(ಓಕೆ) ಗಣೇಶ ವಿಸರ್ಜನೆ: ಭಾರೀ ಡಿಜೆ ಸೌಂಡ್ ಗೆ ಹೃದಯಾಘಾತ- ಯುವಕ ಸಾವು

KannadaprabhaNewsNetwork | Published : Oct 11, 2023 12:45 AM

ಸಾರಾಂಶ

ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬೇಕಾಬಿಟ್ಟಿ ಕಿವಿಗಡಚಿಕ್ಕುವ, ನಿಯಮ ಮೀರಿದ ಶಬ್ದದೊಂದಿಗೆ ಡಿಜೆ ಹಚ್ಚಿ ಕುಣಿಯುತ್ತಿದ್ದ ಯುವಕನೋರ್ವನಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಆತ ಮೃತಪಟ್ಟ ದಾರುಣ ಘಟನೆ ಇಲ್ಲಿಯ ಪ್ರಶಾಂತ ನಗರದಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬೇಕಾಬಿಟ್ಟಿ ಕಿವಿಗಡಚಿಕ್ಕುವ, ನಿಯಮ ಮೀರಿದ ಶಬ್ದದೊಂದಿಗೆ ಡಿಜೆ ಹಚ್ಚಿ ಕುಣಿಯುತ್ತಿದ್ದ ಯುವಕನೋರ್ವನಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಆತ ಮೃತಪಟ್ಟ ದಾರುಣ ಘಟನೆ ಇಲ್ಲಿಯ ಪ್ರಶಾಂತ ನಗರದಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ. ಪ್ರಶಾಂತ ನಗರದ ಸುದೀಪ್ ಸಜ್ಜನ್ (23) ಎನ್ನುವ ಯುವಕನೇ ಮೃತ ಪಟ್ಟ ದುರ್ದೈವಿ. ಪ್ರಶಾಂತ ನಗರದ ಈಶ್ವರ ಗಜಾನನ ಯುವಕ ಮಂಡಳಿಯಿಂದ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅತಿಯಾದ, ನಿಯಮ ಬಾಹೀರವಾಗಿ ಡಿಜೆ ಸೌಂಡ್ ನಲ್ಲಿ ಕುಣಿಯುತ್ತಿದ್ದ ಸಂದರ್ಭದಲ್ಲಿ ಹೃದಯಘಾತವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ರಾತ್ರಿ 8 ಗಂಟೆಗೆ ಪ್ರಾರಂಭಗೊಂಡ ಮೆರವಣಿಗೆ ರಾತ್ರಿ 1 ಗಂಟೆ ಸುಮಾರಿಗೆ ಸುಕೋ ಬ್ಯಾಂಕ್ ಮುಂಭಾಗದ ರಸ್ತೆ ಮಾರ್ಗದಲ್ಲಿ ಆಗಮಿಸಿದಾಗ ಡಿಜೆ ಅಬ್ಬರದ ಸೌಂಡ್‌ಗೆ ಕುಣಿಯುತ್ತಿದ್ದಾಗ ಸುದೀಪಗೆ ಹೃದಯಾಘಾತವಾಗಿದೆ. ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ನಾಲ್ಕು ಡಿಜೆ ಮತ್ತು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Share this article