ಹುಬ್ಬಳ್ಳಿ: ನಾಡಿನಾದ್ಯಂತ ಪ್ರತಿವರ್ಷವೂ ಕೆಲವೆಡೆ ಕೆಲ ಮನೆತನಗಳು ವಂಶಪಾರಂಪರಿಕವಾಗಿ ಗಣೇಶೋತ್ಸವ ಆಚರಿಸುತ್ತಿದ್ದು, ಅದರಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿಯಲ್ಲಿ ಕುಲಕರ್ಣಿ ಮನೆತನಗಳ ಆಚರಣೆ ದ್ವಿಶತಮಾನದ ಅಂಚಿನಲ್ಲಿದೆ.
ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೂಡಲಿ ಮಗದೊಂದು ಕೈಯಲ್ಲಿ ತ್ರಿಶೂಲ. ಸಿಂದೂರ ಮೈಬಣ್ಣದ ಈ ವಿಶಿಷ್ಟ ಗಣಪತಿ ಕುಲಕರ್ಣಿ ಮನೆತನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ.
1821ರಲ್ಲಿ ಹಳೆ ಹುಬ್ಬಳ್ಳಿಯ ಶ್ರೀ ದತ್ತ ದೇವಸ್ಥಾನಕ್ಕೆ ಬಂದು ನೆಲೆಸಿದ ಶ್ರೀ ಕೃಷ್ಣಂದ್ರ ಸ್ವಾಮಿಗಳು 1827ರ ಸುಮಾರಿಗೆ ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಶಾನಭೋಗ ತಮ್ಮಪ್ಪನವರಿಂದ ಪಾದಪೂಜೆ, ಭಿಕ್ಷೆ ಸ್ವೀಕರಿಸಿದ ಗುರುಗಳ ಆದೇಶದಂತೆ ತಮ್ಮಪ್ಪನವರು ಪ್ರತಿವರ್ಷ ಶ್ರೀ ಗಣೇಶೋತ್ಸವ ಆರಂಭಿಸಿದರು. ಸಂತಾನವಿಲ್ಲದ ತಮ್ಮಪ್ಪನವರಿಗೆ ಗಣೇಶೋತ್ಸವ ಆಚರಣೆ ಆರಂಭಿಸಿದ ಬಳಿಕ ಸಂತಾನ ಭಾಗ್ಯ ಒದಗಿತು. ತಮ್ಮಪ್ಪನವರಿಂದ ಆರಂಭವಾದ ಗಣೇಶೋತ್ಸವ ಈಗ ಏಳನೇ ತಲೆಮಾರಿನ ವರೆಗೂ ಮುಂದುವರೆದಿದೆ.ಆಚರಣೆ ಹೇಗೆ?
ಈ ಬಾರಿಯೂ ಗಣಪತಿ ದರುಶನಕ್ಕೆ ಬರುವ ಭಕ್ತಾದಿಗಳಿಗೆ ಗ್ರಾಮ ಪಂಚಾಯಿತಿ ಎಲ್ಲ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಭಕ್ತರಿಗೆ ಉಚಿತ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ.
24ಎಚ್‌ಯುಬಿ21, 21ಎಛಬ್ಬಿ ಗಣಪತಿ.