ಚನ್ನಪಟ್ಟಣ: ಡಿಸೆಂಬರ್ ೬ರಿಂದ ಜ.೧೫ರವರೆಗೆ ಒಂದು ತಿಂಗಳ ಕಾಲ ವಿವಿಧ ಹಂತದ ಹಲವು ಕಾರ್ಯಕ್ರಮಗಳಿಂದ ಅದ್ಧೂರಿಯಾಗಿ ಬೊಂಬೆನಾಡು ಗಂಗೋತ್ಸವ ಆಚರಿಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕ್ರೀಡೆ, ಕಲೆ, ಸಾಹಿತ್ಯ, ಗುಡಿ ಕೈಗಾರಿಕೆ, ನಾಟಕಗಳಿಗೆ ಪ್ರೋತ್ಸಾಹ ಸೇರಿದಂತೆ ರೈತರು, ಕ್ರೀಡಾಪಟುಗಳು, ಕಲಾವಿದರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಉತ್ತೇಜನ ನೀಡುವ ನಿಟ್ಟಿನಲ್ಲಿ ಬೊಂಬೆನಾಡು ಗಂಗೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗಂಗರ ಕಾಲದ ರಾಜದಾನಿಯಾಗಿದ್ದ ತಾಲೂಕಿನ ಮುಕುಂದ ಗ್ರಾಮ ಇತಿಹಾಸದ ಕುರುಹನ್ನು ಸ್ಮರಿಸುವ ನಿಟ್ಟಿನಲ್ಲಿ ಕನಕೋತ್ಸವದ ಮಾದರಿಯಲ್ಲಿ ಗಂಗೋತ್ಸವ ಆಚರಿಸಲಾಗುವುದು.
ಬೊಂಬೆನಾಡು ಗಂಗೋತ್ಸವಕ್ಕೆ ಡಿ.೬ರಂದು ಶನಿವಾರ ಚಾಲನೆ ನೀಡಲಾಗುವುದು. ಅಂದು ತಾಲೂಕಿನ 5 ಜಿಲ್ಲಾ ಪಂಚಾಯತಿಯಲ್ಲಿ ಜಿಪಂ ವಾರು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ತಾಲೂಕು ಮಟ್ಟದ ಬಳಿಕ ಕನಕಪುರದಲ್ಲಿ ನಡೆಯುವ ಜಿಲ್ಲಾಮಟ್ಟದ ಕನಕೋತ್ಸವದಲ್ಲಿ ಜಿಲ್ಲಾಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಪಂದ್ಯದಲ್ಲಿ ಗೆದ್ದವರಿಗೆ ನಗದು ಬಹುಮಾನ ಹಾಗೂ ಕ್ರಿಕೆಟ್ ಕಿಟ್ ನೀಡಲಾಗುತ್ತದೆ ಎಂದು ತಿಳಿಸಿದರು.ಬೊಂಬೆನಾಡು ಗಂಗೋತ್ಸವ ಕೇವಲ ಕ್ರಿಕೆಟ್ ಪಂದ್ಯಾವಳಿಗೆ ಮಾತ್ರ ಸೀಮಿತವಲ್ಲ, ತಾಲೂಕಿನಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ಕಲೆ. ಸೇರಿದಂತೆ ದೇಹದಾರ್ಢ್ಯ ಕ್ರೀಡೆಯಲ್ಲಿ ಸಾಧನೆ ಮಾಡಿರುವ ನೂರಾರು ಕಲಾವಿದರಿದ್ದು ಅವರಿಗೆ ವೇದಿಕೆ ಕಲ್ಪಿಸುವ ಜೊತೆಗೆ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ತಾಲೂಕಿನಲ್ಲಿ ಕೃಷಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು, ತಾಲೂಕಿನಲ್ಲಿ ರೈತರು ಹಳ್ಳಿಕಾರ್ ತಳಿ ಸೇರಿದಂತೆ ವಿವಿಧ ತಳಿಗಳ ಸಾಕಾಣಿಕೆ ಮಾಡುತ್ತಿದ್ದು, . ಇವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಸುಗಳ ಪ್ರದರ್ಶನ ಆಯೋಜಿಸುವ ಜೊತೆಗೆ ಹಾಲು ಕರೆಯುವ ಸ್ಪರ್ಧೆಯನ್ನು ಆಯೋಜಿಸಿ ಪ್ರೋತ್ಸಾಹಲಾಗುವುದು ಎಂದರು. ಪ್ರತಿಭಾ ಪುರಸ್ಕಾರ ಮತ್ತು ಕಾರ್ಮಿಕರಿಗೆ ಗೌರವ: ತಾಲೂಕಿನ ಗ್ರಾಮೀಣ ಪ್ರತಿಭಾನ್ವಿತರಿಗೆ ಪುರಸ್ಕಾರ ನೀಡುವ ಜೊತೆಗೆ ಬೊಂಬೆ ಆಟಿಕೆಗಳ ತಯಾರಿಕೆಯಲ್ಲಿ ತಮ್ಮ ಕೈಚಳಕದ ಮೂಲಕ ತಾಲೂಕಿಗೆ ಹೆಸರು ತಂದಿರುವ ಗುಡಿ ಕೈಗಾರಿಕೆಯ ಕರಕುಶಲ ಕರ್ಮಿಗಳಿಗೆ ವೇದಿಕೆ ಕಲ್ಪಿಸಿ ಅವರ ನೈಪುಣ್ಯತೆಯನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪ್ರಮೋದ್, ಹಾಪ್‌ಕಾಮ್ಸ್ ಅಧ್ಯಕ್ಷ ಶಿವಮಾದು, ನಗರ ಕಾಂಗ್ರೆಸ್ ಅಧ್ಯಕ್ಷ ಸುನೀಲ್, ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಸಾಗರ್, ಕುಕ್ಕುಟ ಮಹಾಮಂಡಳಿ ಮಾಜಿ ರಾಜ್ಯಾಧ್ಯಕ್ಷ ಡಿ.ಕೆ.ಕಾಂತರಾಜು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬೋರ್‌ವೆಲ್ ರಂಗನಾಥ್, ಕಾಂಗ್ರೆಸ್ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಕರುಣ್ ಎಂ.ಎ.ಆನಂದ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಯಶೀಲ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ವೀರೇಗೌಡ, ಮುಖಂಡರಾದ ಕೋಕಿಲರಾಣಿ, ಎಚ್.ಎಸ್. ಕಾಂತರಾಜು, ಲಾಯರ್ ಹನುಮಂತೇಗೌಡ ಇತರರಿದ್ದರು.ಬಾಕ್ಸ್.................
ನಾವೆಲ್ಲಾ ಒಗ್ಗಟ್ಟಾಗಿದ್ದೇವೆ: ಯೋಗೇಶ್ವರ್ರಾಜ್ಯ ರಾಜಕಾರಣದಲ್ಲಿ ಬ್ರೇಕ್ ಫಾಸ್ಟ್ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ "ನಮ್ಮಲ್ಲೇನು ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಆ ಬಗ್ಗೆ ಏನೂ ಕೇಳಬೇಡಿ " ಎಂದು ಶಾಸಕ ಯೋಗೇಶ್ವರ್ ಪ್ರತಿಕ್ರಿಯಿಸಿದರು. ನಾವು ಕೆಲವೊಂದು ಲಿಮಿಟ್ ಮಾಡಿಕೊಳ್ಳಬೇಕು. ಕಾಲು ಉದ್ದವಾಗಿದೆ ಅಂತ ವ್ಯಾಪ್ತಿ ಯಾಕೆ ದೊಡ್ಡದು ಮಾಡಿಕೊಳ್ಳಬೇಕು. ಸದ್ಯ ತಾಲೂಕಿನ ಕೆಲಸ ಮಾಡಿಕೊಂಡು ಹೋಗ್ತಿದ್ದೇನೆ. ನನಗೆ ನಾನೇ ಬೌಂಡರಿ ಹಾಕಿಕೊಂಡಿದ್ದೇನೆ. ನಮ್ಮನ್ನ ಯಾರೂ ಡೈವರ್ಟ್ ಮಾಡಬೇಡಿ ಎಂದರು.
ಪೊಟೋ೩ಸಿಪಿಟಿ೧:ಚನ್ನಪಟ್ಟಣದಲ್ಲಿ ಬೊಂಬೆನಾಡು ಗಂಗೋತ್ಸವ ಕುರಿತು ಶಾಸಕ ಯೋಗೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ದುಂತೂರು ವಿಶ್ವನಾಥ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್. ಆರ್. ಪ್ರಮೋದ್, ಹಾಪ್‌ಕಾಮ್ಸ್ ಅಧ್ಯಕ್ಷ ಶಿವಮಾದು, ನಗರ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಇತರರಿದ್ದರು.