ಸಮಾಜ ಸೇವೆಗೆ ಅರ್ಪಣೆ ಮಾಡಿಕೊಂಡಿದ್ದ ಗಾಂಧೀಜಿ: ದೇವರಾಜ್ ಶೆಟ್ಟಿ

KannadaprabhaNewsNetwork |  
Published : Oct 03, 2024, 01:17 AM IST
ಚಿಕ್ಕಮಗಳೂರಿನ ರತ್ನಗಿರಿ ಬೋರೆಯಲ್ಲಿ ಬಿಜೆಪಿ ವತಿಯಿಂದ ಬುಧವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡ ಮಹಾತ್ಮರು ಗಾಂಧೀಜಿ. ಆದ್ದರಿಂದ ಅವರನ್ನು ಮಹಾತ್ಮ ಗಾಂಧೀಜಿ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಅರ್.ದೇವರಾಜ್ ಶೆಟ್ಟಿ ಹೇಳಿದರು.

ರತ್ನಗಿರಿ ಬೋರೆಯಲ್ಲಿ ಬಿಜೆಪಿಯಿಂದ ಬುಧವಾರ ನಡೆದ ಮಹಾತ್ಮಗಾಂಧೀಜಿಯವರ 155ನೇ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ರವರ 121 ನೇ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜದ ಏಳಿಗೆಗಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡ ಮಹಾತ್ಮರು ಗಾಂಧೀಜಿ. ಆದ್ದರಿಂದ ಅವರನ್ನು ಮಹಾತ್ಮ ಗಾಂಧೀಜಿ ಎಂದು ಕರೆಯಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಅರ್.ದೇವರಾಜ್ ಶೆಟ್ಟಿ ಹೇಳಿದರು.

ರತ್ನಗಿರಿ ಬೋರೆಯಲ್ಲಿ ಬಿಜೆಪಿಯಿಂದ ಬುಧವಾರ ನಡೆದ ಮಹಾತ್ಮಗಾಂಧೀಜಿಯವರ 155ನೇ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ರವರ 121 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬಹಳಷ್ಟು ಹಿಂಸಾತ್ಮಕ ಹೋರಾಟ ನಡೆಯುತ್ತಿತ್ತು, ಲಕ್ಷಾಂತರ ಭಾರತೀಯರು ತಮ್ಮ ಜೀವವನ್ನು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಅಂತಹ ದಿನಗಳಲ್ಲಿ ಹಿಂಸಾತ್ಮಕ ಹೋರಾಟದಿಂದ ಬ್ರಿಟೀಷರನ್ನು ಸೋಲಿಸಿ ಜಯಗಳಿಸಲು ಸಾಧ್ಯವಿಲ್ಲ. ಅಹಿಂಸಾತ್ಮಕ ಹೋರಾಟ ಮಾಡುತ್ತೇನೆಂದು ಉಪ್ಪಿನ ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಣ್ಣಿಸಿದರು.

ಗಾಂಧೀಜಿಯವರ ಮಾರ್ಗದರ್ಶನದಲ್ಲಿ ನಡೆದು ಬಂದಿರುವ ನಾವೆಲ್ಲರೂ ಸಮಾಜಕ್ಕಾಗಿ ಏನಾದರು ಮಾಡಬೇಕೆಂಬ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದು, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ಪಕ್ಷದ ಹಿರಿಯರು ನಮಗೆಲ್ಲ ಹೇಳಿಕೊಟ್ಟಿರುವ ಪಾಠ ಎಂದರು.ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಗಾಂಧೀಜಿ ಅವರನ್ನು ಮಹಾತ್ಮ ಎಂದು ಕರೆಯಲು ಅವರ ಅನೇಕ ಸಮಾಜ ಸೇವೆ ಕಾರಣ. ದೇಶಕ್ಕೆ ಸ್ವಾತಂತ್ರ್ಯತಂದು ಕೊಡಲು ಉಪ್ಪಿನ ಸತ್ಯಾಗ್ರಹದ ಮೂಲಕ ಅಹಿಂಸಾ ಚಳುವಳಿ ಘೋಷಣೆ ಮಾಡಿದ್ದರು ಎಂದರು.

ವಿದ್ಯಾರ್ಥಿ ಜೀವನದಲ್ಲಿ ಹರಿಶ್ಚಂದ್ರ ನಾಟಕ ನೋಡಿದ ನಂತರ ತಮ್ಮ ಜೀವನ ಪರಿವರ್ತನೆ ಮಾಡಿಕೊಂಡ ಅವರು ಅನೇಕ ಜನರಿಗೆ ಸ್ಪೂರ್ತಿ ಆಗಿದ್ದಾರೆ. ಸ್ವಾತಂತ್ರ್ಯ ದೊರೆತ ಅಂದಿನಿಂದ ಇಲ್ಲಿಯವರೆಗೂ ಸಮಾಜ ಸೇವೆ, ಸ್ವಚ್ಛತೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಅರಿವು ಮೂಡಿಸಿದ್ದಾರೆ ಎಂದರು.ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನರೇಂದ್ರ, ಕೋಟೆ ರಂಗಣ್ಣ, ಮಧುಕುಮಾರ್‌ ರಾಜ್‌ ಅರಸ್, ಜೇಮ್ಸ್, ಓಬಿಸಿ ಮೋರ್ಚಾ ಅಧ್ಯಕ್ಷ ಜಯವರ್ಧನ್, ಸಂತೋಷ್‌ ಕೋಟ್ಯಾನ್, ಜಸಂತಾ ಅನಿಲ್ ಕುಮಾರ್, ಜೀವನ್‌ ಕೋಟೆ, ಕಬೀರ್, ಕೌಶಿಕ್, ವೆಂಕಟೇಶ್‌ ರಾಜ್‌ ಅರಸ್, ಸತೀಶ್, ಕೆ.ಪಿ.ಮಧು, ಪ್ರದೀಪ್‌ ಕೋಟೆ ಇದ್ದರು.

2 ಕೆಸಿಕೆಎಂ 5ಚಿಕ್ಕಮಗಳೂರಿನ ರತ್ನಗಿರಿ ಬೋರೆಯಲ್ಲಿ ಬಿಜೆಪಿಯಿಂದ ಬುಧವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮುಖಂಡರು ಪಾಲ್ಗೊಂಡಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ