ಗಾಂಧೀಜಿ, ಶಾಸ್ತ್ರೀಜಿ ಜೀವನ ಯುವಕರಿಗೆ ಮಾದರಿ

KannadaprabhaNewsNetwork |  
Published : Oct 03, 2025, 01:07 AM IST
ಗಾಂಧಿ ಹಾಗೂ ಶಾಸ್ತ್ರಿ ಅವರ ತತ್ವ, ಅದರ್ಶ ಜೀವನ ಯುವ ಪೀಳಿಗೆಗೆ ಮಾದರಿ  : ಜಿ. ನಿಜಗುಣರಾಜು  | Kannada Prabha

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ, ತತ್ವ ಸಿದ್ದಾಂತಗಳು ಇಂದಿನ ಯುವಪೀಳಿಗೆ ಮತ್ತು ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ, ತತ್ವ ಸಿದ್ದಾಂತಗಳು ಇಂದಿನ ಯುವಪೀಳಿಗೆ ಮತ್ತು ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹಾಪುರುಷರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರೀ ದೇಶ ಕಂಡ ಮಹಾನ್ ಪುರುಷರು, ಗಾಂಧೀಜಿ ಅವರು ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಲಾಲ್ ಬಹುದ್ದೂರ್ ಶಾಸ್ತ್ರಿಯರು ಪ್ರಧಾನಿಗಳಾಗಿ ಉತ್ತಮ ಆಡಳಿತ ನಡೆಸಿ. ದೇಶವನ್ನು ಮುನ್ನಡೆಸಿ ಸಮರ್ಥ ಪ್ರಧಾನಿಗಳು, ಅತ್ಯಂತ ಪ್ರಾಮಾಣಿಕತೆ, ಸರಳ ಜೀವನ ನಡೆಸಿದರು ಎಂದು ಸ್ಮರಿಸಿಕೊಂಡರು.

ಲಾಲ್ ಬಹುದ್ದೂರ್ ಶಾಸ್ತ್ರಿಯರ ಆಡಳಿತ ಮತ್ತು ರಾಜಕೀಯ ಜೀವನ ಶುದ್ದವಾಗಿತ್ತು. ಅಲ್ಲದೇ ಪ್ರಧಾನಿಯಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಸರಳವಾಗಿ ಬದುಕಿದವರು. ಅವರು ಪ್ರಧಾನಿಯಾಗಿದ್ದರು ಸಹ ಅವರಿಗೆ ಬರುತ್ತಿದ್ದ ೧೨ ರು. ಸಂಬಳದಲ್ಲಿ ಸ್ನೇಹಿತನಿಗೆ ಸಹಾಯ ಮಾಡಲು ಸಾಧ್ಯವಾಗದ ಅಸಹಾಕತೆಯನ್ನು ತೋರರ್ಪಡಿಸಿಕೊಂಡಿದ್ದರು. ಅವರ ಕಷ್ಟವನ್ನರಿತ ಶಾಸ್ತ್ರಿಯ ಪತ್ನಿ ತಾವು ಕೂಡಿಟ್ಟಿದ್ದ ೫ ರು.ಗಳನ್ನು ಸ್ನೇಹಿತನಿಗೆ ನೀಡಿದ್ದರು. ಈ ಹಣ ಇಲ್ಲಿತ್ತು ಎಂದು ಶಾಸ್ತ್ರಿಯರು ಕೇಳಿದಾಗ, ನೀವು ನನಗೆ ಮನೆ ಖರ್ಚಿಗೆ ನೀಡುತ್ತಿದ್ದ ೨ ರು. ನಲ್ಲಿ ೨೫ ಪೈಸೆ ಉಳಿತಾಯ ಮಾಡಿದ್ದೆ ಎಂದರಂತೆ, ತಕ್ಕಣ ಶಾಸ್ತ್ರಿಗಳು ಪ್ರಧಾನ ಮಂತ್ರಿಗಳ ಕಚೇರಿಗೆ ಕರೆ ಮಾಡಿ ನನಗೆ ಮುಂದಿನ ತಿಂಗಳಿಂದ ೫೦ ಪೈಸೆ ಕಡಿತ ಮಾಡಿ ೧೧.೫೦ ರು.ಗಳನ್ನು ಮಾತ್ರ ನೀಡಿ ಎಂದು ಹೇಳಿ, ಪತ್ರವನ್ನು ಸಹ ಬರೆದರಂತೆ. ಇದನ್ನು ಸಹಾಯ ಪಡೆದುಕೊಂಡಿದ್ದ ಅವರ ಸ್ನೇಹಿತನೇ ಅತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.

ಇಂದಿನ ರಾಜಕಾರಣಿಗಳು ಇದಕ್ಕೆ ತದ್ವುರಿತ್ವವಾಗಿ ಅಧಿಕಾರ ಸಿಕ್ಕರೆ ಸಾಕು ಜನ ಸೇವೆ ಇರಲಿ. ನಾನು, ಮಗ, ಮೊಮ್ಮಗ, ಮರಿ ಮಗ ಮತ್ತು ಸಂಬಂಧಿಕರಿಗೆ ಎಷ್ಟು ಆಸ್ತಿ ಮಾಡಬೇಕು. ಯಾವ ಇಲಾಖೆಯಲ್ಲಿ ಇಷ್ಟ ಹಣ ಹೊಡೆಯಲು ಸಾಧ್ಯ ಎಂದು ಚಿಂತಿಸುತ್ತಿದ್ದಾರೆ. ಹೀಗಾಗಿ ಯುವ ರಾಜಕಾರಣಿಗಳು ಶಾಸ್ತ್ರಿಯ ಅದರ್ಶಗಳನ್ನು ಪಾಲನೆ ಮಾಡಿ ಎಂದು ನಿಜಗುಣರಾಜು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಿ. ವೃಷಬೇಂದ್ರಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿಗಳ ಅದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಗಾಂಧೀಜಿ ಅವರು ಬ್ರಿಟಿಷರ ವಿರುದ್ದ ಅಹಿಂಸಾ ಚಳವಳಿ, ಅಸಹಕಾರ ಚಳವಳಿಗಳನ್ನು ಮಾಡುವ ಮೂಲಕ ಸ್ವಾತಂತ್ರವನನ್ನು ತಂದು ಕೊಟ್ಟರು. ಅವರ ಸತ್ಯ ಮಾರ್ಗವನ್ನು ನಾವೆಲ್ಲರು ಅಳವಡಿಸಿಕೊಂಡು ಪ್ರಧಾನಿ ಶಾಸ್ತ್ರೀಗಳ ಉತ್ತಮ ಅಢಳಿತ ಮತ್ತು ಅಭಿವೃದ್ದಿ ಪಥದ ರಾಜಕಾರಣವನ್ನು ತಿಳಿದುಕೊಂಡು ಮುನ್ನಡೆಯೋಣ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಕಾರ್ಯದರ್ಶಿ ನಟರಾಜು, ನಗರ ಮಂಡಲ ಅಧ್ಯಕ್ಷ ಶಿವರಾಜ್, ಗ್ರಾಮಾಂತರಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್, ಮುಖಂಡರಾದ ಕೂಸಣ್ಣ, ರಾಮಸಮುದ್ರ ವೇಣುಗೋಪಾಲ್, ಕೇಬಲ್‌ರಂಗಸ್ವಾಮಿ ಮೊದಲಾದವರು ಇದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ