ಫೋನ್‌ಇನ್‌ನಲ್ಲಿ ಕಸದ ಸಮ್ಯಸ್ಯೆಗಳದ್ದೇ ಸದ್ದು!

KannadaprabhaNewsNetwork |  
Published : Oct 28, 2026, 03:30 AM IST
CM Meeting 2 | Kannada Prabha

ಸಾರಾಂಶ

ಉತ್ತರ ಪಾಲಿಕೆಯಲ್ಲಿ ಮಂಗಳವಾರ ನಡೆದ ಕಸ ಸಂಗ್ರಹಣೆ ಕುರಿತ ಫೋನ್‌ಇನ್ ಕಾರ್ಯಕ್ರಮದಲ್ಲಿ ಹಲವು ಸಾರ್ವಜನಿಕರು ಕಸ ಸಂಗ್ರಹಿಸುವ ವಾಹನಗಳೇ ಬರುತ್ತಿಲ್ಲ, ಪಾಲಿಕೆ ಎಷ್ಟೇ ಪ್ರಯತ್ನಿಸಿದರೂ ಜನರು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ. ನಿವೇಶನಗಳನ್ನ ಕಸ ಸುರಿಯುವ ಸ್ಥಳಗಳಾಗಿಸಿಕೊಂಡಿದ್ದಾರೆ ಎಂಬ ಸಮಸ್ಯೆಗಳನ್ನೇ ಹೆಚ್ಚಾಗಿ ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉತ್ತರ ಪಾಲಿಕೆಯಲ್ಲಿ ಮಂಗಳವಾರ ನಡೆದ ಕಸ ಸಂಗ್ರಹಣೆ ಕುರಿತ ಫೋನ್‌ಇನ್ ಕಾರ್ಯಕ್ರಮದಲ್ಲಿ ಹಲವು ಸಾರ್ವಜನಿಕರು ಕಸ ಸಂಗ್ರಹಿಸುವ ವಾಹನಗಳೇ ಬರುತ್ತಿಲ್ಲ, ಪಾಲಿಕೆ ಎಷ್ಟೇ ಪ್ರಯತ್ನಿಸಿದರೂ ಜನರು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದಾರೆ. ನಿವೇಶನಗಳನ್ನ ಕಸ ಸುರಿಯುವ ಸ್ಥಳಗಳಾಗಿಸಿಕೊಂಡಿದ್ದಾರೆ ಎಂಬ ಸಮಸ್ಯೆಗಳನ್ನೇ ಹೆಚ್ಚಾಗಿ ದೂರಿದ್ದಾರೆ.

ಕಸ ಸಮಸ್ಯೆಗಳಿಗೆಂದೇ ಮೀಸಲಾಗಿದ್ದ 2 ಗಂಟೆಗಳ ಫೋನ್ ಇನ್ ಕಾರ್ಯಕ್ರಮದಲ್ಲಿ 19 ಮಂದಿ ಸಾರ್ವಜನಿಕರು ದೂರಿದ್ದೂ ಕೂಡಲೆ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ. ಇದಲ್ಲದೆ, ಪಾಲಿಕೆಯ ಕೆಲವು ರಸ್ತೆಗಳಲ್ಲಿ ಕಸ ಗುಡಿಸುವುದೇ ಇಲ್ಲ. ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಬಿದ್ದಿರುತ್ತದೆ. ಅದನ್ನು ಯಾರೂ ನೋಡುತ್ತಿಲ್ಲ. ಇದರಿಂದ ರೋಗರುಜಿನಗಳು ಬರುತ್ತದೆ. ಅಕ್ಕಪಕ್ಕದ ಮನೆಗಳಿಗೆ ಅನಾರೋಗ್ಯ, ಸ್ವಚ್ಛತೆ ಇಲ್ಲದೆ, ಇರುವುದು, ಇದೇ ಕಸ ಮಳೆ ಬಂದರೆ ಒಳಚರಂಡಿ ಸೇರಿ ರಸ್ತೆಯಲ್ಲೆಲ್ಲಾ ನೀರು ಹರಿಯುತ್ತಿದೆ ಎಂದು ದೂರಿದರು.

ಈ ಸಂಬಂಧ ಸಾರ್ವಜನಿಕರಿಗೆ ಉತ್ತರಿಸಿದ ಉಪ ಆಯುಕ್ತ ಸೋಮಶೇಖರ್, ಡಿಜಿಎಂ ರಶ್ಮಿ ಅವರು ಪಾಲಿಕೆಯ ಕಸ ಸಂಗ್ರಹಿಸುವ ಗುತ್ತಿಗೆದಾರರನ್ನು ವಿಚಾರಿಸಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮಕೈಗೊಂಡು ಸಮಸ್ಯೆ ಪರಿಹರಿಸಲು ಯತ್ನಿಸುವುದಾಗಿ ತಿಳಿಸಿದರು.

ಸ್ವೀಕೃತವಾದ 19 ಅಹವಾಲುಗಳಲ್ಲಿ ಕಸ ಸಂಗ್ರಹಣೆ ವಾಹನ ಆಗಮಿಸದಿರುವುದು 7, ಎಲ್ಲೆಂದರಲ್ಲಿ ಕಸ ಸುರಿಯುವುದು 5, ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು 2, ರಸ್ತೆ ಗುಡಿಸುವ ಕಾರ್ಯ ಕೈಗೊಳ್ಳದಿರುವುದು 4, ಘನತ್ಯಾಜ್ಯ ನಿರ್ವಹಣಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕಸ ಸಂಗ್ರಹಣೆ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಒಂದು ದೂರು ದಾಖಲಾಗಿದೆ. ಪಾಲಿಕೆ ವ್ಯಾಪ್ತಿಯ 7 ವಿಭಾಗಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್ ಅನುಷ್ಠಾನಗೊಳಿಸಲಾಗುತ್ತಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಆಟೋ ಟಿಪ್ಪರ್‌ಗಳ ಮಾರ್ಗ ನಿಗದಿ, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ನಿರ್ವಹಣೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ: ಸೀಮಂತ್‌