ಹಾವೇರಿ: ಜಿಲ್ಲೆಯಲ್ಲಿ ಆ. 27ರಂದು ನಡೆಯಲಿರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಆಯ್ದ ಸ್ಥಳಗಳಲ್ಲಿ ಮದ್ದು ಮಾರಾಟ ಮಾಡಲು ಅಧಿಕೃತ ಪರವಾನಗಿ ಪಡೆದ ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಅದೇ ರೀತಿ ಗುತ್ತಲ ಪಟ್ಟಣದ ಖುಲ್ಲಾ ಜಾಗ, ಹೊಸರಿತ್ತಿ ಗ್ರಾಪಂ ಆಸ್ತಿ, ರಾಣಿಬೆನ್ನೂರು ತಾಲೂಕು ಕ್ರೀಡಾಂಗಣ, ಮೇಡ್ಲೇರಿ ಗ್ರಾಮದ ಬಯಲು ಜಾಗ, ಹಲಗೇರಿ ಬಯಲು ಜಾಗ, ಅರೇಮಲ್ಲಾಪುರ ಗ್ರಾಮದ ಖಾಲಿ ಜಾಗ, ಬ್ಯಾಡಗಿಯ ತಾಲೂಕು ಕ್ರೀಡಾಂಗಣ, ಹಿರೇಕೆರೂರು ತಾಲೂಕಿನ ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮದ ಖುಲ್ಲಾ ಜಾಗ, ಹಂಸಭಾವಿ ಖುಲ್ಲಾ ಜಾಗ, ರಟ್ಟೀಹಳ್ಳಿ ಪಟ್ಟಣದ ಖುಲ್ಲಾ ಜಾಗ, ಮಾಸೂರು ಗ್ರಾಮದ ಖುಲ್ಲಾ ಜಾಗ, ಹಿರೇಮೊರಬ ಖುಲ್ಲಾ ಜಾಗ, ಶಿಗ್ಗಾವಿ ಎಪಿಎಂಸಿ ಬಯಲು ಜಾಗ, ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ಹುಲಗೂರು ಗ್ರಾಪಂ ಖುಲ್ಲಾ ಜಾಗ, ಸವಣೂರು ತಾಲೂಕು ಕ್ರೀಡಾಂಗಣ, ಹಾನಗಲ್ಲ ತಾಲೂಕು ಕ್ರೀಡಾಂಗಣ ಹಾಗೂ ಅಕ್ಕಿಆಲೂರು ಗ್ರಾಪಂ ಖುಲ್ಲಾ ಜಾಗ ಹೀಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಮದ್ದು ಸಂಗ್ರಹಣೆ ಹಾಗೂ ಮಾರಾಟ ಮಾಡಬೇಕು. ಈ ಆದೇಶ ಉಲ್ಲಂಘನೆ ಮಾಡಿದ ಲೈಸೆನ್ಸ್‌ದಾರರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.