ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೂರು ದಿನಗಳ ಹಿಂದೆ ತಾಲೂಕಿನ ಶ್ರೀನಿವಾಸ ಸಾಗರಕ್ಕೆ ಆಗಮಿಸಿದ್ದ ಪ್ರವಾಸಿಗರ ಗುಂಪಿನಲ್ಲಿದ್ದ ಅನ್ಯ ಕೋಮಿನ ಯುವತಿಯರು ಡ್ಯಾಂ ಮುಂದೆ ಸ್ಥಾಪಿಸಿರುವ ಗಂಗಮ್ಮದೇವಿ ವಿಗ್ರಹದ ಮೇಲೆ ಕಾಲಿಟ್ಟುಕೊಂಡು ಸ್ನಾನ ಮಾಡುತಿದ್ದ ವಿಡಿಯೋ ವೈರಲ್ ಆಗಿ ಸುದ್ದಿಯಾಗಿತ್ತು. ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಪರ ಸಂಘಟನೆಗಳು ಗುರುವಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.ಈ ಕೃತ್ಯ ನಡೆಸಿದ ಆರೋಪಿಗಳ ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಎಸ್ಪಿ ಕುಶಾಲ್ ಚೌಕ್ಸೆ ಅರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಎಸ್ಪಿ ಕುಶಾಲ್ ಚೌಕ್ಸೆ, ಕೆಲವು ಮಾಧ್ಯಮಗಳಲ್ಲಿ ಸುದ್ದಿಯಾಗಿರುವುದನ್ನು ಗಮನಿಸಿ ಆ ಪ್ರಕರಣದ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ. ಯಾರು ಆ ವೀಡಿಯೋ ವೈರಲ್ ಮಾಡಿದರೂ ಎನ್ನುವುದನ್ನೂ ಪತ್ತೆ ಮಾಡಲಾಗುತ್ತಿದೆ. ಯಾರು ಕಾನೂನು ಕೈಗೆತ್ತಿಗೊಳ್ಳಬಾರದು ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದರು.ಹಿಂದೂಗಳ ಧಾರ್ಮಿಕ ಕ್ಷೇತ್ರ
ತಾಲೂಕು ಪುರಾಣ ಪ್ರಸಿದ್ದ ತಾಣ ಶ್ರೀನಿವಾಸ ಸಾಗರ ಕೆರೆ ತುಂಬಿ ಹರಿಯುತ್ತಿದ್ದು ಹಳೆಯ ಪುರಾತನ ಕಾಲದ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ. ಇದೊಂದು ಹಿಂದೂಗಳ ಧಾರ್ಮಿಕ ಕ್ಷೇತ್ರವಾಗಿದೆ. ಶ್ರೀನಿವಾಸ ಸಾಗರ ತುಂಬಿ ಹರಿಯುತ್ತಿರುವುದರಿಂದ ಈಗ ಪ್ರತಿನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತಿದ್ದಾರೆ.ಮೂರು ದಿನಗಳ ಹಿಂದೆ ಪ್ರವಾಸಿಗರ ದಂಡಿನಲ್ಲಿದ್ದ ಕೆಲವು ಅನ್ಯ ಕೋಮಿನ ಯವತಿಯರು ಕೋಡಿ ಹರಿಯುವ ನೀರಿನಲ್ಲಿ ಸ್ನಾನ ಮಾಡುವಾಗ ಡ್ಯಾಂ ಕೆಳಗಿದ್ದ ಗಂಗಮ್ಮದೇವಿ ವಿಗ್ರಹದ ಮೇಲೆ ಕಾಲಿಟ್ಟು ಜಳಕ ಮಾಡುತ್ತಿರುವುದನ್ನ ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಧಾರ್ಮಿಕ ಭಾವನೆಗೆ ಧಕ್ಕೆಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ , ಹಿಂದೂಗಳು ಶಾಂತಿ ಪ್ರಿಯರು. ಅನ್ಯಧರ್ಮೀಯರು ಈ ಘಟನೆಯಿಂದ ಧಾರ್ಮಿಕ ಭಾವನೆಗಳನ್ನ ಕೆರಳಿಸುತಿದ್ದಾರೆ. ಅದೆ ಇಸ್ಲಾಂ ಧರ್ಮದ ದೇವರುಗಳಿಗೆ ದಕ್ಕೆಯಾಗಿದ್ದರೆ ಅವರು ಪೋಲೀಸ್ ಠಾಣೆಗಳಿಗೆ ಬೆಂಕಿ ಇಡುವ ಕೆಲಸ ಮಾಡುತಿದ್ದರು. ಶಾಸಕರು ಜನಪ್ರತಿನಿದಿಗಳ ಮನೆಗೆ ನುಗ್ಗಿ ಹೊಡೆಯುತಿದ್ದರು. ಆದರೆ ನಾವು ಕಾನೂನು ಸುವ್ಯಸ್ಥೆಗೋಸ್ಕರ ಅಂತಹ ಕೃತ್ಯಗಳನ್ನ ಮಾಡೋಲ್ಲ. ಶ್ರೀನಿವಾಸ ಸಾಗರ ಪ್ರಕರಣದಲ್ಲಿ ತಪ್ಪೆಸಗಿರುವ ಈ ಯುವತಿಯರು ಎಲ್ಲಿದ್ದರೂ ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಗಂಗಮ್ಮ ದೇವಿಗೆ ಪೂಜೆ
ಪ್ರತಿಭಟನೆ ನಂತರ ಶ್ರೀನಿವಾಸ ಸಾಗರಕ್ಕೆ ತೆರಳಿದ ಮುಖಂಡರು ಅಲ್ಲಿ ಮೈಲಿಗೆಯಾಗಿದ್ದ ಗಂಗಮ್ಮದೇವಿ ವಿಗ್ರಹಕ್ಕೆ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಇಂತಹ ಘಟನೆ ಮರುಕಳಿಸಬಾರದೆಂದು ಸಾರ್ವಜನಿಕವಾಗಿ ಮನವಿ ಮಾಡಿದರು.ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಿ ಹೆಚ್ ಪಿ ಜಿಲ್ಲಾಧ್ಯಕ್ಷ ಡಾ.ಬಿ.ವಿ.ಮಂಜುನಾಥ್, ಮಾದ್ಯಮ ಪ್ರಮುಖ ಮಧುಚಂದ್ರ, ಚಿಕ್ಕನಹಳ್ಳಿ ನಾರಾಯಣಸ್ವಾಮಿ.ಸಂದೀಪರೆಡ್ಡಿ, ಆರ್.ಹೆಚ್.ಎನ್.ಆಶೋಕ್ ಕುಮಾರ್, ದೇವಸ್ಥಾನದಹೂಸಹಳ್ಳಿ ರಾಮಣ್ಣ, ಅನು ಅನಂದ್,ಅಭಿಷೇಕ್, ಪೋಶೆಟ್ಟಹಳ್ಳಿ ಗ್ರಾ ಪಂ ಅಧ್ಯಕ್ಷ ಶ್ರೀನಿವಾಸ್, ಚಂದ್ರಶೇಖರ್, ಬಾಲಕೃಷ್ಣ , ಉಪೇಂದ್ರ ಮತ್ತಿತರರು ಇದ್ದರು.