ನಾಳೆ ಸವಾಯಿ ಗಂಧರ್ವರ ಪುಣ್ಯತಿಥಿ, ಸಂಗೀತ ಮಹೋತ್ಸವ: ಕಟಗಿ

KannadaprabhaNewsNetwork |  
Published : Oct 03, 2026, 02:00 AM IST
ಕೈವಲ್ಯಕುಮಾರ್ ಗುರವ | Kannada Prabha

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಳೆದ 73 ವರ್ಷಗಳಿಂದ ಸವಾಯಿ ಗಂಧರ್ವರ ಪುಣ್ಯಸ್ಮರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಂಗೀತ ಕ್ಷೇತ್ರದ ಸಾಧಕರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಮಹೋತ್ಸವ ನಡೆಸಲಾಗುತ್ತಿದೆ.

ಕುಂದಗೋಳ:

ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಮೇರು ಗಾಯಕ ಸವಾಯಿ ಗಂಧರ್ವರ 74ನೇ ಪುಣ್ಯತಿಥಿ ಅಂಗವಾಗಿ ಅ. 4ರಂದು ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಒಂದು ದಿನದ ಸಂಗೀತ ಮಹೋತ್ಸವ ಆಯೋಜಿಸಲಾಗಿದೆ ಎಂದು ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಮಂಡಳಿ ಅಧ್ಯಕ್ಷ ಅರವಿಂದ ಕಟಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಳೆದ 73 ವರ್ಷಗಳಿಂದ ಸವಾಯಿ ಗಂಧರ್ವರ ಪುಣ್ಯಸ್ಮರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಸಂಗೀತ ಕ್ಷೇತ್ರದ ಸಾಧಕರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಮಹೋತ್ಸವ ನಡೆಸಲಾಗುವುದು ಎಂದರು.

ಅಂದು ಬೆಳಗ್ಗೆ 9ಕ್ಕೆ ಸವಾಯಿ ಗಂಧರ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 7 ಗಂಟೆಗೆ ವಿಶ್ವಸ್ಥ ಮಂಡಳಿ ನೇತೃತ್ವದಲ್ಲಿ ಮುಖ್ಯ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅರವಿಂದ ಕಟಗಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಧಾರವಾಡದ ಸಂಗೀತಗಾರ ಪಂ. ಕೈವಲ್ಯಕುಮಾರ್ ಗುರವ ಅವರಿಗೆ ಪ್ರತಿಷ್ಠಿತ "ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪುರಸ್ಕಾರ " ಪ್ರದಾನ ಮಾಡಿ ಗೌರವಿಸಲಾಗುವುದು. ಬಳಿಕ ಪದ್ಮಶ್ರೀ ಎಂ. ವೆಂಕಟೇಶಕುಮಾರ್, ಕೈವಲ್ಯಕುಮಾರ್ ಗುರವ, ಜಯತೀರ್ಥ ಮೇವುಂಡಿ, ಸುನಿತಾ ಟಿಕಾರೆ, ದುಶ್ಯಂತ ರೂಪೋಲಿಯಾ, ಭಾಗ್ಯಶ್ರೀ ದೇಶಪಾಂಡೆ, ಅಶೋಕ ನಾಡಗೇರ, ವಿನಾಯಕ ಹೆಗಡೆ, ಸದಾಶಿವ ಭಟ್, ಅನ್ಸಿಕಾ ನಾಯಕ್, ಪ್ರವೀಣ ಹೂಗಾರ ಸೇರಿದಂತೆ ಹೆಸರಾಂತ ಸಂಗೀತಗಾರರಿಂದ ವಿಶೇಷ ಗಾಯನ ಪ್ರಸ್ತುತಿ ನಡೆಯಲಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಎಂ.ಆರ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ನಂದಕುಮಾರ ಎಚ್.ಎನ್. ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಮುತ್ತಣ್ಣ ತಡಸೂರ, ಕಾರ್ಯದರ್ಶಿ ಅಶೋಕ ನಾಡಿಗೇರ, ಸದಸ್ಯರಾದ ಜಿತೇಂದ್ರ ಕುಲಕರ್ಣಿ, ಎ.ಕೆ. ಕುಲಕರ್ಣಿ, ನಾಗರಾಜ ದೇಶಪಾಂಡೆ, ಗಂಗಾಧರಯ್ಯ ನಾವಳ್ಳಿಮಠ, ಶಂಕರಗೌಡ ದೊಡ್ಮನಿ, ವಾಸುದೇವ ಕಾರೇಕರ, ಸಿದ್ದಲಿಂಗೇಶ್ವರ ಧಾರವಾಡಶಟ್ಟರ, ಬಸವರಾಜ ಬ್ಯಾಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು