ಕನ್ನಡಪ್ರಭ ವಾರ್ತೆ, ತುಮಕೂರು
ತಮ್ಮ ಭೇಟಿಗಾಗಿ ಕಾದು ಕುಳಿತಿದ್ದ ವಿಕಲಚೇತನ ಗಂಗರಾಜು ಅವರನ್ನು ಕಂಡ ಸಚಿವರು ಗಂಗರಾಜು ಮನವಿ ಸ್ವೀಕರಿಸಿ ವಿಚಾರಿಸಿದರು.
ಹುಟ್ಟುವಾಗಲೇ ಶೇ.80ರಷ್ಟು ಅಂಗವೈಕಲ್ಯ ಹೊಂದಿರುವ ಗಂಗರಾಜು ಅವರು ತುಮಕೂರು ತಾಲೂಕು ಕೋರ ಹೋಬಳಿ ಅರಕೆರೆ ಗ್ರಾಮ ಪಂಚಾಯತಿ ಹೊಸಹಳ್ಳಿ ಗ್ರಾಮದಲ್ಲಿ 20 x 15 ಜಾಗದಲ್ಲಿ 20 ವರ್ಷಗಳಿಂದ ಅಂಗಡಿಯನ್ನಿಟ್ಟುಕೊಂಡು ಬದುಕಿಗಾಗಿ ಆಸರೆ ಪಡೆದುಕೊಂಡಿದ್ದೇನೆ. ಸದರಿ ಜಾಗವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಪರಮೇಶ್ವರ್ ಸ್ಥಳದಲ್ಲಿದ್ದ ಜಿಪಂ ಸಿಇಒಗೆ ಕೂಡಲೇ ಕ್ರಮ ಕೈಗೊಂಡು ವರದಿ ನೀಡಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಉಪಸ್ಥಿತರಿದ್ದರು.