ಸತ್ಯವನ್ನು ಮರೆಮಾಚಲು ಸಾಮಾಜಿಕ ಮಾಧ್ಯಮ ಬಳಕೆ: ನಿರಂಜನ್‌ ಕುಮಾರ್‌

KannadaprabhaNewsNetwork |  
Published : Aug 06, 2026, 01:45 AM IST
 ಮನವಿ | Kannada Prabha

ಸಾರಾಂಶ

ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸೋಲಿನ ನಂತರ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ ಆಶಯದ ಪೋಸ್ಟ್ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಒಂದು ಸರಳ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್‌ ಹೇಳಿದ್ದಾರೆ.ಶಾಸಕರ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ತಾಲೂಕಿನ ಎಷ್ಟು ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ಬಹುತೇಕ ಎಲ್ಲ ಕೆರೆಗಳು ಇನ್ನೂ ಖಾಲಿಯಾಗಿರುವುದು ಜನರ ಮುಂದಿರುವ ವಾಸ್ತವ ಸತ್ಯ ಎಂದು ಟಾಂಗ್ ನೀಡಿದ್ದಾರೆ.

ಶಾಸಕ ಗಣೇಶ್‌ ಪ್ರಸಾದ್‌ರಿಗೆ ಮಾಜಿ ಶಾಸಕ ಟಾಂಗ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಿಎಲ್‌ಡಿ ಬ್ಯಾಂಕ್ ಚುನಾವಣೆ ಸೋಲಿನ ನಂತರ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸುತ್ತಿದ್ದೇನೆ. ಕೆಲವರು ಗೊಂದಲ ಸೃಷ್ಟಿಸುವ ಉದ್ದೇಶದಿಂದ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂಬ ಆಶಯದ ಪೋಸ್ಟ್ ಮಾಡಿದ್ದಾರೆ. ಆದರೆ ಕ್ಷೇತ್ರದ ಜನರು ಒಂದು ಸರಳ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್‌ ಹೇಳಿದ್ದಾರೆ.ಶಾಸಕರ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ತಾಲೂಕಿನ ಎಷ್ಟು ಕೆರೆ ಕಟ್ಟೆಗಳಿಗೆ ನೀರು ಬಂದಿದೆ. ಬಹುತೇಕ ಎಲ್ಲ ಕೆರೆಗಳು ಇನ್ನೂ ಖಾಲಿಯಾಗಿರುವುದು ಜನರ ಮುಂದಿರುವ ವಾಸ್ತವ ಸತ್ಯ ಎಂದು ಟಾಂಗ್ ನೀಡಿದ್ದಾರೆ.

ಶೋಷಿಯಲ್ ಮೀಡಿಯಾದಲ್ಲಿ ಶಾಸಕರು ಪೋಸ್ಟ್ ಪ್ರಕಟಿಸುವುದರಿಂದ ವಾಸ್ತವ ಬದಲಾಗುವುದಿಲ್ಲ. ತಾಲೂಕಿ‌ನ ಜನತೆಗೆ ತಾಲೂಕಿನ ಪ್ರಸ್ತುತ ಸ್ಥಿತಿ ಚೆನ್ನಾಗಿ ತಿಳಿದಿದೆ. ಜನರ ನಿರೀಕ್ಷೆ ಪ್ರಚಾರವಲ್ಲ, ಶಾಶ್ವತ ಅಭಿವೃದ್ಧಿ ಮತ್ತು ಕೆರೆಗಳಿಗೆ ನೀರು ಹರಿಸುವಂತಹ ಪರಿಣಾಮಕಾರಿ ಕೆಲಸ ಆಗಬೇಕಿದೆ ಎಂದು ಹೇಳಿಕೆಯಲ್ಲಿ ಕಾಳೆಲದಿದ್ದಾರೆ.

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಮತದಾರರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಜನಾದೇಶವನ್ನು ಗೌರವಿಸಿ, ಆರೋಪ-ಪ್ರತ್ಯಾರೋಪಗಳಿಗಿಂತ ಅಭಿವೃದ್ಧಿಗೆ ಆದ್ಯತೆ ನೀಡಿದರೆ ತಾಲೂಕಿ‌ನ ಜನರು ಖಂಡಿತ ಸ್ವಾಗತಿಸುತ್ತಾರೆ ಎಂದು ವ್ಯಂಗವಾಡಿದ್ದಾರೆ.

ಪ್ರಚಾರಕ್ಕಿಂತ ಅಭಿವೃದ್ಧಿ ಮುಖ್ಯ. ಪೋಸ್ಟರ್‌ಗಳಿಗಿಂತ ಫಲಿತಾಂಶ ಮುಖ್ಯ ಎಂಬುದು ಗುಂಡ್ಲುಪೇಟೆ ಜನತೆಗೆ ಸತ್ಯ ತಿಳಿದಿದೆ. ಅದೇನೆಂದರೆ ಕಳೆದ ಮೂರು ವರ್ಷಗಳಿಂದ ತಾಲೂಕಿ‌ನ ಯಾವುದೇ ಕೆರೆಗಳಿಗೆ ನೀರು ತುಂಬಿಸಿಲ್ಲ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ