ಭಾವೈಕ್ಯತೆ ಪ್ರತೀಕ ಗಣೇಶ ಉತ್ಸವ

KannadaprabhaNewsNetwork |  
Published : Sep 01, 2025, 01:03 AM IST
ಫೋಟೋ: 31 ಹೆಚ್‌ಎಸ್‌ಕೆ 2ಹೊಸಕೋಟೆ ನಗರದ ಗಣಗಲು ರಸ್ತೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದ ವತಿಯಿಂದ ನಡೆದ ದ್ವಿತೀಯ ವರ್ಷದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಾರ್ಡಿನ ನಾಗರೀಕರು ಮೆರವಣಿಗೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯದ ವಾತಾವರಣ ಉಂಟು ಮಾಡಲು ಗಣೇಶೋತ್ಸವ ಪೂರಕವಾಗಿದೆ ಎಂದು ರಕ್ಷ ರಾಜ ಗೆಳೆಯರ ಬಳಗದ ಮುಖ್ಯಸ್ಥ ಗಿರೀಶ್ ತಿಳಿಸಿದರು.

ಹೊಸಕೋಟೆ: ಗ್ರಾಮಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯದ ವಾತಾವರಣ ಉಂಟು ಮಾಡಲು ಗಣೇಶೋತ್ಸವ ಪೂರಕವಾಗಿದೆ ಎಂದು ರಕ್ಷ ರಾಜ ಗೆಳೆಯರ ಬಳಗದ ಮುಖ್ಯಸ್ಥ ಗಿರೀಶ್ ತಿಳಿಸಿದರು.

ನಗರದ ಗಣಗಲು ರಸ್ತೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗ ಪ್ರತಿಷ್ಠಾಪಿಸಿದ್ದ ದ್ವಿತೀಯ ವರ್ಷದ ಗಣೇಶೋತ್ಸವದಲ್ಲಿ ಮಾತನಾಡಿದ ಅವರು, ಕೇವಲ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿದ್ದ ಗಣಪತಿ ಹಬ್ಬವನ್ನು ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಿ ಸರ್ವ ಧರ್ಮಗಳು ಆಚರಿಸುವಂತೆ ಮಾಡಿದ ಕೀರ್ತಿ ಬಾಲಗಂಗಾಧರ್ ನಾಥ್ ತಿಲಕರಿಗೆ ಸಲ್ಲುತ್ತದೆ. ಇದರಿಂದ ಗ್ರಾಮಗಳಲ್ಲಿ ಸಾಮರಸ್ಯದ ವಾತಾವರಣ ಉಂಟಾಗುವುದಲ್ಲದೆ ಯುವ ಸಮುದಾಯದಲ್ಲಿ ಭಾವೈಕ್ಯತೆ ಬೆಳೆಯುತ್ತದೆ. ಗಣೇಶೋತ್ಸವದ ಮೂಲಕ ವಾರ್ಡಿನ ನಾಗರಿಕರು ಒಂದೆಡೆ ಸೇರಲು ಸಾಧ್ಯವಾಗಿದೆ ಎಂದರು.

ವಿವೇಕಾನಂದ ಶಾಲಾ ಶಿಕ್ಷಕಿ ಪುಷ್ಪಾ ಮಾತನಾಡಿ, ಬಡಾವಣೆಯ ಯುವಕರ ಒತ್ತಾಯದ ಮೇರೆಗೆ ಗಣಪತಿ ಪ್ರತಿಷ್ಠಾಪನೆ ಮಾಡಿ ಐದು ದಿನ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಗುತ್ತಿದೆ. ಗಣಪತಿ ಮೆರವಣಿಗೆ ಜೊತೆಗೆ ವಾರ್ಡಿನ ಮಹಿಳೆಯರು, ಮಕ್ಕಳಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಬಹುಮಾನ ವಿತರಿಸಿದ್ದೇವೆ ಎಂದರು. ಈ ವೇಳೆ ರಕ್ಷರಾಜ ಗೆಳೆಯರ ಬಳಗದ ಮುಖಂಡರಾದ ನಾರಾಯಣಸ್ವಾಮಿ, ಮನುಕುಮಾರ್, ರವಿಕುಮಾರ್, ಗಿರೀಶ್, ಕೃಷ್ಣಮೂರ್ತಿ, ಶಕ್ತಿಪ್ರಸಾದ್, ವಿಷ್ಣು, ಮಂಜುನಾಥ್, ಶಶಿ, ಪ್ರವೀಣ್, ಬಸವರಾಜ್, ಮುರಳಿ ವಾರ್ಡಿನ ನಾಗರೀಕರು ಹಾಜರಿದ್ದರು.ಫೋಟೋ: 31 ಹೆಚ್‌ಎಸ್‌ಕೆ 2

ಹೊಸಕೋಟೆಯ ಬಾಲಾಜಿ ಗೋಲ್ಡ್ ಸಿಟಿ ಬಡಾವಣೆಯಲ್ಲಿ ರಕ್ಷ ರಾಜ ಗೆಳೆಯರ ಬಳಗದ ಗಣೇಶೋತ್ಸವ ಮೆರವಣಿಗೆಯಲ್ಲಿ ವಾರ್ಡಿನ ನಾಗರಿಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಗದ ಮುಖ್ಯಸ್ಥ ಗಿರೀಶ್, ಶಿಕ್ಷಕಿ ಪುಷ್ಪಾ, ನಾರಾಯಣಸ್ವಾಮಿ, ಮನುಕುಮಾರ್, ರವಿಕುಮಾರ್, ಕೃಷ್ಣಮೂರ್ತಿ, ಶಕ್ತಿಪ್ರಸಾದ್, ವಿಷ್ಣು ಇತರರಿದ್ದರು.

PREV

Recommended Stories

ಕೇಂದ್ರದ ಅನ್ಯಾಯ ಬಗ್ಗೆ ಜೆಡಿಎಸ್‌, ಬಿಜೆಪಿ ಸಂಸದರಿಂದ ಮೌನ : ಸಿಎಂ
ಡಿ.ಕೆ ಶಿವಕುಮಾರ್ ಪುಸ್ತಕ ಬಿಡುಗಡೆ : ನೀರಿನ ಹೆಜ್ಜೆ ಪುಸ್ತಕದಲ್ಲೇನಿದೆ?