ನಾಪೋಕ್ಲು: ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025 -26ರ ಸಾಲಿನಲ್ಲಿ 77.45 ಲಕ್ಷ ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆಟೋಳಿರ ಎಸ್. ಪೂವಯ್ಯ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘದಲ್ಲಿ 2546 ಸದಸ್ಯರಿದ್ದು ಸದಸ್ಯರ ಪಾಲು ಬಂಡವಾಳ ಒಂದು ಕೋಟಿ 49 ಲಕ್ಷ ರು. ಗಳಾಗಿವೆ ಎಂದರು. ಒಟ್ಟು ನಿಧಿ ಮೂರು ಕೋಟಿ 98 ಲಕ್ಷ , ಒಟ್ಟು ಠೇವಣಿ 58 ಕೋಟಿ 96 ಲಕ್ಷ ರು. , ಒಟ್ಟು ಹೂಡಿಕೆ 16 ಕೋಟಿ ರುಗಳು , ಸದಸ್ಯರಿಗೆ ಒಟ್ಟು ವಿತರಿಸಿದ ಸಾಲ 51 ಕೋಟಿ 96 ಲಕ್ಷ ರು.. 2025,26 ನೇ ಸಾಲಿನಲ್ಲಿ ಒಟ್ಟು 248 ಕೋಟಿ 95 ಲಕ್ಷ ರು. ವ್ಯವಹಾರವನ್ನು ಮಾಡಿದೆ ಎಂದರು. 2025-26 ನೇ ಸಾಲಿನ ಮಡಿಕೇರಿ ತಾಲೂಕು ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂಘವೆಂದು ಡಿಸಿಸಿ ಬ್ಯಾಂಕಿನಿಂದ ಪ್ರಥಮ ಬಹುಮಾನ ಪಡೆದುಕೊಂಡಿದೆ ಎಂದರು.ಸಂಘದ ವಾರ್ಷಿಕ ಮಹಾಸಭೆ ಇಲ್ಲಿನ ಕೊಡವ ಸಮಾಜದಲ್ಲಿ 19ರಂದು ನಡೆಯಲಿದ್ದು ಸದಸ್ಯರು ಮಹಾಸಭೆಗೆ ಆಗಮಿಸಬೇಕೆಂದು ಕೋರಿದರು. ಸಂಘದ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಪಿಯುಸಿ ಅಂತಿಮ ಪದವಿ ಹಾಗೂ ಪೋಸ್ಟ್ ಪದವಿ ಜೊತೆಗೆ ಮೆಡಿಕಲ್ ಇಂಜಿನಿಯರಿಂಗ್ ಡೆಂಟಲ್ ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಿಸಲಾಗುವುದು. ಇದಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಕೀರ್ತಿ ತಂದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲು ಉದ್ದೇಶಿಸಲಾಗಿದೆ ಎಂದರು.