ಗಂಗಾವತಿ ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಪ್ರತಿ 3 ವರ್ಷಕ್ಕೆ ಒಂದು ಬಾರಿಯಂತೆ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಡಿ. 19,20,21ರಂದು ಜಾತ್ರೆ ನಡೆಸಲು ತಿರ್ಮಾನಿಸಲಾಗಿದೆ.
ಗಂಗಾವತಿ:
ನಗರದ ದುರ್ಗಾದೇವಿ ದೇವಸ್ಥಾನದ ಸಭಾಂಗಣದಲ್ಲಿ ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ 18 ಸಮಾಜದವರ ಪೂರ್ವಭಾವಿ ಸಭೆ ಸೋಮವಾರ ನಡೆಯಿತು. ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಮಾತನಾಡಿ, ಗ್ರಾಮದೇವತೆ ದುರ್ಗಾದೇವಿಯ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ಪ್ರತಿ 3 ವರ್ಷಕ್ಕೆ ಒಂದು ಬಾರಿಯಂತೆ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಡಿ. 19,20,21ರಂದು ಜಾತ್ರೆ ನಡೆಸಲು ತಿರ್ಮಾನಿಸಲಾಗಿದೆ ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಗ್ರಾಮ ದೇವತೆಯ ಜಾತ್ರೆಯನ್ನು ಸಂಪ್ರದಾಯದಂತೆ ಅದ್ಧೂರಿಯಾಗಿ ಆಚರಿಸಲಾಗುವುದು. ಜಾತ್ರೆಯ ಅಂಗವಾಗಿ ದೇವಿಮೂರ್ತಿ ಮೆರವಣಿಗೆ, ದೇವಿ ಹೂಡಿ ತುಂಬುವುದು, ಗಂಗಾ ಪೂಜೆ, ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿವೆ. 18 ಸಮಾಜದವರು ಅಲ್ಲದೆ ಗಂಗಾವತಿಯ ಸರ್ವ ಸಮಾಜದವರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಕೃಷ್ಣಪ್ಪ, ಗೀತಾ ವಿಕ್ರಮ್, ಅಮರಜ್ಯೋತಿ ನರಸಪ್ಪ, ಅಶೋಕಪ್ಪ, ಅಮರಜ್ಯೋತಿ ವೆಂಕಟೇಶ, ಶರಣೇಗೌಡ, ಗಾಲಿ ರುದ್ರಪ್ಪ, ಸಿಂಗನಾಳ ಜಗದೀಶಪ್ಪ, ವೀರಭದ್ರಪ್ಪ ನಾಯಕ, ರಾಮಣ್ಣ, ಜೋಗದ, ಹನುಮಂತಪ್ಪ ನಾಯಕ, ತುಳಸಪ್ಪ, ರಾಜಶೇಖರಪ್ಪ ಮುಸ್ಟೂರು, ಯಮನೂರಪ್ಪ ಹುಲಗಿ ಇದ್ದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.