ಕೆ.ಎಂ. ಮಂಜುನಾಥ್
ಕಳೆದ ವರ್ಷ ಬಳ್ಳಾರಿ ಜಿಲ್ಲೆ ಶೇ. 80.84ರಷ್ಟು ಫಲಿತಾಂಶ ಪಡೆದು ರಾಜ್ಯಮಟ್ಟದಲ್ಲಿ 31ನೇ ಸ್ಥಾನದಲ್ಲಿತ್ತು. ಈ ಬಾರಿ 28ನೇ ಸ್ಥಾನಕ್ಕೆ ಚೇತರಿಕೆ ಕಂಡಿದೆಯಾದರೂ ಫಲಿತಾಂಶ ಶೇ. 64.99ಕ್ಕೆ ಕುಸಿದಿದೆ.
ನಿರೀಕ್ಷೆಯಂತೆಯೇ ಜಿಲ್ಲೆಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಇಳಿಮುಖವಿದ್ದು, ಖಾಸಗಿ ಶಾಲೆಗಳು ಹೆಚ್ಚಿನ ಫಲಿತಾಂಶ ಪಡೆದಿವೆ. ವಿಷಯವಾರು ಫಲಿತಾಂಶದಲ್ಲಿ ತೃತೀಯ ಭಾಷೆಯಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ವಿಜ್ಞಾನ ವಿಷಯದಲ್ಲಿ ಕಡಿಮೆಯಾಗಿದೆ. ನಗರದ ಕೌಲ್ ಬಜಾರ್ ಪ್ರದೇಶದ ರಾಯಲ್ ಇಂಗ್ಲಿಷ್ ಮಾಧ್ಯಮ ಶಾಲೆಗೆ ಶೂನ್ಯ ಫಲಿತಾಂಶ ಬಂದಿದೆ.ಜಿಲ್ಲೆಯ ಟಾಪ್ 10 ಫಲಿತಾಂಶ ಪಡೆದ ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಾಗಿದ್ದು, ಶೇ. 98ರಷ್ಟು ಫಲಿತಾಂಶ ಪಡೆದಿರುವ ಸಂಡೂರು ತಾಲೂಕಿನ ಆದರ್ಶ ವಿದ್ಯಾಶಾಲೆಯ ವಿದ್ಯಾರ್ಥಿಯಾಗಿದ್ದಾನೆ.
ಸಂಡೂರು ತಾಲೂಕು ಅತಿಹೆಚ್ಚು (ಶೇ. 75.55)ರಷ್ಟು ಫಲಿತಾಂಶ ಪಡೆದರೆ, ಬಳ್ಳಾರಿ ಪೂರ್ವ ವಲಯಕ್ಕೆ (ಶೇ. 54.71) ಅತಿ ಕಡಿಮೆ ಫಲಿತಾಂಶ ಬಂದಿದೆ. ಸಿರುಗುಪ್ಪ ತಾಲೂಕು (ಶೇ. 69.93) ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಬಳ್ಳಾರಿ ಪಶ್ಚಿಮ ವಲಯ (ಶೇ. 62.89) ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಶೇ. 99ರಷ್ಟು ಫಲಿತಾಂಶ ಪಡೆದಿದ್ದು, ಏಳು ವಿದ್ಯಾರ್ಥಿಗಳು ಶೇ. 98ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದ್ದಾರೆ.
1) ಯು. ವೆಂಕಟ್ ರಾಹುಲ್- ರಾಜುಬಾಯಿ ಇಂಗ್ಲಿಷ್ ಮಾಧ್ಯಮ ಶಾಲೆ, ಕಮ್ಮಿಂಗ್ ರಸ್ತೆ, ಬಳ್ಳಾರಿ ಶೇ. 99
3) ಡಿ. ಮಣಿಕಂಠ- ಎಸ್‌ಇಎಸ್ ಇಂಗ್ಲಿಷ್ ಮಾಧ್ಯಮ ಶಾಲೆ, ಸಿರುಗುಪ್ಪ ಶೇ. 99
5) ಜಿ. ರೇಷ್ಮಾ- ರಾಜುಬಾಯಿ ಇಂಗ್ಲಿಷ್ ಮಾಧ್ಯಮ ಶಾಲೆ, ಕಮ್ಮಿಂಗ್ ರಸ್ತೆ, ಬಳ್ಳಾರಿ ಶೇ. 98
7) ಜಿ. ಕೀರ್ತಿ- ವೆಂಕಯ್ಯ ಪ್ರೌಢಶಾಲೆ, ಎಮ್ಮಿಗನೂರು, ಕಂಪ್ಲಿ ತಾಲೂಕು ಶೇ. 98
9) ಅರುಣ್- ಆರ್‌ಎಸ್‌ಜಿ ಶ್ರೀ ವಾಸವಿ ಶಾಲೆ, ಇನ್‌ಫ್ಯಾಂಟ್ರಿ ರಸ್ತೆ, ಬಳ್ಳಾರಿ ಶೇ. 98
10) ಎಚ್. ಸುದೀಪ್- ಆದರ್ಶ ವಿದ್ಯಾಲಯ (ಆರ್‌ಎಂಎಸ್‌ಎ), ಸಂಡೂರು ಶೇ. 98 ಬಳ್ಳಾರಿ ಜಿಲ್ಲೆಯ ತಾಲೂಕುವಾರು ಫಲಿತಾಂಶ:1) ಸಂಡೂರು ಶೇ.75.55
2) ಸಿರುಗುಪ್ಪ ಶೇ.69.933) ಬಳ್ಳಾರಿ ಪಶ್ಚಿಮ ಶೇ.62.89
4) ಬಳ್ಳಾರಿ ಪೂರ್ವ ಶೇ.54.71ವಿಷಯವಾರು ಫಲಿತಾಂಶ:
1) ಪ್ರಥಮ ಭಾಷೆ ಶೇ.772) ದ್ವಿತೀಯ ಭಾಷೆ ಶೇ.73
3) ತೃತೀಯ ಭಾಷೆ ಶೇ.784) ಗಣಿತ ಶೇ.70
5) ವಿಜ್ಞಾನ ಶೇ.676) ಸಮಾಜ ವಿಜ್ಞಾನ ಶೇ.74
ಈ ಬಾರಿ ನೈಜ ಫಲಿತಾಂಶ ಬಂದಿದೆ. ಜಿಲ್ಲಾಡಳಿತ, ಜಿಪಂ ಸಿಇಒ ನಿರಂತರ ಪ್ರಯತ್ನದ ಫಲವಾಗಿ ಜಿಲ್ಲೆ ರಾಜ್ಯಮಟ್ಟದ ಸ್ಥಾನದಲ್ಲಿ ಒಂದಷ್ಟು ಸುಧಾರಿಸಿದೆ. ಈ ವರ್ಷ ಫಲಿತಾಂಶ ಮತ್ತಷ್ಟು ಉತ್ತಮಗೊಳಿಸುವ ದಿಸೆಯಲ್ಲಿ ಕೆಲಸ ಮಾಡುತ್ತೇವೆ. ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿದ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಹೇಳುವೆ ಎನ್ನುತ್ತಾರೆ ಬಳ್ಳಾರಿ ಡಿಡಿಪಿಐ ಉಮಾದೇವಿ.