ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಪಟ್ಟಣದ ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಬುಧವಾರ ಗೌರಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳ ಆಚರಣೆ ವೇಳೆ ಯಾವುದೇ ಕೋಮಿನ ಭಾವನೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸುವ ಮೂಲಕ ಕಾನೂನು ಪಾಲಿಸಬೇಕು. ಇಲ್ಲಿಯ ತನಕವೂ ಕೊಳ್ಳೇಗಾಲ ಉಪವಿಭಾಗದಲ್ಲಿ ಎಲ್ಲ ಧರ್ಮದ ಮತ್ತು ಸಮುದಾಯಗಳ ಹಬ್ಬ-ಆಚರಣೆಗಳು ಶಾಂತಿ ಯುತವಾಗಿ , ಸೌಹಾರ್ದತೆಯಿಂದಲೇ ನಡೆದುಕೊಂಡು ಬಂದಿವೆ.
ವೈಯಕ್ತಿಕಯವಾಗಿ ಪ್ರತಿಯೊಬ್ಬರಲ್ಲೂ ಸೋದರತ್ವ ಮನೋಭಾವನೆ ಇಲ್ಲಿರುವುದು ವಿಶೇಷ. ಅಂತೆಯೇ, ಮುಂಬರುವ ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ನಿಟ್ಟಿನಲ್ಲಿ ಎಲ್ಲಾ ಸಮಾಜಗಳ ಮುಖಂಡರು ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು ಉಪವಿಭಾಗ ವ್ಯಾಪ್ತಿಯಲ್ಲಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಇಲಾಖೆ ಕಟ್ಟೆಚ್ಚರವಹಿಸಲಾಗಿದೆ, ಹನೂರು, ಯಳಂದೂರು ಸೇರಿದಂತೆ ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯಲ್ಲಿ 457ಕಡೆಗಳಲ್ಲಿ ಗಣಪತಿ ಮೂರ್ತಿ ಸ್ಥಾಪನೆ ಮಾಡಲು ಸಂಬಂಧ ಅರ್ಜಿಗಳು ಬಂದಿವೆ, ಈ ಸಂಬಂಧ 337ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂನೂರಕ್ಕೂ ಅಧಿಕ ಮಂದಿ ಗೖಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು