ಗಾಂಧೀಜಿ, ಶಾಸ್ತ್ರಿ ದೇಶಕ್ಕೆ ನೀಡಿದ ಕೊಡುಗೆ ದೊಡ್ಡದು

KannadaprabhaNewsNetwork |  
Published : Oct 03, 2025, 01:07 AM IST

ಸಾರಾಂಶ

ದೇಶಕ್ಕೆ ಮಹಾತ್ಮಾ ಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಅವರ ಕೊಡುಗೆಗಳು ಸದಾ ಸ್ಮರಣೀಯವಾಗಿದೆ. ಇವರಿಬ್ಬರೂ ನಮಗೆಲ್ಲ ಪ್ರಾತಃಸ್ಮರಣೀಯರು.

ಕನ್ನಡಪ್ರಭ ವಾರ್ತೆ ಕಾರವಾರ

ದೇಶಕ್ಕೆ ಮಹಾತ್ಮಾ ಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಅವರ ಕೊಡುಗೆಗಳು ಸದಾ ಸ್ಮರಣೀಯವಾಗಿದೆ. ಇವರಿಬ್ಬರೂ ನಮಗೆಲ್ಲ ಪ್ರಾತಃಸ್ಮರಣೀಯರು ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದರು.

ಕಾರವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಬ್ಬರೂ ಮಹಾನ್ ಚೇತನರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಿಸಿ ಮಾತನಾಡಿದರು.

ಜಗತ್ತಿಗೆ ಸತ್ಯ, ಅಹಿಂಸೆಯ ಹಾದಿಯನ್ನು ತೋರಿಸಿ, ಶಾಂತಿ, ಸತ್ಯಾಗ್ರಹಗಳ ಮೂಲಕ ಭಾರತದ

ಸ್ವಾತಂತ್ರ್ಯ ಸಂಗ್ರಾಮವನ್ನ ಜನಾಂದೋಲನವಾಗಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಕೊಡುಗೆ ಬಹು ದೊಡ್ಡದು. ಹಾಗೂ ದಕ್ಷತೆ-ಪ್ರಾಮಾಣಿಕತೆ ಮೂಲಕ ಆಳುವ ವರ್ಗಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟ ''''''''ಜೈ ಜವಾನ್ ಜೈ ಕಿಸಾನ್'''''''' ಎಂಬ ಸರ್ವಶ್ರೇಷ್ಠ ಘೋಷಣೆಯನ್ನು ಮೊಳಗಿಸಿದ್ದ ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಜನ್ಮ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ.

ಅಹಿಂಸೆಯ ಮಾರ್ಗದ ಮೂಲಕ ಬ್ರಿಟಿಷ್‌ ವಿರುದ್ಧ ಹೋರಾಡಿ, ಜಗತ್ತಿಗೆ ಶಾಂತಿಯ ಮಂತ್ರ ಸಾರಿದ ಮಹಾತ್ಮಾ ಗಾಂಧೀಜಿ ಹಾಗೂ ನಿಸ್ವಾರ್ಥತೆ, ತ್ಯಾಗ, ಸೇವೆಯ ಮೂಲಕ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದ ಶಾಸ್ತ್ರೀಜಿಯವರ ಆದರ್ಶಗಳು ಸದಾ ಶಾಶ್ವತ. ಇಬ್ಬರೂ ಶ್ರೇಷ್ಠ ನೇತಾರರರು ರಾಷ್ಟ್ರಕ್ಕೆ ಸಲ್ಲಿಸಿದ ಕೊಡುಗೆಗಳು ಚಿರಸ್ಥಾಯಿಯಾಗಿ ಇರಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ನಾಗೇಶ್ ಕುರ್ಡೆಕರ, ಗ್ರಾಮೀಣ ಮಂಡಳದ ಅಧ್ಯಕ್ಷ ಸುಭಾಷ ಗುನಗಿ, ವಿ.ಎಮ್ ಹೆಗಡೆ, ನಗರ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ಗೌಡ, ದೇವಿದಾಸ ಕಂತ್ರೇಕರ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ ಇದ್ದರು.ದಾಂಡೇಲಿಯಲ್ಲಿ ಗಾಂಧಿ ಜಯಂತಿ:

ದಾಂಡೇಲಿಯ ಬಂಗೂರನಗರ ಎಂಪ್ಲಾಯಿಸ್ ಕ್ಲಬ್ ಆವರಣ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿಜಿ ಜನ್ಮದಿನ ಆಚರಣೆ ಮಾಡಲಾಯಿತು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ನ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಸ್ಟ್ ಪೇಪರ್ ಮಿಲ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜೈನ್, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಎನ್. ವಾಸರೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ರಾಘವೇಂದ್ರ ಆರ್.ಜೆ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಅನಿಲ ದಂಡಗಲ್ಲ, ಕೀರ್ತಿ ಗಾಂವ್ಕರ್, ಗುರುಶಾಂತ ಜಡೆಹೀರೆಮಠ, ಅಕ್ಷಯ ಗೋಸಾವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ