ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು

KannadaprabhaNewsNetwork |  
Published : Oct 03, 2026, 02:00 AM IST
ಧಾರವಾಡದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಗಾಂಧಿ ಜಯಂತಿಯಲ್ಲಿ ಗಾಂಧೀಜಿ ಪುತ್ಥಳಿಗೆ ಗೌರವಿಸಲಾಯಿತು.  | Kannada Prabha

ಸಾರಾಂಶ

ಹುಟ್ಟು ಸಾವಿನ ಮಧ್ಯೆ ಇರುವ ಜೀವ ಜಗತ್ತನ್ನು ಅರ್ಥೈಸಿಕೊಂಡು ಎಲ್ಲರೊಂದಿಗೆ ಸಹಭಾಳ್ವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನೈರ್ಮಲ್ಯತೆ ಸ್ವಾತಂತ್ರ್ಯಕ್ಕಿಂತ ಹೆಚ್ಚು ಎಂದು ಗಾಂಧೀಜಿ ಹೇಳಿದ್ದು, ಪ್ರತಿಯೊಬ್ಬರೂ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಒತ್ತು ನೀಡಬೇಕು.

ಧಾರವಾಡ:

ಸತ್ಯವನ್ನೇ ನುಡಿಯಬೇಕು, ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದು, ಪ್ರತಿಯೊಬ್ಬರು ಅವರ ತತ್ವಾದರ್ಶ ಅಳವಡಿಸಿಕೊಳ್ಳಲು ಜಿಲ್ಲಾಧಿಕಾರಿ ಸ್ನೇಹಲ್‌ ಆರ್. ಕರೆ ನೀಡಿದರು.

ಇಲ್ಲಿಯ ಗಾಂಧಿ ಭವನದಲ್ಲಿ ಜಿಲ್ಲಾಡಳಿತವು ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಅವರು, ಹುಟ್ಟು ಸಾವಿನ ಮಧ್ಯೆ ಇರುವ ಜೀವ ಜಗತ್ತನ್ನು ಅರ್ಥೈಸಿಕೊಂಡು ಎಲ್ಲರೊಂದಿಗೆ ಸಹಭಾಳ್ವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನೈರ್ಮಲ್ಯತೆ ಸ್ವಾತಂತ್ರ್ಯಕ್ಕಿಂತ ಹೆಚ್ಚು ಎಂದು ಗಾಂಧೀಜಿ ಹೇಳಿದ್ದು, ಪ್ರತಿಯೊಬ್ಬರೂ ಸ್ವಚ್ಛತೆ ಮತ್ತು ನೈರ್ಮಲ್ಯತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಗಾಂಧಿ ಚಿಂತಕ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಮುಂದಾಗಬೇಕಿದೆ‌. ಆದರೆ, ಮನುಷ್ಯರು ಪರಿಸರ ಅಸಮತೋಲನಕ್ಕೆ ಕಾರಣೀಭೂತರಾಗಿದ್ದೇವೆ. ಹವಾಮಾನ ವೈಪರೀತ್ಯ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ, ಜಲ‌ ಮಾಲಿನ್ಯ ಸೃಷ್ಟಿ ಮಾಡುತ್ತಿದ್ದೇವೆ ಎಂದರು.

ರಾಮಕೃಷ್ಣ ಮಠದ ವಿಜಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮಕ್ಕೆ ವೇದಗಳು, ಉಪನಿಷತ್ತು ಮತ್ತು ಭಗವದ್ಗೀತೆ ಎಂಬ ಮೂರು ಮುಖ್ಯ ಗ್ರಂಥಗಳಿವೆ. ಹಿಂದೂ ಧರ್ಮ ವಿಶ್ವಮಾನ್ಯ ಧರ್ಮ. ಯಾವುದೇ ಆಚಾರ-ವಿಚಾರಗಳನ್ನು ಹೀನ ಭಾವದಿಂದ ನೋಡದೇ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸುವ ಗುಣಗಳನ್ನು ಹಿಂದೂ ಗ್ರಂಥಗಳು ಹೇಳಿಕೊಡುತ್ತವೆ. ಯಾವುದೇ ಫಲಾಪೇಕ್ಷೆಯಿಲ್ಲದೇ ನಿಮ್ಮ ಕಾರ್ಯಗಳನ್ನು ನೀವು ಮಾಡಬೇಕು ಎಂದು ಗಾಂಧೀಜಿ ಅವರ ಮಾತುಗಳನ್ನು ಸ್ಮರಿಸಿದರು.

ಇಸ್ಲಾಂ ಧರ್ಮದ ಧರ್ಮಗುರು ಹಫೀಜ್‌ ಖಾದ್ರಿ, ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು. ನಾವೆಲ್ಲರೂ ಜೊತೆಯಾಗಿ ಮುಂದೆ ಸಾಗೋಣ ಎಂದರು. ಕ್ರೈಸ್ತ ಧರ್ಮದ ಧರ್ಮಗುರು ಡುವೆಲ್ ಫೌಲ್‌, ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಅಧಿಕಾರಿಗಳು ಇದ್ದರು. ಗಾಂಧೀಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಪತ್ರಿಕಾ ವಿತರಕರ ಸೇವೆಗೆ ಸಿಗಲಿ ಮನ್ನಣೆ