ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದ ವಾಹನ ನಿಲುಗಡೆ ಸ್ಥಳದಲ್ಲಿ ದಿನದಿಂದ ದಿನಕ್ಕೆ ಕಸದ ರಾಶಿ ಬೀಳುತ್ತಿದ್ದು, ಇದನ್ನು ಸ್ವಚ್ಛಗೊಳಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕುಡಿಯಲು ನೀರಿಲ್ಲ, ಸ್ನಾನಕ್ಕೆ ಉಪ್ಪು ನೀರು: ಇನ್ನೂ ಒಂದು ಚಿಕ್ಕ ವಾಹನಕ್ಕೆ ಇಪ್ಪತ್ತು ಹಾಗೂ ಸ್ವಚ್ಛತಾ ಫೀ ₹10 ಸೇರಿ ₹30 ಕೊಟ್ಟ ಪ್ರವಾಸಿಗ ಶುದ್ಧ ಕುಡಿಯುವ ನೀರು ಹುಡುಕಿದರೆ ಹಾಳಾದ ಘಟಕ ಕಣ್ಣಿಗೆ ಬೀಳುತ್ತದೆ. ಆನಂತರ ಅಂಗಡಿಗೆ ಹೋಗಿ ಹಣ ಕೊಟ್ಟು ನೀರು ಪಡೆಯಬೇಕಿದೆ. ಇನ್ನೂ ಸಮುದ್ರ ಸ್ನಾನ ಮಾಡಿ ಇಲ್ಲಿರುವ ಸುಲಭ ಶೌಚಾಲಯ ಹಾಗೂ ಸ್ನಾನಗೃಹದಲ್ಲಿ ಸ್ನಾನಕ್ಕೆ ಬಂದರೆ ಪ್ರವಾಸಿಗರಿಗೆ ಉಪ್ಪು ನೀರು ದೊರೆಯುತ್ತಿದೆ. ರಾತ್ರಿಯಾದರೆ ಈ ಭಾಗದಲ್ಲಿ ಕತ್ತಲೆಯ ಕೂಪವಾಗಿದ್ದು, ಟಾರ್ಚ್ ಹಿಡಿದು ಅತ್ತಿತ್ತ ಅಲೆದಾಡುವ ಪರಿಸ್ಥಿತಿ ಇದೆ. ಕಳ್ಳರ ಭಯವು ಇದೆ. ಹೀಗೆ ಲಕ್ಷಾಂತರ ರುಪಾಯಿ ಆದಾಯ ಬಂದರೂ ಸೌಲಭ್ಯಗಳು ಮಾತ್ರ ಶೂನ್ಯವಾಗಿದೆ. ಪಾರ್ಕಿಂಗ್ ಟೆಂಡರ್ ಪಡೆದವರಿಗೆ ಸ್ವಚ್ಛತಾ ಸಿಬ್ಬಂದಿ ನೇಮಿಸುವಂತೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಸೂಚಿಸಿ, ಕಡಲತೀರದಲ್ಲಿ ರಾಶಿ ಬಿದ್ದ ಕಸ ತೆಗೆಯಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೋಕರ್ಣ ಪಿಡಿಒ ವಿನಯಕುಮಾರ ಹೇಳಿದರು.