ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ಆಡಳಿತ ಮಂಡಳಿಯ 11 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರ ಮೈತ್ರಿಕೂಟದ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆದು ಮೈತ್ರಿಕೂಟ ಬೆಂಬಲಿತರಾದ ಕಂಬರಾಜು, ಎಂ.ರಘು ಕುಮಾರ್, ಎಂ.ಆರ್.ಪ್ರಸಾದ್, ಮೊಗಣ್ಣ, ಗುರುಸಿದ್ದಯ್ಯ, ಪೂರ್ಣಿಮಾ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಉಮೇಶ್, ನಾಗಮ್ಮ, ಶ್ವೇತ, ಪುಟ್ಟಸ್ವಾಮಿ ಹಾಗೂ ಶಿವಕುಮಾರ್ ಗೆಲುವು ಸಾಧಿಸಿದ್ದಾರೆ. ಮೈತ್ರಿಕೂಟದ ಮೇಲುಗೈ ಸಾಧಿಸಿದ ಹಿನ್ನೆಲೆಯಲ್ಲಿ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದವು. ಮುಂದಿನ ದಿನಗಳಲ್ಲಿ ಸಹಕಾರ ಸಂಘದ ಅಭಿವೃದ್ಧಿಗೆ ಆಡಳಿತ ಮಂಡಳಿ ಮುಂದಾಗಲಿದೆ ಎಂದರು.ನೂತನ ನಿರ್ದೇಶಕ ಕಂಬರಾಜು ಮಾತನಾಡಿ, ಚುನಾವಣಾ ಮುನ್ನದ ಮಾತುಕತೆಯಂತೆ ನಡೆದುಕೊಳ್ಳುತ್ತೇವೆ. ನನಗೆ ಮತ ನೀಡಿದ ಮತದಾರರ ಹಾಗೂ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಮುಖಂಡ ಮಂಜಣ್ಣ ಮಾತನಾಡಿ, ಎಲ್ಲರ ಸಹಕಾರದಿಂದ ಗೆಲುವು ಸಾಧಿಸಿದ್ದೇವೆ. ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.ಈ ವೇಳೆ ಪುರಸಭೆ ಸದಸ್ಯ ನಾಗೇಶ್, ಮುಖಂಡರಾದ ಮಾದೇಶ್, ನಾರಾಯಣ, ಉಮೇಶ್, ಬಿಜೆಪಿಯ ವೇಣು, ರಾಜೀವ್, ದೇವರಾಜು, ಸ್ವಾಮಿ, ಶಿವಕುಮಾರ್, ಕೃಷ್ಣಮೂರ್ತಿ, ಮನೋಜ್, ಪ್ರೆಸ್ ಲೋಕಿ, ಚಂದ್ರು, ರಮೇಶ್ ಪಾಲ್ಗೊಂಡಿದ್ದರು.
ಅಂಬೇಡ್ಕರ್ ಜಯಂತೋತ್ಸವ ಬಹಿಷ್ಕಾರ ಎಚ್ಚರಿಕೆಮಂಡ್ಯ: ನೂರಡಿ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ನಾಮಫಲಕ ಹಾಕುವಂತೆ ಆಗ್ರಹಿಸುತ್ತಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಆಚರಿಸುತ್ತಿರುವ ಅಂಬೇಡ್ಕರ್ ಜಯಂತಿಯನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ಸ್ವಾಭಿಮಾನಿ ಸಮ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನಗರದಲ್ಲಿ ನೀರಿನ ಟ್ಯಾಂಕ್ ವೃತ್ತದಿಂದ ಬೆಸಗರಹಳ್ಳಿ ವೃತ್ತದವರೆಗೆ ಇರುವ ರಸ್ತೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮಾಡುವಂತೆ ಆಗ್ರಹಿಸಿ 1976ರಲ್ಲಿ ನಿರ್ಣಯ ಮಾಡಿದ್ದರೂ ಕ್ರಮವಹಿಸಿಲ್ಲ ಎಂದು ಕಿಡಿಕಾರಿದ್ದಾರೆ. ವಾಟರ್ ಟ್ಯಾಂಕ್ ಬಳಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎಂದು ನಾಮಫಲಕ ಹಾಕಿದ್ದು, ಅದರ ಮುಂದುವರಿದ ಭಾಗವಾಗಿ ಎರಡು ಜೋಡಿ ರಸ್ತೆಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡುವುದು/ಬರೆಸುವುದು ಫಲಕ ಹಾಕುವುದು ಮಾಡಿಲ್ಲ ಎಂದು ದೂರಿದ್ದಾರೆ.ಈ ಬಗ್ಗೆ ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರೂ ಇದುವರೆಗೂ ಕ್ರಮಮಕೈಗೊಂಡಿಲ್ಲ. ನಗರಸಭೆ ಪ್ರತಿನಿಧಿಗಳು, ಅಧಿಕಾರಿಗಳು ಈಸಮಸ್ಯೆ ಬಗ್ಗೆ ಹರಿಸಿಲ್ಲ. ಈ ಬಗ್ಗೆ ಸ್ಪಷ್ಟ ತೀರ್ಮಾನ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಮನವಿ ಪತ್ರದಲ್ಲಿ ದಸಂಸ ಮುಖಂಡ ಎಂ.ವಿ.ಕೃಷ್ಣ, ಗಂಗರಾಜ್ ಸೇರಿದಂತೆ ಹಲವರು ಸಹಿ ಹಾಕಿ ಒತ್ತಾಯಿಸಿದ್ದಾರೆ.