ದೇವಿ ಯುವಕ ಸಂಘದ ಗಣಪತಿ ಬೃಹತ್ ಶೋಭಾಯಾತ್ರೆ: ವಿಸರ್ಜನೆ

KannadaprabhaNewsNetwork |  
Published : Oct 09, 2024, 01:40 AM IST
8 ಬೀರೂರು 1ಬೀರೂರಿನ ಕಟ್ಟೆಕೋಡಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿಯುವಕ ಸಂಘದಿAದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ವಿಸರ್ಜಿಸಲಾಯಿತು. ಶ್ರೀದೇವಿಯುವಕ ಸಂಘದ ಬಿ.ಎನ್.ಪ್ರಸನ್ನ ಕುಮಾರ್,ಬಿ.ಪಿ.ಪ್ರಭಾಕರ್, ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್ ಇದ್ದರು. | Kannada Prabha

ಸಾರಾಂಶ

ಬೀರೂರು, ಪಟ್ಟಣದ ಕಟ್ಟೆಕೋಡಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಶ್ರೀ ದೇವಿಯುವಕ ಸಂಘದಿಂದ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಕಳೆದ ಭಾನುವಾರ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ವಿವಿಧ ಪಟಾಕಿ ಸಿಡಿಸಿ ಸಮೀಪದ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.

ಕಟ್ಟೆಕೋಡಿ ಅಂತರ ಘಟ್ಟಮ್ಮ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿತ ಗಣಪತಿ

ಕನ್ನಡಪ್ರಭ ವಾರ್ತೆ ಬೀರೂರುಪಟ್ಟಣದ ಕಟ್ಟೆಕೋಡಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಶ್ರೀ ದೇವಿಯುವಕ ಸಂಘದಿಂದ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಕಳೆದ ಭಾನುವಾರ ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ವಿವಿಧ ಪಟಾಕಿ ಸಿಡಿಸಿ ಸಮೀಪದ ಬಾಕಿನಕೆರೆಯಲ್ಲಿ ವಿಸರ್ಜಿಸಲಾಯಿತು.ಕಳೆದ 29 ದಿನಗಳಿಂದ ಗಣಪತಿಗೆ ನಿತ್ಯವೂ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು. ಶನಿವಾರ ಬೆಳಗ್ಗೆ ಗಣಹೋಮ, ಪೂರ್ಣಾ ಹುತಿ, ಮಹಾಮಂಗಳಾರತಿ, ಗೋಲ್ಡನ್ ಬಾಯ್ಸ್ ಯಿಂದ ಹೂವಿನ ಅಲಂಕಾರ, ಸಂಜೆ ವಿಶೇಷ ಅನ್ನಸಂತರ್ಪಣೆ, ಕಾರ್ಯಕ್ರಮ ನಡೆಯಿತು.ಭಾನುವಾರ ಸಂಜೆ 4ಕ್ಕೆ ವಿಶೇಷ ಪೂಜೆ ನಡೆಸಿ ಗಣಪತಿಯ ಶೋಭಾಯಾತ್ರೆ ಆರಂಭವಾಯಿತು. ತಮಟೆ ವಾದ್ಯಗಳು, ಗೊಂಬೆಮೇಳ, ಕೇರಳದ ಆಕರ್ಷಕ ದುರ್ಗಿ ಕುಣಿತ, ದೇವರ ಕುಣಿತ ಮತ್ತು ಡಿಜೆ ಹಾಗೂ ವಿವಿಧ ಕಲಾತಂಡಗಳ ವೈಭವದೊಂದಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಮಹಾತ್ಮ ಗಾಂಧಿ ವೃತ್ತ ತಲುಪಿ, ಬಾರಿ ಸಿಡಿಮದ್ದು ಗಳನ್ನು ಪ್ರದರ್ಶಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ನಂತರ ಮೆರವಣಿಗೆ ಮಾರ್ಗದ ಕ್ಯಾಂಪ್ ಮೂಲಕ ಲಿಂಗದಹಳ್ಳಿ ರಸ್ತೆ ತಲುಪಿ ಸಮೀಪದ ಬಾಕಿನಕೆರೆಯಲ್ಲಿ ವಿದಿವಿಧಾನಗಳಿಂದ ವಿಸರ್ಜನೆ ಮಾಡಲಾಯಿತು.ಶೋಭಾಯಾತ್ರೆಯಲ್ಲಿ ಶ್ರೀದೇವಿ ಯುವಕ ಸಂಘದ ಬಿ.ಎನ್.ಪ್ರಸನ್ನ ಕುಮಾರ್, ಬಿ.ಪಿ.ಪ್ರಭಾಕರ್, ಪುರಸಭೆ ಸದಸ್ಯ ಬಿ.ಆರ್.ಮೋಹನ್ ಕುಮಾರ್, ಪದಾಧಿಕಾರಿಗಳಾದ ಪೋಟೋ ಮಧು, ಬಿರೇ ಶ್, ಸೂರಜ್, ಪ್ರದೀಪ್, ಚಂದ್ರಶೇಖರ್, ಮನು, ಪ್ರಕಾಶ್ ಹಾಗೂ ನೂರಾರು ಭಕ್ತರು ಸಮಿತಿ ಕಾರ್ಯಕರ್ತರು ಇದ್ದರು. 8 ಬೀರೂರು 1ಬೀರೂರಿನ ಕಟ್ಟೆಕೋಡಿ ಶ್ರೀ ಅಂತರಘಟ್ಟಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ದೇವಿಯುವಕ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ ವಿಸರ್ಜಿಸಲಾಯಿತು. ಶ್ರೀದೇವಿಯುವಕ ಸಂಘದ ಬಿ.ಎನ್.ಪ್ರಸನ್ನ ಕುಮಾರ್, ಬಿ.ಪಿ.ಪ್ರಭಾಕರ್, ಪುರಸಭೆ ಸದಸ್ಯ ಬಿ.ಆರ್. ಮೋಹನ್ ಕುಮಾರ್ ಇದ್ದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ