ಗಾಂಧೀಜಿ ಸತ್ಯ, ಅಹಿಂಸೆ ಹೋರಾಟ ಜಗತ್ತಿಗೇ ಸ್ಫೂರ್ತಿ

KannadaprabhaNewsNetwork |  
Published : Oct 04, 2025, 01:00 AM IST
02 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಮಹಾತ್ಮಗಾಂಧಿಜಿಯ 156 ನೇ ಹಾಗೂ  ಲಾಲ್ ಬಹದ್ದೂರು ಶಾಸ್ತ್ರಿ ಅವರ 121ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಬಿ.ದೇವೇಂದ್ರಪ್ಪ ಅವರು ಮಾತನಾಡಿದರು. | Kannada Prabha

ಸಾರಾಂಶ

ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆಯ ಮೂಲಮಂತ್ರಗಳು ಜಗತ್ತಿಗೆ ಸ್ಫೂರ್ತಿದಾಯಕ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.

- ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ । ಗಾಂಧಿ, ಶಾಸ್ತ್ರಿ ಜಯಂತಿ । ಜಗಳೂರು ಕಾಂಗ್ರೆಸ್‌ ಆಯೋಜನೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆಯ ಮೂಲಮಂತ್ರಗಳು ಜಗತ್ತಿಗೆ ಸ್ಫೂರ್ತಿದಾಯಕ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯ 156ನೇ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ 121ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಆಡಳಿತ ಸರ್ಕಾರ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದ ಮಾದರಿಯನ್ನು ಸಾಕ್ಷೀಕರಿಸುತ್ತಿದೆ. ರಾಜ್ಯದಲ್ಲಿನ ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ದೂರದೃಷ್ಟಿಯಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಪರಿಶೀಲನಾ ಜಾತಿಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಗಣತಿದಾರರಿಗೆ ಅಗತ್ಯ ಮಾಹಿತಿ ನೀಡಬೇಕು ಎಂದರು.

ಕೆಪಿಸಿಸಿ ಎಸ್‌ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ದೇಶದಲ್ಲಿ ಸ್ವಾರ್ಥರಾಜಕಾರಣಕ್ಕಾಗಿ ಕೆಲವರಿಂದ ಯುವಸಮೂಹವನ್ನು ದಿಕ್ಕುತಪ್ಪಿಸುವ ಹುನ್ನಾರ ನಡೆಯುತ್ತಿದೆ. ಮಹಾನೀಯರ ಕೊಡುಗೆ ಮತ್ತು ಜೀವನ ಚರಿತ್ರೆಗಳನ್ನು ಯುವಕರಿಗೆ ಮನವರಿಕೆ ಆಗುವಂತೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಸಿ.ತಿಪ್ಪೇಸ್ವಾಮಿ, ತಿಮ್ಮಾರೆಡ್ಡಿ, ಜಿ.ಶಂಭುಲಿಂಗಪ್ಪ, ಶಿವನಗೌಡ, ಬಿ.ಮಹೇಶ್ವರಪ್ಪ, ಚಂದ್ರಪ್ಪ, ತಿಪ್ಪೇಸ್ವಾಮಿ ಗೌಡ, ವೀರಣ್ಣ ಗೌಡ, ಸಾವಿತ್ರಮ್ಮ, ಶಿಲ್ಪಾ, ಜಯಲಕ್ಷ್ಮೀ, ಮಂಜುನಾಥ್, ಕೆಳಗೋಟೆ ಅಹಮ್ಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್, ಗುಡ್ಡದ ಲಿಂಗಣ್ಣನಹಳ್ಳಿ ನಾಗರಾಜ್, ರಮೇಶ್ ಸರ್ಕಾರ್, ಕೆಚ್ಚೇನಹಳ್ಳಿ ಹರೀಶ್, ಮಂಜುನಾಥ್ ಇತರರು ಇದ್ದರು.

- - -

(ಕೋಟ್‌) ಮಹಾತ್ಮ ಗಾಂಧೀಜಿ ಅವರು ಗ್ರಾಮಸ್ವ ರಾಜ್ಯದ ಕನಸ್ಸು ಕಂಡಿದ್ದರು. ಸ್ವಾತಂತ್ರ್ಯಕ್ಕಾಗಿ ಸತ್ಯ, ಅಹಿಂಸಾ ಮಾರ್ಗದಿಂದ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಹಲವಾರು ಚಳುವಳಿಗಳನ್ನು ರೂಪಿಸಿದ್ದರು. ಅಹಿಂಸಾ ತತ್ವಗಳನ್ನು ಗೌರವಿಸಲು 2007ರಲ್ಲಿ ವಿಶ್ವಸಂಸ್ಥೆಯು ಅ.2ರಂದು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಬೇಕು.

- ಕಲ್ಲೇಶ್ ರಾಜ್ ಪಟೇಲ್, ಸದಸ್ಯ, ಕೆಪಿಸಿಸಿ.

- - -

-02ಜೆ.ಜಿ.ಎಲ್.1:

ಜಗಳೂರಲ್ಲಿ ಗುರುವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡ ಗಾಂಧೀಜಿ, ಶಾಸ್ತ್ರಿಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ