ಬಾಡಿಗೆ ಮನೆ ಟೆರೆಸ್‌ ಮೇಲೆ ಗಾಂಜಾ ಬೆಳೆದ ಭೂಪ

KannadaprabhaNewsNetwork | Published : Oct 17, 2023 12:45 AM

ಸಾರಾಂಶ

ಬಾಡಿಗೆ ಮನೆ ಟೆರೆಸ್‌ ಮೇಲೆ ಗಾಂಜಾ ಬೆಳೆದ ಭೂಪ
ಕನ್ನಡಪ್ರಭ ವಾರ್ತೆ ಬೆಳಗಾವಿ ಬಾಡಿಗೆ ಮನೆಯ ಛಾವಣಿ (ಟೆರೆಸ್‌) ಮೇಲೆ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿ, ಆತನಿಂದ ₹48600 ಮೌಲ್ಯದ ಗಾಂಜಾ ಹಾಗೂ ಗಾಂಜಾ ಬೀಜಗಳ ವಶಕ್ಕೆ ಪಡೆದಿದ್ದಾರೆ. ನಗರದ ವಡಗಾಂವಿ ಪ್ರದೇಶದ ಸೋನಾರ ಗಲ್ಲಿಯ ನಿವಾಸಿ ರೋಹನ್ ಮಹಾದೇವ ಪಾಟೀಲ(23) ಬಂಧಿತ. ಈತ ವಡಗಾಂವಿ ಪ್ರದೇಶದ ರಾಮದೇವಗಲ್ಲಿ ಹಾಗೂ ಸೋನಾರ ಗಲ್ಲಿಯಲ್ಲಿ ಗಾಂಜಾ ಮಾರುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಬಳಿಕ ಮನೆಯಲ್ಲಿ ಪರಿಶೀಲಿಸಿದ ವೇಳೆ ಪೊಲೀಸರೇ ಹೌಹಾರಿದ್ದಾರೆ. ಅಕ್ರಮವಾಗಿ ಮನೆಯ ಟೆರೆಸ್‌ ಮೇಲೆ ಗಾಂಜಾ ಬೆಳೆಯುತ್ತಿರುವುದು ಬೆಳಕಿಗೆ ಬಂದಿದೆ. ಮನೆಯ ಟೆರೆಸ್‌ನಲ್ಲಿ ಬೆಳೆದಿದ್ದ ₹45600 ಮೌಲ್ಯದ 23 ಗಾಂಜಾ ಗಿಡ ಹಾಗೂ ಮನೆಯಲ್ಲಿಟ್ಟದ್ದ ₹3000 ಮೌಲ್ಯದ 60 ಗ್ರಾಂ.ಗಾಂಜಾ ಎಲೆ ಹಾಗೂ ಗಾಂಜಾ ಬೀಜಗಳು ಸೇರಿದಂತೆ ಒಟ್ಟು ₹48600 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಹಪೂರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article