ನಾಳೆ ಗಂಗಾ ಪರಮೇಶ್ವರಿ ಸಮುದಾಯ ಭವನ ಉದ್ಘಾಟನೆ

KannadaprabhaNewsNetwork |  
Published : May 07, 2026, 02:30 AM IST
ಗಂಗಾಮತ ಸಮುದಾಯ ಭವನದ ನೋಟ | Kannada Prabha

ಸಾರಾಂಶ

ಪಟ್ಟಣದಲ್ಲಿ ಶ್ರೀ ಗಂಗಾ ಪರಮೇಶ್ವರಿ ಸಮುದಾಯ ಭವನದ ಉದ್ಘಾಟನೆ ಮೇ ೮ರಂದು ನಡೆಯಲಿದೆ. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಗಂಗಾಮತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ತಿಳಿಸಿದರು.

ಹಾನಗಲ್ಲ: ಪಟ್ಟಣದಲ್ಲಿ ಶ್ರೀ ಗಂಗಾ ಪರಮೇಶ್ವರಿ ಸಮುದಾಯ ಭವನದ ಉದ್ಘಾಟನೆ ಮೇ ೮ರಂದು ನಡೆಯಲಿದೆ. ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು ಎಂದು ಗಂಗಾಮತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ತಿಳಿಸಿದರು.

ಮೇ ೮ರಂದು ನಡೆಯುವ ಸಮಾರಂಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಭೋಜನಾಲಯ ಉದ್ಘಾಟಿಸುವರು. ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಸಭಾಮಂಟಪ ಉದ್ಘಾಟಿಸುವರು. ಮಾಜಿ ಸಚಿವ ಪ್ರಮೋದ ಮಧ್ವರಾಜ ಸಮಾರಂಭ ಉದ್ಘಾಟಿಸುವರು. ಭೂದಾನಿಗಳಾದ ದಿ. ಚಂದ್ರಾಬಾಯಿ ಮಲಗುಂದ ಅವರ ಮಕ್ಕಳಾದ ಚಂದ್ರಶೇಖರ, ಮೋಹನ, ಪ್ರಭು, ಮಾಲತಿ, ಚಂದ್ರಕಲಾ ಅವರನ್ನು ಸನ್ಮಾನಿಸಲಾಗುತ್ತಿದೆ.

ಗಂಗಾಮತ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅನಂತವಿಕಾಸ ನಿಂಗೋಜಿ ಅಧ್ಯಕ್ಷತೆವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರದೀಪ ಶೆಟ್ಟರ, ಶಿವಕುಮಾರ ಉದಾಸಿ, ರಾಘವೇಂದ್ರ ತಹಶೀಲ್ದಾರ, ಮಂಜುನಾಥ ಮತ್ತೂರ, ಬಿ.ವಾಯ್. ಬಂಡಿವಡ್ಡರ, ಭೋಜರಾಜ ಕರೂದಿ, ಲಕ್ಮೀ ನಾರಾಯಣಗೌಡ ಪಾಟೀಲ, ಪರಶುರಾಮ ಸೊನ್ನದ, ಪ್ರದೀಪ ಶೇಷಗಿರಿ, ಬಾಸ್ಕರ ಹುಲಮನಿ ಪಾಲ್ಗೊಳ್ಳುವರು ಎಂದು ಅನಂತ ವಿಕಾಸ ನಿಂಗೋಜಿ ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಅಶೋಕ ಆರೆಗೊಪ್ಪ, ಭಾಸ್ಕರ ಹುಲಮನಿ, ಮೈಲಾರೆಪ್ಪ ಶೇಷಗಿರಿ, ಸುರೇಶ ಪೂಜಾರ, ರವಿರಾಜ ಹುಲ್ಲಕ್ಕನವ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿನ ನುಡಿ, ಜಲ, ನೆಲ, ಸಂಸ್ಕೃತಿ ಕಾಪಾಡುವುದು ಕಸಾಪ ಕೆಲಸ: ಸುರೇಶ ಕಲ್ಲೊಳಿ
ನೂತನ ಶಾಖೆಯ ಅಭಿವೃದ್ಧಿಗೆ ಸಹಕಾರ ನೀಡಿ: ಮಾದೇವ ನಾಯ್ಕ