್ತೆ ನಿರ್ಮಾಣ ಮಾಡಲು ಸಣ್ಣ ಪುಟ್ಟ ಅಡೆತಡೆಗಳು ಎದುರಾಗುತ್ತಿವೆ. ರೈತರು ಸೇರಿ ಸಮಸ್ಯೆಗಳನ್ನ ಬಗೆಹರಿಸಿಕೊಂಡು ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ತಮ್ಮ ಜಮೀನಿಗೆ ಗೊಬ್ಬರ ಹಾಕಿ ಉಳುಮೆ ಮಾಡದ ರೈತರು ರಸ್ತೆ ಬದಿಯವರೆಗೂ ಉಳುಮೆ ಮಾಡುತ್ತಿರುವುದು ವಿಷಾದ. ತಮ್ಮ ಜಮೀನಿನಲ್ಲಿ ಬೆಳೆಯುವ ಫಸಲು ರಸ್ತೆ ಬದಿಯಲ್ಲಿ ಬೆಳೆಯಲು ಆಗುತ್ತದೆಯೇ ನಿಮಗೆ ಏನು ಅನಿಸುತ್ತಿಲ್ಲವೇ ಎಂದು ಕಿಡಿ ಕಾರಿದರು. ಇದೇ ಸಂದರ್ಭದಲ್ಲಿ ಅಂಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ದೊಡ್ಡಿರಯ್ಯ, ಉಪಾಧ್ಯಕ್ಷೆ ಸುಜಾತಾ ರಮೇಶ್, ಪಿಡಿಒ ರೇಖಾ, ಸದಸ್ಯರಾದ ಗುರುರಾಜು ಗುರು ಲಿಂಗಯ್ಯ, ಹನುಮಂತರಾಜು, ಭೂತಮ್ಮ, ನೇತ್ರಾವತಿ,ರೂಪ, ಸಿದ್ದರಾಮಯ್ಯ ಮೋಹನ್ ಕುಮಾರ್, ಜಯರಂಗಮ್ಮ ರಂಗನಾಥ್ , ಅನಿತಾ ಲಕ್ಷ್ಮೀ, ಮಾಜಿ ತಾಲ್ಲೂಕ್ ಪಂಚಾಯಿತಿ ಸದಸ್ಯರಾದ ಸಣ್ಣ ರಂಗಯ್ಯ , ಕರಿಯಮ್ಮ ರಮೇಶ್ , ಲೆಕ್ಕ ಸಹಾಯಕ ಸುರೇಶ್ ಮುಖಂಡರಾದ ಮಂಚಲ ದೊರೆ ರಮೇಶ್, ಸಣ್ಣರಂಗಯ್ಯ, ಗುರುರಾಜ್, ಲಕ್ಷ್ಮಣಪ್ಪ, ನಿವೇಶನ ದಾನಿಗಳಾದ ಎಸ್ ಗುರುಲಿಂಗಯ್ಯ , ಹನುಮಂತರಾಜು ಉಪತಹಲ್ದಾರ್ ಪ್ರಕಾಶ್ ಗುತ್ತಿಗೆದಾರ ಗುರುರಾಜು ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಉಪಸಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ