ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಂಬಂಧಗಳ ಗಟ್ಟಿತನವಿಲ್ಲದಂತಾಗಿರುವ ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಮನೆಯಲ್ಲಿ ತಂದೆ ತಾಯಿಗಳು ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ಅವರನ್ನು ಗೌರವಿಸಿ ಸತ್ಕರಿಸುವುದು ಅವಶ್ಯಕ ಎಂಬುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯ ನಿರ್ವಹಣಾಧಿಕಾರಿ ಡಾ. ಭಾರತಿ ನಾಗೇಶ್ ರವರು ಮಾತನಾಡಿ ಮನೆಯಲ್ಲಿ ಹಿರಿಯ ಪೋಷಕರ ಜವಾಬ್ದಾರಿ ಅತ್ಯಗತ್ಯ, ತಂದೆ ತಾಯಿಯರು ತಮ್ಮ ಬಿಡುವಿಲ್ಲದ ಕೆಲಸದ ನಡುವೆ ತಮ್ಮ ಮಕ್ಕಳ ಕಡೆ ಗಮನವಹಿಸಲು ಸಾಧ್ಯವಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕಥೆ, ಒಗಟು, ಇತ್ಯಾದಿ ಕಲೆಗಳ ಮೂಲಕ ಮಕ್ಕಳಲ್ಲಿ ಸಾಮಾಜಿಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಹಿರಿಯ ಪೋಷಕರು ನಿರ್ವಹಿಸುತ್ತಾರೆ ಎಂದರು.
ಗಾಂಧಿ ವೃದ್ಧಾಶ್ರಮದ ಹಿರಿಯರಿಗೆ ಹಾಗೂ ನಮ್ಮ ನಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಮಹಿಳಾ ಸಿಬ್ಬಂದಿಗೆ ಬಾಗಿನ ಅರ್ಪಿಸಿದರು. ವಿದ್ಯಾರ್ಥಿಗಳಲ್ಲಿ ಸ್ನೇಹ ಪರ ಚಿಂತನೆ ಒಳ್ಳೆಯ ನೈತಿಕ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವು ಅವಿಸ್ಮರಣೀಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗಾಂಧಿ ವೃದ್ಧಾಶ್ರಮದ ಹಿರಿಯರಿಗೆ ಕೆಲವು ಮನರಂಜನಾ ಕ್ರೀಡೆಗಳು ಹಾಗೂ ಭೋಜನಾಕೂಟ ಆಯೋಜಿಸಲಾಗಿತ್ತು. ಎಲ್ಲರೂ ಸಂಭ್ರಮ ಸಡಗರದಿಂದ ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಡಾ. ಸುಜಾ ಪಿ. ಎಸ್, ಆಡಳಿತಾಧಿಕಾರಿಗಳಾದ ಪಿಲಿಫ್, ಗಾಂಧಿ ವೃದ್ಧಾಶ್ರಮದ ಮಾತೃ ಸಮಾನರಾದ ಹಿರಿಯರು, ವಿದ್ಯಾರ್ಥಿಗಳು, ಶಾಲೆಯ ಬೋಧಕ, ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.