ಸೇವಾ ಕಾರ್ಯಗಳಿಂದ ವೆಂಕಟೇಶ ಕಾಟವೆ ಯುವಕರಿಗೆ ಮಾದರಿ

KannadaprabhaNewsNetwork |  
Published : Oct 03, 2026, 02:00 AM IST
ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ ನೃಪತುಂಗನಗರ ರಸ್ತೆಯ ನಾಲಾ ಪಕ್ಕದಲ್ಲಿ ಏಕ್ ಪೇಡ್ ಮಾ ಕೆ ನಾಮ್ ಅಭಿಯಾನದಲ್ಲಿ ಸಸಿ ನೆಡಲಾಯಿತು. | Kannada Prabha

ಸಾರಾಂಶ

ಏಕ್ ಪೇಡ್ ಮಾ ಕೆ ನಾಮ್ ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ. ತಾಯಿಯ ಮೇಲಿನ ಗೌರವದ ಜತೆಗೆ ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ಕಲ್ಪಿಸುವ ಸಂಕಲ್ಪವಾಗಿದೆ.

ಹುಬ್ಬಳ್ಳಿ:

ಯುವಕರು ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳಿಗೆ ಸೀಮಿತರಾಗದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಸೇವಾ ಕಾರ್ಯಗಳ ಮೂಲಕ ಯುವಕರನ್ನು ಸಂಘಟಿಸಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಕ್ಷೇತ್ರಗಳಲ್ಲಿ ವೆಂಕಟೇಶ ಕಾಟವೆ ಅವರು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ವಿಪ ಸದಸ್ಯ ಲಿಂಗರಾಜ ಪಾಟೀಲ ಹೇಳಿದರು.

ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೇವಾ ಸಂಕಲ್ಪದಡಿ ವಿಎಕೆ ಫೌಂಡೇಶನ್ ಹಾಗೂ ವಸುಂಧರಾ ಫೌಂಡೇಶನ್ ಸಹಯೋಗದಲ್ಲಿ ಇಲ್ಲಿನ ನೃಪತುಂಗನಗರ ರಸ್ತೆಯ ನಾಲಾ ಪಕ್ಕದಲ್ಲಿ ಹಮ್ಮಿಕೊಂಡಿದ್ದ "ಏಕ್ ಪೇಡ್ ಮಾ ಕೆ ನಾಮ್ " ಅಭಿಯಾನದಲ್ಲಿ 100 ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.

ಏಕ್ ಪೇಡ್ ಮಾ ಕೆ ನಾಮ್ ಕೇವಲ ಸಸಿ ನೆಡುವ ಕಾರ್ಯಕ್ರಮವಲ್ಲ. ತಾಯಿಯ ಮೇಲಿನ ಗೌರವದ ಜತೆಗೆ ಮುಂದಿನ ಪೀಳಿಗೆಗೆ ಹಸಿರು ಭವಿಷ್ಯ ಕಲ್ಪಿಸುವ ಸಂಕಲ್ಪವಾಗಿದೆ. ನೆಟ್ಟ ಸಸಿಗಳನ್ನು ಸಂರಕ್ಷಿಸಿ ಬೆಳೆಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಬೇಕು ಎಂದರು.

ವಿಎಕೆ ಫೌಂಡೇಶನ್ ಸಂಸ್ಥಾಪಕ ವೆಂಕಟೇಶ ಕಾಟವೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಕೇವಲ ಶುಭಾಶಯಗಳಿಗೆ ಸೀಮಿತಗೊಳಿಸದೆ ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನೆಡುವ ಪ್ರತಿಯೊಂದು ಸಸಿಯೂ ಮುಂದಿನ ಪೀಳಿಗೆಗೆ ನೀಡುವ ಹಸಿರು ಉಡುಗೊರೆಯಾಗಿದ್ದು, ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನೂ ಫೌಂಡೇಶನ್ ವಹಿಸಲಿದೆ ಎಂದರು.

ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್, ರಾಜು ಕಾಳೆ, ಚನ್ನು ಹೊಸಮನಿ, ಮೇಘರಾಜ ಕೆರೂರ, ವಿನಾಯಕ ನಾಯಕರ, ಶಿವಬಸಪ್ಪ ಕೋರಿ, ಅಶೋಕ, ನರೇಶ್ ನಿಕಮ ಸೇರಿದಂತೆ ಕಾಲನಿ ನಿವಾಸಿಗಳು ಹಾಗೂ ಸಂಸ್ಥೆಯ ಸದಸ್ಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು