ಕಸ ಸಂಗ್ರಹಣೆ: ಎರಡು ಬೊಲೆರೋ ವಾಹನಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

KannadaprabhaNewsNetwork |  
Published : Jun 16, 2025, 12:47 AM IST
15ಕೆಎಂಎನ್ ಡಿ28 | Kannada Prabha

ಸಾರಾಂಶ

ಸ್ವಚ್ಛ ಭಾರತ್ ಮಿಷನ್ ಯೋಜನೆಯಿಂದ 26 ಲಕ್ಷ ರು. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಗೆ ಎರಡು ಬೊಲೆರೋ ವಾಹನ ಖರೀದಿಸಿದ್ದು, ಹಸಿ ಹಾಗೂ ಒಣ ಕಸವನ್ನು ಮನೆಯಲ್ಲೇ ವಿಂಗಡಿಸಿ ಪಟ್ಟಣದ ನಾಗರಿಕರು ಕಸವನ್ನು ಕೊಟ್ಟರೆ ಕಸ ವಿಲೇವಾರಿ ಮಾಡಲು ಸುಲಭವಾಗಲಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸ್ಥಳೀಯ ಪುರಸಭೆಯಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆ ಅನುದಾನದಡಿ ಖರೀದಿಸಲಾದ ಕಸ ಸಂಗ್ರಹಣೆಯ ಎರಡು ಬೊಲೆರೋ ವಾಹನಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಸ್ವಚ್ಛ ಭಾರತ್ ಮಿಷನ್ ಯೋಜನೆಯಿಂದ 26 ಲಕ್ಷ ರು. ವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆಗೆ ಎರಡು ಬೊಲೆರೋ ವಾಹನ ಖರೀದಿಸಿದ್ದು, ಹಸಿ ಹಾಗೂ ಒಣ ಕಸವನ್ನು ಮನೆಯಲ್ಲೇ ವಿಂಗಡಿಸಿ ಪಟ್ಟಣದ ನಾಗರಿಕರು ಕಸವನ್ನು ಕೊಟ್ಟರೆ ಕಸ ವಿಲೇವಾರಿ ಮಾಡಲು ಸುಲಭವಾಗಲಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯಾಗಿತ್ತು. ಹೀಗಾಗಿ ಸಾಮಾನ್ಯ ಸಭೆಯಲ್ಲಿ ವಾಹನ ಖರೀದಿಸಲು ತೀರ್ಮಾನಿಸಿ ಎರಡು ವಾಹನಗಳನ್ನು ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವರಿ ಅನುದಾನ ತಂದು ಕಸ ಸಂಗ್ರಹಣೆಗೆ ಮತ್ತಷ್ಟು ವಾಹನಗಳನ್ನು ಖರೀದಿಸಲಾಗುವುದು. ಜತೆಗೆ ಯಾವ ವಾರ್ಡ್ ಯಾವ ದಿನ ಕಸಸಂಗ್ರಹಣೆ ಮಾಡಲು ರೂಟ್ ಮ್ಯಾಪ್ ಹಾಕಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು, ಉಪಾಧ್ಯಕ್ಷ ಎಲ್.ಅಶೋಕ್, ಮುಖ್ಯಾಧಿಕಾರಿ ಸತೀಶ್, ಸದಸ್ಯರಾದ ಪಾರ್ಥಸಾರಥಿ, ಕೆ.ಉಮಾಶಂಕರ್, ಜಯಲಕ್ಷ್ಮಮ್ಮ, ಶಿವಕುಮಾರ್, ಯಶವಂತ್ (ದಿಲೀಪ್), ಚಂದ್ರು, ಪಿ.ಶಿವಣ್ಣ, ಸರ್ಕಾರರ ನಾಮ ನಿರ್ದೇಶನ ಸದಸ್ಯರಾದ ಹಾರೋಹಳ್ಳಿ ಲಕ್ಷ್ಮೇಗೌಡ,ಎಂ.ಮುರಳೀಧರ್, ಮಹ್ಮದ್ ಹನೀಫ್, ಎಂಜನಿಯರ್ ಚೌಡಪ್ಪ, ಆರೋಗ್ಯ ನಿರೀಕ್ಷಕಿ ಧನಲಕ್ಷ್ಮೀ, ಸಿಬ್ಬಂದಿ ಮಣಿಪ್ರಸಾದ್, ನಾಗೇಶ್, ನರಸಿಂಹ, ಮಧು, ಮುಖಂಡರಾದ ಬಂಕ್ ಶ್ರೀನಿವಾಸ್, ಹಿರೇಮರಳಿ ಮಲ್ಲಿಕಾರ್ಜುನಗೌಡ, ಚಿಕ್ಕಾಡೆ ಶ್ರೀನಿವಾಸ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ