ತೊಟ್ಟಂ ಗಣೇಶೋತ್ಸವದಲ್ಲಿ ಕೋಮು ಸೌಹಾರ್ದ ಸಂದೇಶ

KannadaprabhaNewsNetwork |  
Published : Sep 19, 2026, 02:45 AM IST
ಉಡುಪಿಯ ತೊಟ್ಟಂನ ಗಣೇಶೋತ್ಸವದಲ್ಲಿ ಸ್ಥಳೀಯ ಕ್ರೈಸ್ತ ಧರ್ಮಗುರುಗಳು ಭಾಗವಹಿಸಿದರು | Kannada Prabha

ಸಾರಾಂಶ

ತೊಟ್ಟಂ ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಫಾ. ಹೆನ್ರಿ ಮಸ್ಕರೇನ್ಹಸ್ ಹಾಗೂ ಉಡುಪಿ ವಲಯದ ಪ್ರಧಾನ ಧರ್ಮಗುರು ವಂ. ಡೆನಿಸ್ ಡೆಸಾ ಹಾಗೂ ಕ್ರೈಸ್ತ ಬಾಂಧವರು ಭೇಟಿ ನೀಡಿದರು, ಅವರನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆ. ಸಾಲ್ಯಾನ್ ಹಾಗೂ ಸಮಿತಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ಪರಸ್ಪರ ಕೋಮು ಸೌಹಾರ್ದದ ಸಂದೇಶವನ್ನು ಸಾರಿದರು.

ಉಡುಪಿ: ತೊಟ್ಟಂ ಗ್ರಾಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಫಾ. ಹೆನ್ರಿ ಮಸ್ಕರೇನ್ಹಸ್ ಹಾಗೂ ಉಡುಪಿ ವಲಯದ ಪ್ರಧಾನ ಧರ್ಮಗುರು ವಂ. ಡೆನಿಸ್ ಡೆಸಾ ಹಾಗೂ ಕ್ರೈಸ್ತ ಬಾಂಧವರು ಭೇಟಿ ನೀಡಿದರು, ಅವರನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕೆ. ಸಾಲ್ಯಾನ್ ಹಾಗೂ ಸಮಿತಿಯ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ಪರಸ್ಪರ ಕೋಮು ಸೌಹಾರ್ದದ ಸಂದೇಶವನ್ನು ಸಾರಿದರು.

ಧರ್ಮಗುರುಗಳು ಮತ್ತು ಕ್ರೈಸ್ತ ಬಾಂಧವರು ಹಬ್ಬದ ಶುಭಾಶಯ ತಿಳಿಸಿದರು. ತೊಟ್ಟಂ ಚರ್ಚಿನ ಪಾಲನಾ ಪರಿಷತ್ ಉಪಾಧ್ಯಕ್ಷ ಲೆಸ್ಲಿ ಆರೋಜಾ, ಪಾಲನಾ ಪರಿಷತ್ ಸದಸ್ಯರು, ಹಾಗೂ ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟಿನ ಧರ್ಮಭಗಿನಿಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಗಾಮಾರ್ಟ್ ಕಾಮಗಾರಿ ಶೀಘ್ರ ಪೂರ್ಣ
ಡಿಸಿಸಿ ಬ್ಯಾಂಕಿಗೆ 140 ಹುದ್ದೆಗಳ ನೇಮಕಾತಿಗೆ ಹೊಸ ಪ್ರಸ್ತಾವ