ಬೆಳಗ್ಗೆ ವರೆಗೂ ನಡೆದ ಗಣೇಶ ವಿಸರ್ಜನಾ ಮೆರವಣಿಗೆ

KannadaprabhaNewsNetwork |  
Published : Sep 02, 2025, 12:00 AM IST
1ಕೆಪಿಎಲ್24 ಕೊಪ್ಪಳ ನಗರದಲ್ಲಿ  ಐದನೇ ದಿನ ಗಣೇಶ ಮೂರ್ತಿ ಮೆರವಣಿಗೆ  | Kannada Prabha

ಸಾರಾಂಶ

ಮೆರವಣಿಗೆಯಲ್ಲಿ ನಾನಾ ವಾದ್ಯ, ಹಗಲು ವೇಷಗಾರರು ರಾಮಾಯಣ, ಮಹಾಭಾರತ ದರ್ಶನ ನೀಡಿದರು. ರಾಕ್ಷಸರ ಸಂಹಾರ, ರಾಮ, ಲಕ್ಷ್ಮಣರ ಯುದ್ಧ ಸೇರಿದಂತೆ ರಾಮಾಯಣ ಮತ್ತು ಮಹಾಭಾರತದ ಚಿತ್ರಣವನ್ನು ಮೆರವಣಿಗೆಯುದ್ದಕ್ಕೂ ಪ್ರದರ್ಶನ ಮಾಡಿದರು.

ಕೊಪ್ಪಳ:

ನಗರದಲ್ಲಿ 5ನೇ ದಿನದ ಗಣೇಶ ವಿಸರ್ಜನೆ ಮೆರವಣಿಗೆ ಭಾನುವಾರ ಸಂಜೆ ಆರಂಭವಾಗಿದ್ದರೂ ಮುಗಿದಿದ್ದು ಸೋಮವಾರ ಬೆಳಗ್ಗೆ ಬೆಳ್ಳಿಚುಕ್ಕಿ ಮೂಡಿದಾಗ!ಗವಿಶ್ರೀ ನಗರದ ಗಣೇಶ ಮೂರ್ತಿ ಸೇರಿದಂತೆ ಹತ್ತಾರು ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಮುನ್ನ ನಗರದ ರಾಷ್ಟ್ರೀಯ ಹೆದ್ದಾರಿ ಹಾಗೂ ಜವಾಹರ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಡಿಜೆ ಸೌಂಡ್‌ಗೆ ಅವಕಾಶ ಇಲ್ಲದಿದ್ದರೂ ಲೆಕ್ಕಿಸದೇ ಸಾಲು ಸಾಲು ಡಿಜೆ ಸೌಂಡ್ ಅಬ್ಬರ ಕೇಳಿಸಿತು. ರಾತ್ರಿಪೂರ್ತಿ ನಿರಂತರವಾಗಿ ಗಣಪತಿ ಮೂರ್ತಿ ಮೆರವಣಿಗೆ ಸಾಗಿತು.

ವಿಜೃಂಭಣೆಯ ಮೆರವಣಿಗೆ:

ಮೆರವಣಿಗೆಯಲ್ಲಿ ನಾನಾ ವಾದ್ಯ, ಹಗಲು ವೇಷಗಾರರು ರಾಮಾಯಣ, ಮಹಾಭಾರತ ದರ್ಶನ ನೀಡಿದರು. ರಾಕ್ಷಸರ ಸಂಹಾರ, ರಾಮ, ಲಕ್ಷ್ಮಣರ ಯುದ್ಧ ಸೇರಿದಂತೆ ರಾಮಾಯಣ ಮತ್ತು ಮಹಾಭಾರತದ ಚಿತ್ರಣವನ್ನು ಮೆರವಣಿಗೆಯುದ್ದಕ್ಕೂ ಪ್ರದರ್ಶನ ಮಾಡಿದರು. ಮೆರವಣಿಗೆಯಲ್ಲಿ ಯುವಕರು ಮಾತ್ರವಲ್ಲದೆ ಯುವತಿಯರು ಸಹ ತಡರಾತ್ರಿಯಾಗಿದ್ದರೂ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರಲ್ಲದೆ ಡಿಜೆ ಸೌಂಡ್‌ ಅಬ್ಬರಕ್ಕೆ ಹೆಜ್ಜೆ ಹಾಕಿದರು.

ರಾತ್ರಿಪೂರ್ತಿ ನಿಗಾ:

ಮೆರವಣಿಗೆ ಒಂದಾದ ಮೇಲೆ ಒಂದು ಸಾಗುತ್ತಿತ್ತು, ತಡರಾತ್ರಿಯಾದರೂ ಮುಗಿಯಲೇ ಇಲ್ಲ. ಹೀಗಾಗಿ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಅದರಲ್ಲೂ ಜವಾಹರ ರಸ್ತೆಯಲ್ಲಿ ವಿಶೇಷ ಭದ್ರತೆ ಒದಗಿಸಿದ್ದರು. ಹಿರೇಮಸೂತಿಯ ಬಳಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಅವರು ರಾತ್ರಿಪೂರ್ತಿ ಇದ್ದು, ವಿಶೇಷ ನಿಗಾ ವಹಿಸಿದರು. ಮೆರವಣಿಗೆಯದ್ದಕ್ಕೂ ನಡೆಯುತ್ತಿದ್ದ ಬೆಳವಣಿಗಳನ್ನು ಗಮನಿಸುತ್ತಲೇ ಮತ್ತು ಸಹ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಲೇ ಸುತ್ತಾಡುತ್ತಾ, ಶಾಂತಿಯುತವಾಗಿ ಮೆರವಣಿಗೆ ನಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಪೊಲೀಸ್ ವರಿಷ್ಠಾಧಿಕಾರಿ ಮನೆಗೆ ತೆರಳಿದಾಗ ಬೆಳಗ್ಗೆ 5 ಗಂಟೆಯಾಗಿತ್ತು.

ಶಾಂತಿಯುತ ಮೆರವಣಿಗೆ:

ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಎಲ್ಲೆಯೂ ದ್ವೇಷದ ಭಾವನೆಯಾಗಲಿ, ಗಲಾಟೆಯಾಗಲೇ ನಡೆಯಲಿಲ್ಲ.ಐದನೇ ದಿನದ ಮೆರವಣಿಗೆ ಶಾಂತಿಯುತವಾಗಿ ನಡೆದಿದೆ. ಬೆಳಗ್ಗೆ ನಾಲ್ಕೂವರೆ ವರೆಗೂ ನಡೆದಿತ್ತು ಎಂದು ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಹೇಳಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ